ಭಾರತ vs ಇಂಗ್ಲೆಂಡ್: 1st ಟೆಸ್ಟ್ ದಿನ 3, Live ಸ್ಕೋರ್: ಸಂಕಷ್ಟದಲ್ಲಿ ಭಾರತ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತವನ್ನು ಸಾಧಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಭಾರತದ 6 ಪ್ರಮುಖ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ಭಾರತ 257 ರನ್ ಗಳಿಸಿದ್ದು 321 ರನ್‌ಗಳ ದೊಡ್ಡ ಹಿನ್ನಡೆಯಲ್ಲಿದೆ.
ಟೀಮ್ ಇಂಡಿಯಾ ಪರವಾಗಿ ಪ್ರಮುಖ ಆಟಗಾರರು ಅಗ್ಗಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ರೋಹಿತ್ ಶರ್ಮಾ, ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆಯಂತಾ ಆಟಗಾರರು ತೀರಾ ನೀರಸ ಪ್ರದರ್ಶನ ನೀಡಿ ಆಘಾತವನ್ನು ನೀಡಿದರು.
ಆದರೆ ರಿಷಬ್ ಪಂತ್ ಹಾಗೂ ಚೇತೇಶ್ವರ್ ಪೂಜಾರ ಶತಕದ ಜೊತೆಯಾಟವನ್ನು ನೀಡುವ ಮೂಲಕ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಇಬ್ಬರೂ ತಲಾ ಅರ್ಧ ಶತಕವನ್ನು ದಾಖಲಿಸಿದರಾದರು ಕೂಡ ಶತಕವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು. ಪೂಜಾರ 73 ರನ್ ಗಳಿಸಿ ಔಟಾದರೆ, ಪಂತ್ 91 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 578 ರನ್ ಗಳಿಸಿ ಆಲೌಟ್ ಆಗಿದೆ. 8 ವಿಕೆಟ್ ಕಳೆದುಕೊಂಡಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್ ಇಂದು ತನ್ನ ಅಂತಿಮ ಎರಡು ವಿಕೆಟ್ ಕಳೆದುಕೊಳ್ಳುವ ಮುನ್ನ 23 ರನ್‌ಗಳನ್ನು ಖಾತೆಗೆ ಸೇರಿಸಿಕೊಂಡಿದೆ. ಡಾಮಿನಿಕ್ ಬೆಸ್ ಬೂಮ್ರಾ ಎಲ್‌ಬಿ ಬಲೆಗೆ ಬಿದ್ದರೆ ಜೇಮ್ಸ್ ಆಂಡರ್ಸನ್ ಅಶ್ವಿನ್ ಎಸೆತಕ್ಕೆ ಬೌಲ್ಡ್ ಆಗುವ ಮೂಲಕ ಇನ್ನಿಂಗ್ಸ್ ಅಂತ್ಯಗೊಳಿಸಿದರು.
ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ ತನ್ನ 8 ವಿಕೆಟ್ ಕಳೆದುಕೊಂಡು 555 ರನ್ ಗಳಿಸಿತು. ಇಂಗ್ಲೆಂಡ್ ತಂಡದ ಪರವಾಗಿ ನೂರನೇ ಪಂದ್ಯವನ್ನು ಆಡುತ್ತಿರುವ ನಾಯಕ ಜೋ ರೂಟ್ ದ್ವಿಶತಕವನ್ನು ಸಿಡಿಸಿ ಮಿಂಚಿದರು. ಈ ಮೂಲಕ ಕಳೆದ ಮೂರು ಪಂದ್ಯಗಳಲ್ಲಿ ಶತಕ ಬಾರಿಸಿದ ಸಾಧನೆ ಮಾಡಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಸಿಡಿಸಿದ ಎರಡನೇ ದ್ವಿ ಶತಕವೂ ಇದಾಗಿದೆ. ಎರಡನೇ ದಿನದಾಟದಲ್ಲಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ರೂಟ್‌ಗೆ ಉತ್ತಮ ಸಾಥ್ ನೀಡಿ 82 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ.
ಟೀಮ್ ಇಂಡಿಯಾ ಪರವಾಗಿ ಬೌಲರ್‌ಗಳಾದ ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ, ಆರ್ ಅಶ್ವಿನ್ ಹಾಗೂ ಶಹ್ಬಾಜ್ ನದೀಮ್ ತಲಾ ಎರಡು ವಿಕೆಟ್ ಪಡೆದು ಮಿಂಚಿದ್ದಾರೆ. ಇಂಗ್ಲೆಂಡ್ ಈಗಾಗಲೇ ಬೃತ್ ಮೊತ್ತವನ್ನು ಪೇರಿಸಿದ್ದು ಭಾರತದ ಬೌಲಿಂಗ್ ವಿಭಾಗದ ಸವಾಲನ್ನು ದಿಟ್ಟವಾಗಿ ಎದುರಿಸಿದೆ.
Live ಸ್ಕೋರ್ ಪಟ್ಟಿ ಹೀಗಿದೆ:
ಟೀಮ್ ಇಂಡಿಯಾ ಆಡುವ ಬಳಗ: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಶಹಬಾಜ್ ನದೀಮ್, ಜಸ್ಪ್ರೀತ್ ಬೂಮ್ರಾ
ಇಂಗ್ಲೆಂಡ್ ಆಡುವ ಬಳಗ: ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಡೇನಿಯಲ್ ಲಾರೆನ್ಸ್, ಜೋ ರೂಟ್(ನಾಯಕ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಡೊಮಿನಿಕ್ ಬೆಸ್, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications