
ಭಾರತದ ಭರ್ಜರಿ ಬ್ಯಾಟಿಂಗ್
ಟಾಸ್ ಗೆದ್ದ ಪ್ರವಾಸಿ ಇಂಗ್ಲೆಂಡ್ ಭಾರತವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಭಾರತದ ಆರಂಭಿಕ ಆಟಗಾರರು ಅಗ್ಗಕ್ಕೆ ವಿಕೆಟ್ ಕಳೆದುಕೊಂಡರಾದರೂ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಜೋಡಿ ಶತಕದ ಜೊತೆಯಾಟವನ್ನು ನೀಡುವ ಮೂಲಕ ತಂಡವನ್ನು ಉತ್ತಮ ಮೊತ್ತದತ್ತ ಸಾಗಿಸಿದರು. ನಾಯಕ ವಿರಾಟ್ ಕೊಹ್ಲಿ 66 ರನ್‌ಗಳಿಸಿ ವಿಕೆಟ್ ಒಪ್ಪಿಸಿದ ಬಳಿಕ ಕೆಎಲ್ ರಾಹುಲ್‌ಗೆ ರಿಷಭ್ ಪಂತ್ ಜೊತೆಯಾದರು.

ರನ್‌ವೇಗ ಹೆಚ್ಚಿಸಿದ ಪಂತ್
ಪಂತ್ ಕ್ರೀಸ್‌ಗೆ ಬಂದ ಬಳಿಕ ಭಾರತದ ರನ್ ವೇಗ ಹೆಚ್ಚಾಯಿತು. ಸ್ಪೋಟಕ ಆಟವನ್ನು ಪ್ರದರ್ಶಿಸಿದ ಪಂತ್ ಏಕದಿನ ಕ್ರಿಕೆಟ್‌ನಲ್ಲಿ ತನ್ನ ವೈಯಕ್ತಿಕ ಅತಿ ಹೆಚ್ಚಿನ ರನ್ ಬಾರಿಸಿದರು. 40 ಎಸೆತ ಎದುರಿಸಿದ ಪಂತ್ 77 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಕೆಎಲ್ ರಾಹುಲ್ 114 ಎಸೆತಗಳಲ್ಲಿ 108 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 16 ಎಸೆತಗಳಲ್ಲಿ 35 ರನ್ ಬಾರಿಸಿದರೆ ಕೃನಾಲ್ 12 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್‌ಗೆ 337 ರನ್‌ಗಳ ಬೃಹತ್ ಮೊತ್ತವನ್ನು ಮುಂದಿಟ್ಟಿತು.

ಮತ್ತೊಂದು ಶತಕದ ಜೊತೆಯಾಟ ನೀಡಿದ ಇಂಗ್ಲೆಂಡ್ ಆರಂಭಿಕರು
ಭಾರತದ ಬೃಹತ್ ಮೊತ್ತವನ್ನು ಇಂಗ್ಲೆಂಡ್ ಆರಂಭಿಕರು ಭರ್ಜರಿಯಾಗಿಯೇ ಬೆನ್ನಟ್ಟಿದರು. ಮೊದಲ ವಿಕೆಟ್‌ಗೆ ಈ ಜೋಡಿ 16.3 ಓವರ್‌ಗಳಲ್ಲಿ 110 ರನ್‌ಗಳ ಜೊತೆಯಾಟವನ್ನು ನೀಡಿ ಇಂಗ್ಲೆಂಡ್ ಪರ ದಾಖಲೆ ನಿರ್ಮಿಸಿತು. ಬಳಿಕ ರೋಹಿತ್ ಶರ್ಮಾ ಮಾಡಿದ ಅದ್ಭುತ ಫೀಲ್ಡಿಂಗ್‌ಗೆ ರಾಯ್ ರನ್‌ಔಟ್ ಆಗಿ ಫೆವಿಲಿಯನ್ ಸೇರಿದರು. ಈ ಮೂಲಕ ಭಾರತಕ್ಕೆ ಮೊದಲ ಯಶಸ್ಸು ದೊರಕಯವಂತೆ ಮಾಡಿದರು.

ಭಾರತದ ಬೌಲರ್‌ಗಳನ್ನು ಬೆಂಡೆತ್ತಿದ ಬೈರ್‌ಸ್ಟೋವ್- ಬೆನ್ ಸ್ಟೋಕ್ಸ್
ಬಳಿಕ ಆರಂಭಿಕ ಆಟಗಾರ ಬೈರ್‌ಸ್ಟೋವ್ ಅವರನ್ನು ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕೂಡಿಕೊಂಡರು. ಈ ಇಬ್ಬರು ಆಟಗಾರರು ಅಕ್ಷರಶಃ ಭಾರತೀಯ ಬೌಲರ್‌ಗಳನ್ನು ಬೆಂಡೆತ್ತಿದರು. ಈ ಜೋಡಿ ಭರೊಬ್ಬರಿ 175 ರನ್‌ಗಳ ಜೊತೆಯಾಟವನ್ನು ನೀಡುವ ಮೂಲಕ ಇಂಗ್ಲೆಂಡ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಬೆನ್ ಸ್ಟೋಕ್ಸ್ ಕೇವಲ 52 ಎಸೆತಗಳಲ್ಲಿ 99 ರನ್ ಬಾರಿಸಿ ಭುವನೇಶ್ವರ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು.

ಸಣ್ಣ ಆಘಾತ ಎದುರಿಸಿದ ಇಂಗ್ಲೆಂಡ್
ಬೆನ್ ಸ್ಟೋಕ್ಸ್ ಶತಕದಂಚಿನಲ್ಲಿ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದಾಗ ಇಂಗ್ಲೆಂಡ್ ಪಂದ್ಯದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸಿಯಾಗಿತ್ತು. ಆದರೆ ಈ ಸಂದರ್ಭದಲ್ಲಿ ಭಾರತೀಯ ಭೌಲರ್‌ಗಳು ಮೇಲುಗೈ ಸಾಧಿಸುವ ಲಕ್ಷಣ ತೋರಿಸಿದರು. ಶತಕಗಳಿಸಿ ಮುನ್ನುಗ್ಗುತ್ತಿದ್ದ ಬೈರ್‌ಸ್ಟೋವ್ ಅವರು ವಿರಾಟ್ ಕೊಹ್ಲಿಗೆ ಕ್ಯಾಚ್ ನಿಡುವ ಮೂಲಕ ಪ್ರಸಿದ್ಧ್ ಕೃಷ್ಣಗೆ ವಿಕೆಟ್ ಒಪ್ಪಿಸಿದರೆ ನಾಯಕ ಜೋಸ್ ಬಟ್ಲರ್ ಪ್ರಸಿದ್ಧ್ ಕೃಷ್ಣ ಎಸೆದ ಯಾರ್ಕರ್‌ಗೆ ಉತ್ತರವಿಲ್ಲದೆ ಬೌಲ್ಡ್ ಆದರು. ಅಲ್ಲಿಗೆ ಕೇವಲ 9 ಎಸೆತಗಳ ಅಂತರದಲ್ಲಿ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು ಆತಂಕದ ಕ್ಷಣಗಳನ್ನು ಎದುರಿಸಿತು

ಗೆಲುವಿನ ದಡ ಸೇರಿಸಿದ ಮಲನ್- ಲಿವಿಂಗ್‌ಸ್ಟನ್
ಇನ್ನು ಇಂತಾ ಸಂದರ್ಭದಲ್ಲಿ ಡೇವಿಡ್ ಮಲನ್ ಹಾಗೂ ಚೊಚ್ಚಲ ಪಂದ್ಯವನ್ನಾಡಿದ ಲಿಯಾಮ್ ಲಿವಿಂಗ್‌ಸ್ಟನ್ ಕ್ರೀಸ್‌ನಲ್ಲಿ ಜೊತೆಯಾದರು. ಈ ಜೋಡಿ ಬಳಿಕ ಪ್ರವಾಸಿಗರಿಗೆ ಆಘಾತವಾಗದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಮೂಲಕ ಇನ್ನೂ 39 ಎಸೆತಗಳು ಇರುವಂತೆಯೇ ಇಂಗ್ಲೆಂಡ್ ಗೆಲುವಿಗೆ ಕಾರಣರಾದರು. ಈ ಗೆಲುವಿನೊಂದಿಗೆ ಇಂಗ್ಲೆಂಡ್ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದೆ.


Click it and Unblock the Notifications












