ಭಾರತ vs ಇಂಗ್ಲೆಂಡ್ 2ನೇ ಟಿ20: ಪ್ರಿವ್ಯೂ, ಸಂಭಾವ್ಯ ತಂಡ, ನೇರಪ್ರಸಾರ, ಹವಾಮಾನ ಹಾಗೂ ಪಿಚ್ ವರದಿ

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು ಕಳೆದುಕೊಂಡಿದ್ದು 0-1 ಅಂತರದಿಂದ ಹಿನ್ನಡೆಯನ್ನು ಹೊಂದಿದೆ. ಇದೀಗ ಎರಡೂ ತಂಡಗಳು ಮತ್ತೊಂದು ಕದನಕ್ಕೆ ಸಿದ್ಧವಾಗಿದೆ. ಭಾನಯವಾರ ಟಿ20 ಸರಣಿಯ ಎರಡನೇ ಹೋರಾಟ ನಡೆಯಲಿದ್ದು ಟೀಮ್ ಇಂಡಿಯಾ ಈ ಹಣಾಹಣಿಯಲ್ಲಿ ತಿರುಗಿಬೀಳುವ ವಿಶ್ವಾಸದಲ್ಲಿದೆ.
ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸರ್ವಾಂಗೀಣ ಪ್ರದರ್ಶನ ನೀಡುವಲ್ಲಿ ಸಫಲವಾಗಿತ್ತು. ಭಾರತವನ್ನು 124 ರನ್‌ಗಳಿಗೆ ನಿಯಂತ್ರಿಸಿದ್ದ ಇಂಗ್ಲೆಂಡ್ ಬೌಲರ್‌ಗಳು ಮೇಲುಗೈ ಸಾಧಿಸಲಿ ಕಾರಣವಾಗಿದ್ದರು, ಬಳಿಕ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ ಇಂಗ್ಲೀಷ್ ಆಟಗಾರರು ಕೇವಲ 2 ವಿಕೆಟ್ ಕಳೆದುಕೊಂಡು ಇನ್ನೂ 27 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು.
ಈಗ ಎರಡು ತಂಡಗಳು ಕೂಡ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ. ಈ ಬಗ್ಗೆ ಪ್ರಮುಖ ಮಾಹಿತಿಗಳು ಇಲ್ಲಿದೆ ಓದಿ..

ಪಂದ್ಯದ ಮಾಹಿತಿ ಮತ್ತು ನೇರಪ್ರಸಾರ
ದಿನಾಂಕ: ಮಾರ್ಚ್ 14, 2021, ಭಾನುವಾರ
ಸಮಯ: ಸಂಜೆ 7 ಗಂಟೆ
ಸ್ಥಳ: ಮೊಟೇರಾ ಸ್ಟೇಡಿಯಂ, ಅಹ್ಮದಾಬಾದ್
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್ ನೆಟ್ವರ್ಕ್, ಡಿಸ್ನಿ+ಹಾಟ್‌ಸ್ಟಾರ್ VIP

ಹವಾಮಾನ ವರದಿ
ಮಳೆಯ ಯಾವುದೇ ಆತಂಕವಿಲ್ಲದೆ ಕ್ರಿಕೆಟ್ ಆಡಲು ಪೂರಕವಾದ ವಾತಾವರಣವನ್ನು ಹೊಂದಿದೆ. ಪಂದ್ಯದ ದಿನ ಹೆಚ್ಚಿನ ಉಷ್ಣಾಂಶವನ್ನು ಹೊಂದಿರುವ ಸಾಧ್ಯತೆಯಿದೆ. 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಭಾನುವಾರ ಸರಾಸರಿಯಾಗಿರಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಬ್ಬನಿ ಬೌಲಿಂಗ್ ತಂಡಕ್ಕೆ ಸವಾಲಾಗುವ ಸಾಧ್ಯತೆಯಿದೆ.

ಪಿಚ್ ರಿಪೋರ್ಟ್
ಅಹ್ಮದಾಬಾದ್‌ನ ಪಿಚ್ ಸಮತೋಲಿತವಾಗಿದ್ದು ಮೊದಲ ಪಂದ್ಯದ ಎರಡನೇ ಇನ್ನಿಂಗ್ಸ್ ಇದಕ್ಕೆ ಸಾಕ್ಷ್ಯವನ್ನು ನೀಡಿದೆ. ಪಿಚ್ ಎರಡು ವಿಭಿನ್ನ ರೀತಿಯಲ್ಲಿ ವರ್ತಿಸುತ್ತದೆ. ಬೌನ್ಸ್ ಜೊತೆಗೆ ಹೆಚ್ಚಾಗಿ ತಿರುವುದು ನೀಡುವ ಮೂಲಕ ವೇಗ ಹಾಗೂ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಲಿದೆ.

ಭಾರತ ಸಂಭಾವ್ಯ ತಂಡ
ಕೆ.ಎಲ್. ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಆಕ್ಷರ್ ಪಟೇಲ್ / ನವದೀಪ್ ಸೈನಿ, ಶಾರ್ದುಲ್ ಠಾಕೂರ್, ಭುವನೇಶ್ವರ್ ಕುಮಾರ್, ಮತ್ತು ಯುಜುವೇಂದ್ರ ಚಾಹಲ್

ಇಂಗ್ಲೆಂಡ್ ಸಂಭಾವ್ಯ ತಂಡ
ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜೇಸನ್ ರಾಯ್, ಡೇವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಇಯಾನ್ ಮಾರ್ಗನ್ (ನಾಯಕ), ಸ್ಯಾಮ್ ಕರನ್, ಮಾರ್ಕ್ ವುಡ್, ಕ್ರಿಸ್ ಜೋರ್ಡಾನ್, ಜೋಫ್ರಾ ಆರ್ಚರ್ ಮತ್ತು ಆದಿಲ್ ರಶೀದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications