IND vs ENG T20: ಚೆನ್ನೈ ಪಿಚ್ ಹೇಗಿದೆ? ಯಾರಿಗೆ ಸಹಾಯ ಮಾಡಲಿದೆ? ಏನು ಹೇಳುತ್ತೆ ಅಂಕಿ ಅಂಶ
ಶನಿವಾರ ಚೆನ್ನೈನ ಎಂ ಚಿದಂಬರಂ ಕ್ರೀಡಾಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯ ಕುತೂಹಲ ಹೆಚ್ಚಿಸಿದೆ. ಸುಮಾರು ಆರು ವರ್ಷಗಳ ಬಳಿಕ ಈ ಅಂಗಳದಲ್ಲಿ ಟಿ20 ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸುವ ಕನಸು ಟೀಮ್ ಇಂಡಿಯಾದ್ದಾಗಿದೆ. ಅಲ್ಲದೆ ಇಂಗ್ಲೆಂಡ್ ಈ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ಪುಟಿದೇಳುವ ಕನಸು ಹೊಂದಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತ ಏಳು ವಿಕೆಟ್ ಜಯ ಸಾಧಿಸಿದೆ. ಟೀಮ್ ಇಂಡಿಯಾ ಆಟಗಾರರು ಭರ್ಜರಿ ಲಯದಲ್ಲಿದ್ದು, ಮತ್ತೊಂದು ಗೆಲುವಿನ ಹುಡುಕಾಟದಲ್ಲಿದ್ದಾರೆ. ಹಾಗಿದ್ದರೆ ಈ ಪಿಚ್ ಹೇಗಿದೆ ಯಾರಿಗೆ ಸಹಾಯ ಮಾಡುತ್ತದೆ? ಈ ಪಿಚ್‌ನಲ್ಲಿ ಎಷ್ಟು ಪಂದ್ಯಗಳು ನಡೆದಿವೆ ಎಂಬ ಬಗ್ಗೆ ವರದಿ ಇಲ್ಲಿದೆ.

ಪಿಚ್ ಹೇಗಿರಲಿದೆ?
ಚೆನ್ನೈ ಪಿಚ್ ಸ್ಪಿನ್ ಬೌಲರ್‌ಗಳಿಗೆ ಸಹಾಯ ಮಾಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೆ ಬ್ಯಾಟರ್‌ಗಳು ಇಲ್ಲಿ ಸಹಾಯ ಸಿಗಲಿದೆ. ಇನ್ನು ಮಂಜು (Dew) ಪಂದ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ವರದಿಗಳು ಇವೆ. ಇನ್ನು ಈ ಪಿಚ್‌ನಲ್ಲಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡಲು ಮುಂದಾಗುತ್ತದೆ.
ಒಬ್ಬನೇ ಪ್ಲೇಯರ್
2018ರಲ್ಲಿ ಇದೇ ಅಂಗಳದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಪಂದ್ಯವನ್ನು ಆಡಿತ್ತು. ಆಗ ಭಾರತ ತಂಡದಲ್ಲಿದ್ದ ಯಾವುದೇ ಪ್ಲೇಯರ್ ಸದ್ಯದ ತಂಡದಲ್ಲಿ ಇಲ್ಲ. ಆದರೆ ಮೊದಲ ಪಂದ್ಯ ಆಡದ ವಾಶಿಂಗ್ಟನ್ ಸುಂದರ್, 2018ರಲ್ಲಿ ಆಡಿದ್ದರು. ಹೀಗಾಗಿ ಇವರೊಬ್ಬರೇ ಸದ್ಯದ ತಂಡದಲ್ಲಿರುವ ಆಗ ಆಡಿದ ಪ್ಲೇಯರ್ ಆಗಿದ್ದಾರೆ.

ಈ ಪಿಚ್‌ನಲ್ಲಿ ಈಗಾಗಲೇ ಎರಡು ಪಂದ್ಯಗಳು ನಡೆದಿದ್ದು ಮೊದಲ ಬ್ಯಾಟ್ ಮಾಡಿದ ತಂಡ ಒಂದು ಬಾರಿ. ಇನ್ನು ಎರಡನೇ ಬಾರಿಗೆ ಬ್ಯಾಟ್ ಮಾಡಿದ ತಂಡ ಇನ್ನೊಮ್ಮೆ ಪಂದ್ಯ ಗೆದ್ದಿದೆ. 2012ರಲ್ಲಿ ನ್ಯೂಜಿಲೆಂಡ್ ಹಾಗೂ ಭಾರತ ತಂಡಗಳು ಈ ಮೈದಾನದಲ್ಲಿ ಕಾದಾಟ ನಡೆಸಿದ್ದಾಗ ಈಗಿನ ಇಂಗ್ಲೆಂಡ್ ತಂಡದ ಕೋಚ್ ಬ್ರೆಡಂ ಮೆಕಲಂ ಆಗ ಕಿವೀಸ್ ತಂಡದ ಬ್ಯಾಟಿಂಗ್‌ಗೆ ಆಧಾರವಾಗಿದ್ದರು. ಅವರು ಬಾರಿಸಿದ 91 ರನ್ ಎರಡನೇ ಗರಿಷ್ಠ ಸ್ಕೋರ್ ಆಗಿದೆ.
2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಶಿಖರ್ ಧವನ್ 92 ರನ್ ಬಾರಿಸಿದ್ದು ಗರಿಷ್ಠ ಸ್ಕೋರ್ ಆಗಿದೆ. ಈ ಪಿಚ್‌ನಲ್ಲಿ ಸ್ಪಿನ್ ಬೌಲರ್‌ಗಳು ಆರ್ಭಟ ನಡೆಸಿದ್ದಾರೆ.
ಈ ಪಿಚ್‌ನಲ್ಲಿ ಗರಿಷ್ಠ ಸ್ಕೋರ್: 182
ಈ ಪಿಚ್‌ನಲ್ಲಿ ಕನಿಷ್ಠ ಸ್ಕೋರ್: 166
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications