ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟೆಸ್ಟ್ : ಭಾರತ ವಿರುದ್ಧ ಇಂಗ್ಲೆಂಡಿಗೆ ಭರ್ಜರಿ ಜಯ

By Mahesh
India Vs England 2nd Test Updates Lords Day

ಲಂಡನ್, ಆಗಸ್ಟ್ 12: ಲಾರ್ಡ್ಸ್ ಅಂಗಳದಲ್ಲಿ ನಡೆದಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ವಿರುದ್ಧ ಬೃಹತ್ ಮುನ್ನಡೆ ಗಳಿಸಿದ ಬಳಿಕ ಅತಿಥೇಯ ಇಂಗ್ಲೆಂಡ್ ತನ್ನ ಪ್ರಾಬಲ್ಯ ಮುಂದುವರೆಸಿ, ಭಾರತ ವಿರುದ್ಧ ಇನ್ನಿಂಗ್ಸ್ ಹಾಗೂ 159ರನ್ ಗಳ ಜಯ ದಾಖಲಿಸಿದೆ.

ಲಾರ್ಡ್ಸ್ ಟೆಸ್ಟ್ : ಆಂಡರ್ಸನ್ ನಿಂದ ದಾಖಲೆಗಳ ಧೂಳಿಪಟ!ಲಾರ್ಡ್ಸ್ ಟೆಸ್ಟ್ : ಆಂಡರ್ಸನ್ ನಿಂದ ದಾಖಲೆಗಳ ಧೂಳಿಪಟ!

ಭಾರತದ 2ನೇ ಇನ್ನಿಂಗ್ಸ್: 289ರನ್ ಹಿನ್ನಡೆಯೊಂದಿಗೆ ಕಣಕ್ಕಿಳಿದ ಭಾರತದ ಪರ ಆರಂಭಿಕ ಆಟಗಾರ ಮುರಳಿ ವಿಜಯ್ ಅವರು ಸತತವಾಗಿ ಶೂನ್ಯ ಸುತ್ತಿ ಗೋಲ್ಡನ್ ಡಕ್ ಗಳಿಸಿದರು. ವಿಜಯ್ ವಿಕೆಟ್ ಪಡೆದ ಜೇಮ್ಸ್ ಆಂಡರ್ಸನ್ ಲಾರ್ಡ್ಸ್ ಮೈದಾನದಲ್ಲಿ 100 ಹಾಗೂ ಭಾರತದ ವಿರುದ್ಧ 100 ವಿಕೆಟ್ ಗಳಿಸಿದ ಸಾಧನೆ ಮಾಡಿದರು.

ಕೆಎಲ್ ರಾಹುಲ್ 10, ಚೇತೇಶ್ವರ್ ಪೂಜಾರಾ 17, ಅಜಿಂಕ್ಯ ರಹಾನೆ 13, ನಾಯಕ ಕೊಹ್ಲಿ 17, ಹಾರ್ದಿಕ್ ಪಾಂಡ್ಯ 26 ಗಳಿಸಿ ಔಟಾದ್ರೆ, ದಿನೇಶ್ ಕಾರ್ತಿಕ್ ಮತ್ತೆ ಶೂನ್ಯ ಸುತ್ತಿದರು. ಕೊನೆಗೆ 130 ಸ್ಕೋರಿಗೆ ಆಲೌಟ್ ಆಯಿತು. ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ತಲಾ ನಾಲ್ಕು ವಿಕೆಟ್ ಹಾಗೂ ಕ್ರಿಸ್ ವೋಕ್ಸ್ 2 ಗಳಿಸಿದರು.

250ಕ್ಕೂ ಅಧಿಕ ಮುನ್ನಡೆಯೊಂದಿಗೆ ಕಣಕ್ಕಿಳಿದ ರೂಟ್ ಪಡೆ ಭಾನುವಾರದಂದು ಕೂಡಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಜಾನಿ ಬೈರ್ಸ್ಟೋ 93ರನ್ ಗಳಿಸಿ ಶತಕ ವಂಚಿತರಾದರೆ, ಕ್ರಿಸ್ ವೋಕ್ಸ್ ಅದ್ಭುತ ಆಟವಾಡಿ 137ರನ್ ಗಳಿಸಿ ಅಜೇಯರಾಗಿ ಉಳಿದರು.

1
42375

21 ಬೌಂಡರಿ ಬಾರಿಸಿದ ವೋಕ್ಸ್ ಕಟ್ಟಿ ಹಾಕಲು ಭಾರತೀಯ ಬೌಲರ್ಸ್ ತಿಣುಕಾಡಿದರು. ಸ್ಯಾಮ್ ಕುರನ್ 40ರನ್ ಗಳಿಸಿ ಉತ್ತಮ ಸಾಥ್ ನೀಡಿದರು.

ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನ ಸ್ಕೋರ್ 396/7 ಆಗಿದ್ದಾಗ 289ರನ್ ಮುನ್ನಡೆಯೊಂದಿಗೆ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಭಾರತದ ಪರ ಮೊಹಮ್ಮದ್ ಶಮಿ ಹಾಗೂ ಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಹಾಗೂ ಇಶಾಂತ್ ಶರ್ಮ 1 ವಿಕೆಟ್ ಗಳಿಸಿದರು.ಸ್ಪಿನ್ನರ್ ಗಳಾದ ಕುಲದೀಪ್ ಯಾದವ್ ಹಾಗೂ ಆರ್ ಅಶ್ವಿನ್ ಯಾವುದೇ ವಿಕೆಟ್ ಪಡೆಯಲಿಲ್ಲ.

Story first published: Sunday, August 12, 2018, 22:35 [IST]
Other articles published on Aug 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X