ಮಹಿಳಾ ಟಿ20: ಡೇನಿಯಲ್ ಅರ್ಧಶತಕ, ಭಾರತ ವಿರುದ್ಧ ಇಂಗ್ಲೆಂಡ್‌ಗೆ ಜಯ

ಗುವಾಹಟಿ, ಮಾರ್ಚ್ 7: ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ವನಿತಾ ತಂಡ ಗುವಾಹಟಿಯ ಬರ್ಸಪಾರದಲ್ಲಿ ಗುರುವಾರ (ಮಾರ್ಚ್ 7) ನಡೆದ ಆತಿಥೇಯ ಭಾರತದ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ 5 ರನ್ ಜಯ ಗಳಿಸಿದೆ. ಇದರೊಂದಿಗೆ ಆಂಗ್ಲ ಮಹಿಳೆಯರು ಮೂರು ಪಂದ್ಯಗಳ ಈ ಟಿ20 ಸರಣಿಯನ್ನು 2-0ಯಿಂದ ಗೆದ್ದುಕೊಂಡಿದ್ದಾರೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಮಹಿಳಾ ತಂಡ, ಕಳಪೆ ಬ್ಯಾಟಿಂಗ್ ಪ್ರರ್ದಶಿಸಿತು. ಆರಂಭಿಕ ಆಟಗಾರ್ತಿ ಹರ್ಲೀನ್ ಡಿಯೋಲ್ 14, ನಾಯಕಿ ಸ್ಮೃತಿ ಮಂಧಾನ 12, ಮಿಥಾಲಿ ರಾಜ್ 20, ದೀಪ್ತಿ ಶರ್ಮಾ ಮತ್ತು ಭಾರತಿ ಫುಲ್ಮಾಲಿ ತಲಾ 18 ರನ್ ಸೇರಿಸಿದ್ದೇ ಹೆಚ್ಚೆನಿಸಿತು. ಭಾರತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು 111 ರನ್ ಬಾರಿಸಿತು.
ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಗೆ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಭರ್ಜರಿ ಬೆಂಬಲವಿತ್ತರು. ಕ್ರೀಸ್‌ಗೆ ಅಂಟಿನಿಂತ ವ್ಯಾಟ್ ಅಜೇಯ 64 ರನ್ ಕೊಡುಗೆ ನೀಡಿದರು. ಇನ್ನು ಲಾರೆನ್ ವಿನ್ಫೀಲ್ಡ್ ಅವರ 29 ರನ್ ಸೇರ್ಪಡೆ ಗೆಲುವಿನ ನೆಲೆಯಲ್ಲಿ ತಂಡಕ್ಕೆ ನೆರವಾಯ್ತು.
ಇಂಗ್ಲೆಂಡ್ ತಂಡ 19.1 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 114 ರನ್ ಪೇರಿಸಿ ಗೆಲುವನ್ನಾಚರಿಸಿತು. ಭಾರತದ ಇನ್ನಿಂಗ್ಸ್ ವೇಳೆ ಇಂಗ್ಲೆಂಡ್‌ನ ಕ್ಯಾಥರೀನ್ ಬ್ರಂಟ್ 3, ಲಿನ್ಸಿ ಸ್ಮಿತ್ 2 ವಿಕೆಟ್ ಪಡೆದರೆ, ಇಂಗ್ಲೆಂಡ್ ಇನ್ನಿಂಗ್ಸ್ ವೇಳೆ ಭಾರತದ ಏಕ್ತಾ ಬಿಶ್ತ್ 2 ವಿಕೆಟ್‌ಗಳೊಂದಿಗೆ ಗಮನ ಸೆಳೆದರು. ಪಂದ್ಯಶ್ರೇಷ್ಠೆಯಾಗಿ ಡೇನಿಯಲ್ ವ್ಯಾಟ್ ಮಿಂಚಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications