ಭಾರತ vs ಇಂಗ್ಲೆಂಡ್: 2ನೇ ಟೆಸ್ಟ್ ಗೆಲ್ಲಲು ಈ 3 ಸಂಗತಿಗಳನ್ನು ಕೊಹ್ಲಿ ಪಡೆ ಮಾಡಲೇಬೇಕು

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ದೊಡ್ಡ ಅಂತರದ ಸೋಲು ಕಂಡಿದೆ ಟೀಮ್ ಇಂಡಿಯಾ. ಈ ಮೂಲಕ ತವರು ಅಂಗಳದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲೇ ಹಿನ್ನಡೆ ಕಂಡಿದೆ. ಇಂಗ್ಲೆಂಡ್ ಪಡೆ ಭಾರತದಲ್ಲಿಯೂ ಗೆಲುವಿನ ಓಟವನ್ನು ಮುಂದುವರಿಸಿದ್ದು 1-0 ಅಂತರದಿಂದ ಮುನ್ನಡೆಯನ್ನು ಕಾಯ್ದುಕೊಂಡಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸಲೇಬೇಕಾದ ಒತ್ತಡದಲ್ಲಿದೆ. ಇದಕ್ಕೆ ಪೂರಕವಾಗಿ ಟೀಮ್ ಇಂಡಿಯಾ ಈಗ ರಣತಂತ್ರಗಳನ್ನು ಹೆಣೆಯುತ್ತಿದೆ. ಮೊದಲ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸದಂತೆ ನೋಡಿಕೊಳ್ಳಬೇಕಿದೆ.
ಇಷ್ಟಾಗಿಯೂ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವನ್ನು ಸಾಧಿಸ ಬೇಕಾದರೆ ಕೆಲ ಪ್ರಮುಖ ಸಂಗತಿಗಳತ್ತ ಚಿತ್ತ ನೆಡಬೇಕು. ಅದರಲ್ಲೂ ಈ ಮೂರು ಸಂಗತಿಗಳು ವಿರಾಟ್ ಪಡೆಯ ಗೆಲುವಿಗೆ ನಿರ್ಣಾಯಕವಾಗಲಿದೆ. ಯಾವುದು ಆ ಮೂರು ಅಂಶಗಳು? ಮುಂದೆ ಓದಿ..

ಕೊಹ್ಲಿ ಟಾಸ್ ಗೆಲ್ಲಬೇಕು
ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡ ಟಾಸ್ ಗೆದ್ದು ಅದನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿತು. ಆರಂಭದ ಎರಡು ದಿನಗಳು ಬ್ಯಾಟ್ಸ್‌ಮನ್‌ಗಳಿಗೆ ಈ ಪಿಚ್ ಪೂರಕವಾಗಿದ್ದು ಅದನ್ನು ಬಳಸಿಕೊಂಡ ಇಂಗ್ಲೆಂಡ್ 578 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು. ಮೂರನೇ ದಿನದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್‌ಗೆ ಇಳಿದ ಭಾರತ ಅಂದು 337 ರನ್‌ಗಳನ್ನು ಗಳಿಸಲಷ್ಟೇ ಶಕ್ತವಾಗಿತ್ತು. ಇದು ಇಂಗ್ಲೆಂಡ್ ಗೆಲುವಿಗೆ ನಿರ್ಣಾಯಕವಾಗಿತ್ತು. ಎರಡನೇ ಟೆಸ್ಟ್‌ನಲ್ಲೂ ಪಿಚ್ ಇದೇ ರೀತಿ ವರ್ತಿಸಲಿದ್ದು ಭಾರತ ಟಾಸ್ ಗೆಲ್ಲಲೇಬೇಕಿದೆ.

ಸ್ಪಿನ್ನರ್‌ಗಳು ಉತ್ತಮ ಪ್ರದರ್ಶನ ನೀಡಬೇಕು
ಚೆನ್ನೈ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲ ನೀಡುವ ಪಿಚ್, ಹೀಗಾಗಿ ಟೀಮ್ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ ಮೂವರು ಸ್ಪಿನ್ನರ್‌ಗಳೋಂದುಗೆ ಕಣಕ್ಕಿಳಿದಿತ್ತು. ಆದರೆ ಟೀಮ್ ಇಂಡಿಯಾದ ಸ್ಪಿನ್ನರ್‌ಗಳಾದ ಶಹ್ಬಾಜ್ ನದೀಮ್ ಹಾಗೂ ವಾಶಿಂಗ್ಟನ್ ಸುಂದರ್ ಇಂಗ್ಲೆಂಡ್ ಬ್ಯಾಟಿಂಗ್ ವಿರುದ್ಧ ಪರಿಣಾಮಕಾರಿ ಎನಿಸಲಿಲ್ಲ. ಎರಡನೇ ಟೆಸ್ಟ್‌ನಲ್ಲಿ ಅವಕಾಶ ಪಡೆಯುವ ಸ್ಪಿನ್ ಬೌಲರ್‌ಗಳು ದಾಳಿಯನ್ನು ಮತ್ತಷ್ಟು ಕಠಿಣವಾಹಿ ರೂಪಿಸಬೇಕಿದೆ. ಇಲ್ಲವಾದಲ್ಲಿ ಇಂಗ್ಲೆಂಡ್ ದಾಂಡಿಗರನ್ನು ಕಟ್ಟಿಹಾಕುವುದು ಕಷ್ಟವಾಗಲಿದೆ.

ರೋಹಿತ್ ಹಾಗೂ ರಹಾನೆ ರನ್ ಗಳಿಸಲೇಬೇಕು
ಟೀಮ್ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ ಹಿನ್ನೆಡೆ ಅನುಭವಿಸಲು ಇಬ್ಬರು ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯ ರಹಾನೆಯ ಕಳಪೆ ಆಟವೂ ಕಾರಣ. ಈ ಇಬ್ಬರು ಆಟಗಾರರು ಎರಡು ಇನ್ನಿಂಗ್ಸ್‌ಗಳಲ್ಲೂ ರನ್ ಗಳಿಸಲು ವಿಫಲರಾದರು. ಆದರೆ ಎರಡನೇ ಟೆಸ್ಟ್‌ನಲ್ಲಿ ಈ ಇಬ್ಬರೂ ರನ್‌ಗಳಿಸುವ ಮೂಲಕ ತಂಡಕ್ಕೆ ನೆರವಾಗಲೇಬೇಕಿದೆ. ಹಾಗಾದಲ್ಲಿ ಮಾತ್ರವೇ ತಂಡದ ಗೆಲುವು ಸಾಧ್ಯ.

ಭಾರತಕ್ಕೆ ಅಗ್ನಿ ಪರೀಕ್ಷೆ
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸಾಲು ಸಾಲು ಸವಾಲುಗಳ ಮಧ್ಯೆಯೂ ಉತ್ಕೃಷ್ಟ ಪ್ರದರ್ಶನವನ್ನು ನೀಡಿದ ಟೀಮ್ ಇಂಡಿಯಾ ಸರಣಿಯನ್ನು ಗೆದ್ದಿತ್ತು. ಆದರೆ ವಿರಾಟ್ ಕೊಹ್ಲಿ ಸಹಿತ ಅನುಭವಿ ಆಟಗಾರರು ಮರಳಿದ ಬಳಿಕ ತವರಿನಲ್ಲೇ ಟೀಮ್ ಇಂಡಿಯಾ ಹಿನ್ನೆಡೆ ಅನುಭವಿಸುತ್ತಿರುವುದು ವಿಪರ್ಯಾಸ. ಹೀಗಾಗಿ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದು ಸಾಧಿಸಬೇಕಾದ ಅನಿವಾರ್ಯತೆಯಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ಗೇರುವ ದೃಷ್ಟಿಯಿಮದಲೂ ಇದು ಮಹತ್ವವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications