ಭಾರತ vs ಇಂಗ್ಲೆಂಡ್: 2ನೇ ಏಕದಿನದ ವೇಳೆ 33 ಬುಕ್ಕಿಗಳ ಬಂಧನ

ಪೂಣೆ: ಪೂಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ಶುಕ್ರವಾರ (ಮಾರ್ಚ್ 26) ನಡೆದ ಭಾರತ-ಇಂಗ್ಲೆಂಡ್ ದ್ವಿತೀಯ ಪಂದ್ಯದ ವೇಳೆ ಪಿಂಪ್ರಿ ಚಿಂಚ್ವಾಡ್ ಪೊಲೀಸರು 33 ಮಂದಿ ಬುಕ್ಕಿಗಳನ್ನು ಬಂಧಿಸಿದ್ದಾರೆ. ಪಂದ್ಯದಲ್ಲಿ ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡ ಆರೋಪದ ಮೇಲೆ ಪೊಲೀಸರು 33 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಂಸಿಎ ಮೈದಾನದಲ್ಲಿ ಭಾರತ-ಇಂಗ್ಲೆಂಡ್ ದ್ವಿತೀಯ ಪಂದ್ಯದ ವೇಳೆ ಕೆಲವರು ದುರ್ಬೀನುಗಳನ್ನು ಬಳಸುತ್ತಿದ್ದರು, ಬೆಟ್ಟಿಂಗ್‌ನಲ್ಲೂ ಭಾವಹಿಸಿದ್ದರು ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿತರನ್ನು ಬಂಧಿಸಿದ್ದಾರೆ.
ಆರೋಪಿತರನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದರು. ಅದರಂತೆ ಮೂರು ಬೇರೆ ಬೇರೆ ತಾಣಗಳಲ್ಲಿದ್ದ ಬೆಟ್ಟಿಂಗ್ ಆರೋಪಿರನ್ನು ಬಂಧಿಸಲಾಗಿದೆ. ಮೈದಾನದ ಆಸುಪಾಸಿನಲ್ಲೇ ಇದ್ದು ಆರೋಪಿತರು ಬೆಟ್ಟಿಂಗ್‌ನಲ್ಲಿ ಪಾಲ್ಗೊಂಡಿದ್ದರು, ದುರ್ಬೀನು, ಒಳ್ಳೆ ರೆಸ್ಯೂಲ್ಯೂಶನ್ ಇರುವ ಕ್ಯಮರಾಗಳನ್ನು ಬಳಸಿದ್ದರು ಎನ್ನಲಾಗಿದೆ.
ಆರೋಪಿತರಲ್ಲಿ 5 ಮಂದಿ ಮಧ್ಯಪ್ರದೇಶ, 13 ಮಂದಿ ಹರ್ಯಾಣ, 11 ಮಂದಿ ಮಹಾರಾಷ್ಟ್ರ, 2 ರಾಜಸ್ಥಾನ, ಒಬ್ಬ ಗೋವಾ ಮತ್ತು ಒಬ್ಬ ಉತ್ತರಪ್ರದೇಶದವನು ಎಂಬ ಮಾಹಿತಿ ಲಭಿಸಿದೆ. ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ 6 ವಿಕೆಟ್ ಸುಲಭ ಗೆಲುವು ದಾಖಲಿಸಿ 3 ಪಂದ್ಯಗಳ ಏಕದಿನ ಸರಣಿಯನ್ನು 1-1ರಿಂದ ಸಮಬಲಗೊಳಿಸಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications