ಭಾರತ vs ಇಂಗ್ಲೆಂಡ್: 3ನೇ ಏಕದಿನಕ್ಕೆ ಭಾರತ ಸಂಭಾವ್ಯ ಪ್ಲೇಯಿಂಗ್ XI

ಪುಣೆ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿ, 5 ಪಂದ್ಯಗಳ ಟಿ20ಐ ಸರಣಿಯನ್ನು ಜಯಿಸಿರುವ ಟೀಮ್ ಇಂಡಿಯಾ 3 ಪಂದ್ಯಗಳ ಏಕದಿನ ಸರಣಿಯನ್ನೂ ಗೆದ್ದುಕೊಳ್ಳುವತ್ತ ಯೋಚಿಸುತ್ತಿದೆ. ಆರಂಭಿಕ ಪಂದ್ಯ ಸೋತಿದ್ದ ಇಂಗ್ಲೆಂಡ್, ದ್ವಿತೀಯ ಪಂದ್ಯದಲ್ಲಿ ಆತಿಥೇಯ ಭಾರತಕ್ಕೆ ತಕ್ಕ ತಿರುಗೇಟು ನೀಡಿತ್ತು. ಈಗ ಸರಣಿ 1-1ರಿಂದ ಸಮಬಲಗೊಂಡಿದೆ. ನಿರ್ಣಾಯಕ ಪಂದ್ಯ ಮಾರ್ಚ್ 28ರ ಭಾನುವಾರ 1.30 pmಗೆ ಆರಮಭಗೊಳ್ಳಲಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಪಂದ್ಯದ ಸೋಲಿಗೆ ಭಾರತದಲ್ಲಿ ಒಂದಿಷ್ಟು ತಪ್ಪುಗಳಿದ್ದವು. ಮುಖ್ಯವಾಗಿ ಬೌಲರ್‌ಗಳು ಎಡವಿದ್ದರು. ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆಲ್ಲಬೇಕಾದರೆ ಭಾರತದ ಪ್ಲೇಯಿಂಗ್ XIನಲ್ಲಿ ಬದಲಾಗಬೇಕು.

ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು
ಹಿಂದಿನ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಇಬ್ಬರಿಂದಲೂ ಒಳ್ಳೆಯ ಪ್ರದರ್ಶನ ಬಂದಿರಲಿಲ್ಲ. ದ್ವಿತೀಯ ಪಂದ್ಯದಲ್ಲಾದರೂ ಈ ಜೋಡಿ ತಂಡಕ್ಕೆ ಬಲ ತುಂಬ ಬೇಕಿದೆ. ತೃತೀಯ ಪಂದ್ಯದಲ್ಲೂ ರೋಹಿತ್-ಧವನ್ ಜೋಡಿ ಆರಂಭಿಕರಾಗಿ ಆಡಲಿದೆ. 3ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ನಾಯಕ ವಿರಾಟ್ ಕೊಹ್ಲಿ ಬರಲಿದ್ದಾರೆ (1. ರೋಹಿತ್ ಶರ್ಮಾ, 2. ಶಿಖರ್ ಧವನ್, 3. ವಿರಾಟ್ ಕೊಹ್ಲಿ).

ಮಧ್ಯಮ ಕ್ರಮಾಂಕದ ಆಟಗಾರರು
ಹಿಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ರನ್ ಕುಸಿತದಿಂದ ಪಾರು ಮಾಡಿದ್ದು ಮಧ್ಯಮ ಕ್ರಮಾಂಕ. ಹೀಗಾಗಿ ಈ ಬಾರಿ ಮಧ್ಯಮ ಕ್ರಮಾಂಕದಲ್ಲಿ ಬದಲಾವಣೆ ಸಾಧ್ಯತೆಯಿಲ್ಲ. 4ರಲ್ಲಿ ಕೆಎಲ್ ರಾಹುಲ್, 5ರಲ್ಲಿ ರಿಷಭ್ ಪಂತ್ ಆಡಲಿದ್ದಾರೆ (4. ಕೆಎಲ್ ರಾಹುಲ್, 5. ರಿಷಭ್ ಪಂತ್).

ಆಲ್ ರೌಂಡರ್‌ಗಳು
ಹಾರ್ದಿಕ್ ಪಾಂಡ್ಯ ಮತ್ತು ಅವರ ಅಣ್ಣ ಕೃನಾಲ್ ಪಾಂಡ್ಯ ಹಿಂದಿನ ಪಂದ್ಯಗಳಲ್ಲಿ ಒಳ್ಳೆಯ ಪ್ರದರ್ಶನವೇ ನೀಡಿದ್ದಾರೆ. ಹೀಗಾಗಿ 3ನೇ ಏಕದಿನದಲ್ಲೂ ಇವರು ಇರುವ ನಿರಾಕ್ಷೆಯಿದೆ. ಅಥವಾ ಕೃನಾಲ್ ಜಾಗದಲ್ಲಿ ವಾಷಿಂಗ್ಟನ್ ಸುಂದರ್ ಬರಲೂಬಹುದು. ಇನ್ನು ಶಾರ್ದೂಲ್ ಠಾಕೂರ್ ಕೂಡ ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ (6. ಹಾರ್ದಿಕ್ ಪಾಂಡ್ಯ, 7. ಕೃನಾಲ್ ಪಾಂಡ್ಯ, 8. ಶಾರ್ದೂಲ್ ಠಾಕೂರ್).

ಬೌಲರ್‌ಗಳ ಬಳಗ
ಮೂರನೇ ಏಕದಿನ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ XIನಿಂದ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಹೊರಬೀಳುವ ನಿರೀಕ್ಷೆಯಿದೆ. ದ್ವಿತೀಯ ಪಂದ್ಯದಲ್ಲಿ 84 ರನ್ ನೀಡಿದ್ದರಾದರೂ ಒಂದೂ ವಿಕೆಟ್ ಲಭಿಸಿರಲಿಲ್ಲ. ಇನ್ನು ಉಳಿದಂತೆ ಹಿಂದಿನ ಬೌಲರ್‌ಗಳೇ ಇರಲಿದ್ದಾರೆ (9. ಭುವನೇಶ್ವರ್ ಕುಮಾರ್, 10. ಪ್ರಸಿದ್ಧ್ ಕೃಷ್ಣ, 11. ಯುಜುವೇಂದ್ರ ಚಾಹಲ್).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications