For Quick Alerts
ALLOW NOTIFICATIONS  
For Daily Alerts
 

IND vs ENG 3rd ODI: ಹೇಗಿದೆ ಅಹಮದಾಬಾದ್ ಪಿಚ್? ಏನು ಹೇಳುತ್ತೆ ಅಂಕಿ ಅಂಶ?

ಬುಧವಾರ ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯದಲ್ಲಿ ಅಹಮದಾಬಾದ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ನರೇಂದ್ರ ಮೋದಿ ಮೈದಾನ ಸಂಪೂರ್ಣ ಸಿದ್ಧವಾಗಿದೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಇರಾದೆ ಭಾರತ ತಂಡದ್ದಾಗಿದೆ. ಈ ಪಂದ್ಯದಲ್ಲಿ ಜಯ ಸಾಧಿಸಿ, ಸರಣಿಯಲ್ಲಿ ಮಾನ ಉಳಿಸಿಕೊಳ್ಳುವ ಬಯಕೆ ಇಂಗ್ಲೆಂಡ್ ತಂಡದ್ದಾಗಿದೆ. ಈ ಪಂದ್ಯದಲ್ಲಿ ಪಿಚ್‌ ಹೇಗಿರಲಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಭಾರತ ಈ ಮೈದಾನದಲ್ಲಿ 2023ರ ಏಕದಿನ ವಿಶ್ವಕಪ್‌ನ್ನು ಕೊನೆಯ ಬಾರಿಗೆ ಆಡಿತ್ತು. ಈ ಪಂದ್ಯದಲ್ಲಿ ಆತಿಥೇಯ ತಂಡ 6 ವಿಕೆಟ್‌ಗಳಿಂದ ಸೋತು ನಿರಾಸೆ ಅನುಭವಿಸಿತ್ತು. ಸುಮಾರು 14 ತಿಂಗಳ ಬಳಿಕ ಮತ್ತೆ ಈ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು ಕುತೂಹಲ ಮನೆ ಮಾಡಿದೆ. ರೋಹಿತ್ ಶರ್ಮಾ ಎರಡನೇ ಏಕದಿನ ಪಂದ್ಯದಲ್ಲಿ ಲಯಕ್ಕೆ ಮರಳಿದ್ದು, ಎಲ್ಲ ಅಭಿಮಾನಿಗಳ ಕಣ್ಣು ಈಗ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರಲಿದೆ.

India vs England 3rd ODI in Ahmedabad Pitch Report Key Players amp amp Match Expectations

ಹೇಗಿದೆ ಪಿಚ್?

ಭಾರತ ಮತ್ತು ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಕೊನೆಯ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಬುಧವಾರ ನಡೆಯುವ ಪಂದ್ಯದ ವೇಳೆ ತಾಪಮಾನ 31 ಡಿಗ್ರಿ ಇರಲಿದ್ದು, ಇನ್ನು ಈ ದೀನ ಮಳೆ ಬರುವ ಸಾಧ್ಯತೆ ಇದೆ. ಇಲ್ಲಿನ ಪಿಚ್ ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ. ಇಲ್ಲಿನ ಪಿಚ್ ವೇಗದ ಬೌಲರ್‌ಗಳು ಸಹ ಬೌನ್ಸ್ ಇರುತ್ತದೆ. ಇದು ಬ್ಯಾಟರ್‌ಗಳಿಗೆ ಸಹಾಯ ಮಾಡುತ್ತದೆ. ಹೈ ಸ್ಕೋರಿಂಗ ಪಂದ್ಯ ಆಗುವ ಸಾಧ್ಯತೆ ಇದೆ. ಈ ಮೈದಾನದಲ್ಲಿ ಒಟ್ಟು 36 ಪಂದ್ಯ ನಡೆದಿದ್ದು, ಮೊದಲು ಬ್ಯಾಟಿಂಗ್ ಮಾಡಿದ ತಂಡ19 ಬಾರಿ, ಎರಡನೇ ಬಾರಿ ಬ್ಯಾಟ್ ಮಾಡಿದ ತಂಡ 17 ಬಾರಿ ಪಂದ್ಯ ಗೆದ್ದಿದೆ.

ಈ ಮೈದಾನದಲ್ಲಿ ರೋಹಿತ್‌ ಶರ್ಮಾ ಅವರು ಆರ್ಭಟಿಸಿದ್ದಾರೆ. ಆದರೆ ಈ ಅಂಗಳದಲ್ಲಿ ರೋಹಿತ್ ಆಗಲಿ, ವಿರಾಟ್ ಆಗಲಿ ಒಂದೇ ಒಂದು ಶತಕವನ್ನು ಬಾರಿಸಿಲ್ಲ. ಆದ್ದರಿಂದ ಈ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್‌ ಕಟ್ಟುವ ಕನಸು ಈ ಇಬ್ಬರೂ ಆಟಗಾರರಾದ್ದಾಗಿದೆ. ಇನ್ನು ಶ್ರೇಯಸ್‌ ಅಯ್ಯರ್ ಹಾಗೂ ಕೆಎಲ್ ರಾಹುಲ್ ಸಹ ಈ ಅಂಗಳದಲ್ಲಿ ಉತ್ತಮವಾಗಿ ರನ್ ಕಲೆ ಹಾಕಿದ ದಾಖಲೆ ಹೊಂದಿದ್ದಾರೆ. ಹೀಗಾಗಿ ಈ ಆಟಗಾರರು ಸಹ ಈ ಮೈದಾನದಲ್ಲಿ ದೊಡ್ಡ ಇನಿಂಗ್ಸ್‌ ಕಟ್ಟುವ ಇರಾದೆಯನ್ನು ಹೊಂದಿದ್ದಾರೆ. ಗುಜರಾತ್ ಟೈಟಾನ್ಸ್‌ ಪರ ಆಡುವ ಶುಭಮನ್‌ ಗಿಲ್‌ಗೆ ಇದು ನೆಚ್ಚಿನ ಅಂಗಳವಾಗಿದ್ದು ಯಾರು ಆರ್ಭಟಿಸುತ್ತಾರೆ ಎಂದುದು ಕುತೂಹಲ ಹೆಚ್ಚಿಸಿದೆ.

India vs England 3rd ODI in Ahmedabad Pitch Report Key Players amp amp Match Expectations

ಅಹಮದಾಬಾದ್‌ನಲ್ಲಿ ರನ್‌ ಸಾಧಕರು

ರೋಹಿತ್ ಶರ್ಮಾ, 7 ಪಂದ್ಯ, 354 ರನ್‌, 3 ಅರ್ಧಶತಕ
ರಾಹುಲ್ ದ್ರಾವಿಡ್‌, 5 ಪಂದ್ಯ, 342 ರನ್‌, 2 ಶತಕ
ವಿರಾಟ್ ಕೊಹ್ಲಿ, 9 ಪಂದ್ಯ, 246 ರನ್‌, 2 ಅರ್ಧಶತಕ

ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

ಕಪಿಲ್ ದೇವ್, 6 ಪಂದ್ಯ, 10 ವಿಕೆಟ್‌
ಪ್ರಸಿದ್ಧ ಕೃಷ್ಣ, 3 ಪಂದ್ಯ, 9 ವಿಕೆಟ್‌
ಮೊಹಮ್ಮದ್ ಸಿರಾಜ್, 5 ಪಂದ್ಯ, 8 ವಿಕೆಟ್‌

Story first published: Tuesday, February 11, 2025, 6:54 [IST]
Other articles published on Feb 11, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+