INDIA vs ENG 3rd ODI: ನಿರ್ಣಾಯಕ ಏಕದಿನ ಪಂದ್ಯದ ಪ್ರಿವ್ಯೂ, ಸಮಯ ಹಾಗೂ ಸಂಭಾವ್ಯ ತಂಡ

ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಭಾನುವಾರ ನಡೆಯಲಿದೆ. ಮೂರು ಪಂದ್ಯಗಳ ಏ ಏಕದಿನ ಸರಣಿಯಲ್ಲಿ ಎರಡು ತಮಡಗಳು ಕುಡ ತಲಾ ಒಂದು ಗೆಲುವು ಸಾಧಿಸಿದ್ದು ಸರಣಿಯಲ್ಲಿ ಸಮಬಲ ಸಾಧಿಸಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ. ಗೆದ್ದ ತಂಡ ಈ ಸರಣಿಯನ್ನು ವಶಕ್ಕೆ ಪಡೆಯಲಿದೆ.
ಟೆಸ್ಟ್ ಸರಣಿಯನ್ನು 2-2 ಅಂತರದಿಂದ ಸಮಬಲ ಸಾಧಿಸಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ನಂತರ ನಡೆದ ಟಿ20 ಸರಣಿಯನ್ನು ಭಾರತ ತನ್ನ ವಶಕ್ಕೆ ಪಡೆದುಕೊಂಡಿತ್ತು. ಹೀಗಾಗಿ ಆತಿಥೇಯ ಇಂಗ್ಲೆಂಡ್ ತಂಡ ಈ ಸರಣಿಯಲ್ಲಿ ದೊಡ್ಡ ಯಶಸ್ಸು ಸಾಧಿಸಿದಂತಿಲ್ಲ. ಆದರೆ ಅಂತಿಮ ಏಕದಿನ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿ ಜೋಸ್ ಬಟ್ಲರ್ ಪಡೆಯಿದೆ. ಅದರಲ್ಲೂ ಎರಡನೇ ಏಕದಿನ ಪಂದ್ಯದಲ್ಲಿ ಸಾಧಿಸಿದ ಭರ್ಜರಿ ಜಯ ಈಗ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದು ಅಂತಿಮ ಪಂದ್ಯದಲ್ಲಿಯೂ ಮೇಲುಗೈ ಸಾಧಿಸುವ ಆತ್ಮವಿಶ್ವಾಸದಲ್ಲಿದೆ.
ಇನ್ನು ಭಾರತ ತಂಡ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಗಮನಾರ್ಹ ಪ್ರದರ್ಶನ ನೀಡಿತ್ತು. ಹೀಗಾಗಿ 10 ವಿಕೆಟ್‌ಗಳ ಬೃಹತ್ ಅಂತರದ ಜಯ ಸಾಧಿಸಲು ಯಶಸ್ವಿಯಾಗಿತ್ತು ಭಾರತ ತಂಡ. ಆದರೆ ಎರಡನೇ ತಂಡದಲ್ಲಿ ಬೌಲಿಂಗ್ ವಿಭಾಗ ಮಿಂಚಿದರೂ ಭಾರತದ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಕಳವಳಕಾರಿಯಾಗಿತ್ತು. ಈ ಹಿನ್ನಡೆಯಿಂದ ಭಾರತ ಮರಳಿ ಲಯಕ್ಕೆ ವಾಪಾಸಾಗಬೇಕಿದೆ. ಮೂರನೇ ಪಂದ್ಯದಲ್ಲಿ ಇದಕ್ಕೆ ಪೂರಕವಾದ ಪ್ರದರ್ಶನವನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಮೂರನೇ ಏಕದಿನ ಪಂದ್ಯದ ಸಮಯ ಹಾಗೂ ತಾಣ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಈ ಸರಣಿಯ ಅಂತಿಮ ಪಂದ್ಯ ಭಾನುವಾರ ಜುಲೈ 17ರಂದು ನಡೆಯಲಿದೆ. ಈ ಪಂದ್ಯ ಇಂಗ್ಲೆಂಡ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಓಲ್ಡ್ ಟ್ರಾಫಾರ್ಡ್ ಕ್ರೀಡಾಂಗಣದಲಲ್ಇ ಆಯೋಜನೆಯಾಗಲಿದೆ. ಅದರಲ್ಲೂ ಭಾರತೀಯ ಕ್ರೀಡಾಭಿಮಾನಿಗಳು ವೀಕ್ಷಿಸಲು ಪೂರಕವಾಗುವಂತಾ ಸಮಯದಲ್ಲಿ ಈ ಪಂದ್ಯ ನಡೆಯುತ್ತಿರುವುದು ಸಮಾಧಾನಕರ ಸಂಗತಿ. ಭಾರತೀಯ ಕಾಲಮಾನ ಭಾನುವಾರ ಮಧ್ಯಾಹ್ನ 3:30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಮೂರು ಗಂಟೆಯ ಸುಮಾರಿಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.

ಎರಡು ತಂಡಗಳ ಸ್ಕ್ವಾಡ್‌ಗಳು
ಭಾರತ ಏಕದಿನ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (WK), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬೂಮ್ರಾ, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಇಂಗ್ಲೆಂಡ್ ಏಕದಿನ ತಂಡ: ಜೋಸ್ ಬಟ್ಲರ್ (ನಾಯಕ / ವಿಕೆಟ್ ಕೀಪರ್), ಮೊಯಿನ್ ಅಲಿ, ಜಾನಿ ಬೈರ್‌ಸ್ಟೋವ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟನ್, ಕ್ರೇಗ್ ಓವರ್‌ಟನ್, ಮ್ಯಾಥ್ಯೂ ಪಾರ್ಕಿನ್ಸನ್, ಜೋ ರೂಟ್, ಜೇಸನ್ ರಾಯ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲಿ, ಡೇವಿಡ್ ವಿಲ್ಲಿ

ಸಂಭಾವ್ಯ ಆಡುವ ಬಳಗ
ಭಾರತ ಸಂಭಾವ್ಯ XI: 1 ರೋಹಿತ್ ಶರ್ಮಾ (ನಾಯಕ), 2 ಶಿಖರ್ ಧವನ್, 3 ವಿರಾಟ್ ಕೊಹ್ಲಿ, 4 ಸೂರ್ಯಕುಮಾರ್ ಯಾದವ್, 5 ಹಾರ್ದಿಕ್ ಪಾಂಡ್ಯ, 6 ರಿಷಭ್ ಪಂತ್ (ವಿಕೆಟ್ ಕೀಪರ್), 7 ರವೀಂದ್ರ ಜಡೇಜಾ 8 ಶಾರ್ದೂಲ್ ಠಾಕೂರ್, 9 ಮೊಹಮ್ಮದ್ ಜಸ್ಪ್ರಿತ್ ಶಮಿ, 9 , 11 ಯುಜ್ವೇಂದ್ರ ಚಹಾಲ್.
ಇಂಗ್ಲೆಂಡ್: 1 ಜೇಸನ್ ರಾಯ್, 2 ಜಾನಿ ಬೈರ್‌ಸ್ಟೋ, 3 ಜೋ ರೂಟ್, 4 ಬೆನ್ ಸ್ಟೋಕ್ಸ್, 5 ಜೋಸ್ ಬಟ್ಲರ್ (ನಾಯಕ / ವಿಕೆಟ್ ಕೀಪರ್), 6. ಲಿಯಾಮ್ ಲಿವಿಂಗ್‌ಸ್ಟನ್ 7 ಮೊಯಿನ್ ಅಲಿ, 8 ಡೇವಿಡ್ ವಿಲ್ಲಿ, 9 ಕ್ರೇಗ್ ಓವರ್‌ಟನ್, 10 ಬ್ರೈಡನ್ ಕಾರ್ಸೆ, 11. ರೀಸ್ ಟೋಪ್ಲಿ

ಗೆಲ್ಲುವ ನೆಚ್ಚಿನ ತಂಡ ಯಾವುದು?
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೊದಲ ಎರಡು ಪಂದ್ಯಗಳಲ್ಲಿ ತಲಾ ಒಂದೊಂದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯತೆ ಅನುಭವಿಸಿದರೆ ಎರಡನೇ ಪಂದ್ಯದಲ್ಲಿ ಭಾರತ ಅನುಭವಿಸಿತು. ಹೀಗಾಗಿ ಎರಡು ತಂಡಗಳ ಸ್ಥಿತಿ ಭಿನ್ನವಾಗಿಲ್ಲ. ಆದರೆ ಅನುಭವಕ್ಕೆ ಹೋಲಿಸಿದರೆ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗಕ್ಕಿಂತ ಭಾರತೀಯ ತಮಡದ ಬೌಲರ್‌ಗಳು ಸ್ಪಷ್ಟ ಮೇಲುಗೈ ಹೊಂದಿದ್ದಾರೆ. ಈ ವಿಚಾರವಾಗಿ ನೋಡಿದರೆ ಅಂತಿಮ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಭಾರತ ತಂಡ ಗುರುತಿಸಿಕೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications