For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್, 3ನೇ ಟೆಸ್ಟ್: 2ನೇ ದಿನದಲ್ಲಿ ಗೆದ್ದ ಭಾರತ: 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ ಕೊಹ್ಲಿ ಪಡೆ

India vs England, 3rd Test, Day 2 - Live Score

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವನ್ನು ಸಾಧಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-1 ಅಂತರದ ಮುನ್ನಡೆಯನ್ನು ಸಾಧಿಸಿದೆ. ಭಾರತ ಈ ಪಂದ್ಯದಲ್ಲಿ ಕೇವಲ ಎರಡನೇ ದಿನದಲ್ಲಿ ತನ್ನ ಪರವಾಗಿ ಫಲಿತಾಂಶವನ್ನು ಪಡೆದುಕೊಂಡಿದೆ.

ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಗೆಲುವಿಗೆ 49 ರನ್‌ಗಳ ಗುರಿಯನ್ನು ಪಡೆದುಕೊಂಡಿತ್ತು. ಈ ಗುರಿಯನ್ನು ಟೀಮ್ ಇಂಡಿಯಾ ಆರಂಭಿಕ ಜೋಡಿ ಸುಲಭವಾಗಿ ತಲುಪುವಲ್ಲಿ ಯಶಸ್ವಿಯಾಗಿದೆ. ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೆ 10 ವಿಕೆಟ್‌ಗಳ ಅಂತರದ ಬೃಹತ್ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್ ಭಾರತೀಯರ ಮಾರಕ ಬೌಲಿಂಗ್ ದಾಳಿಗೆ ಗುರಿಯಾಯ್ತು. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 48.4 ಓವರ್‌ಗೆ 112 ರನ್ ಬಾರಿಸಿತ್ತು. ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ 53.2 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 145 ರನ್ ಬಾರಿಸಿತ್ತು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ 30.4 ಓವರ್‌ಗೆ 81 ರನ್ ಬಾರಿಸಿತ್ತು.ಹೀಗಾಗಿ ಅಂತಿಮ ಇನ್ನಿಂಗ್ಸ್‌ನಲ್ಲಿ ಭಾರತ ಗೆಲ್ಲಲು 49 ರನ್‌ಗಳ ಅಗತ್ಯವಿತ್ತು.

ಭಾರತ vs ಇಂಗ್ಲೆಂಡ್, 3ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49840

ಭಾರತ ಪ್ಲೇಯಿಂಗ್ XI: ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ಸಿ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆ), ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ, ಜಸ್ಪ್ರೀತ್ ಬೂಮ್ರಾ.

ಇಂಗ್ಲೆಂಡ್ ಪ್ಲೇಯಿಂಗ್ XI: ಡೊಮಿನಿಕ್ ಸಿಬ್ಲಿ, ಝ್ಯಾಕ್ ಕ್ರಾಲೆ, ಜಾನಿ ಬೈರ್‌ಸ್ಟೋವ್, ಜೋ ರೂಟ್ (ಸಿ), ಬೆನ್ ಸ್ಟೋಕ್ಸ್, ಆಲ್ಲಿ ಪೋಪ್, ಬೆನ್ ಫೋಕ್ಸ್ (ವಿಕೆ), ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ಸನ್.

Story first published: Thursday, February 25, 2021, 20:01 [IST]
Other articles published on Feb 25, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+