IND vs ENG Test: ರೋಚಕ ಘಟ್ಟದತ್ತ ಲಾರ್ಡ್ಸ್ ಟೆಸ್ಟ್; ಭಾರತದ ಗೆಲುವಿಗೆ 135 ರನ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ರೋಚಕ ಘಟ್ಟದತ್ತ ಮುಖ ಮಾಡಿದೆ. ಈ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಮ್ ಇಂಡಿಯಾಕ್ಕೆ 193 ರನ್‌ಗಳ ಗುರಿಯನ್ನು ಇಂಗ್ಲೆಂಡ್ ನೀಡಿದೆ. ಆತಿಥೇಯರು ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 58 ರನ್ ಕಲೆ ಹಾಕಿದ್ದು 4 ವಿಕೆಟ್ ಕಳೆದುಕೊಂಡಿದೆ.
ಭಾನುವಾರ ಎರಡನೇ ಇನಿಂಗ್ಸ್‌ನ್ನು 2 ರನ್‌ಗಳಿಗೆ ವಿಕೆಟ್ ನಷ್ಟವಿಲ್ಲದೆ ಆರಂಭಿಸಿದ ಇಂಗ್ಲೆಂಡ್ 192 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ತಂಡದ ಪರ ಜೋ ರೂಟ್ 40, ನಾಯಕ ಬೆನ್ ಸ್ಟೋಕ್ಸ್ 33, ಹ್ಯಾರಿ ಬ್ರೂಕ್ 23 ರನ್ ಬಾರಿಸಿದರು. ಭಾರತದ ಪರ ವಾಷಿಂಗ್ಟನ್ ಸುಂದರ್ 4, ಮೊಹಮ್ಮದ್ ಸಿರಾಜ್ ಹಾಗೂ ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದು ತಂಡಕ್ಕೆ ಆಧಾರವಾದರು.

ಗುರಿಯನ್ನು ಬೆನ್ನಟ್ಟಿದ ಭಾರತ ಉತ್ತಮ ಆರಂಭವನ್ನು ಪಡೆಯುವಲ್ಲಿ ವಿಫಲರಾದರು. ಆರಂಭಿಕ ಯಶಸ್ವಿ ಜೈಸ್ವಾಲ್ ಸೊನ್ನೆ ಸುತ್ತಿದರು. ಇವರು ಜೋಫ್ರಾ ಆರ್ಚರ್ ಎಸೆದ ಬ್ಯಾಕ್ ಆಫ್ ಲೆಂಥ್ ಎಸೆತವನ್ನು ಪುಲ್ ಮಾಡಲು ಹೋದರು. ಆದರೆ ಇವರು ಬಾರಿಸಿದ ಚೆಂಡು ಇವರ ಬ್ಯಾಟನ್ ಅಂಚಿಗೆ ಬಡಿದು ಆಗಸದೆತ್ತರಕ್ಕೆ ಸಾಗಿತು. ವಿಕೆಟ್ ಕೀಪರ್ ಜೇಮಿ ಸ್ಮಿತ್ ಹಿಡಿದ ಕ್ಯಾಚ್ ಪಡೆದರು.
2ನೇ ವಿಕೆಟ್‌ಗೆ 36 ರನ್ ಜೊತೆಯಾಟ
ಎರಡನೇ ವಿಕೆಟ್‌ಗೆ ಕನ್ನಡಿಗರಾದ ಕರುಣ್ ನಾಯರ್ ಹಾಗೂ ಕೆಎಲ್ ರಾಹುಲ್ ಇನಿಂಗ್ಸ್ ಬೆಳೆಸುವ ಜವಾಬ್ದಾರಿಯನ್ನು ಹೊತ್ತುಕೊಂಡಿತು. ಈ ಜೋಡಿ 5 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ಕನ್ನಡದ ಜೋಡಿ ಕೊಂಚ ಆಧಾರವಾಯಿತು. ಈ ಜೋಡಿ ಎರಡನೇ ವಿಕೆಟ್‌ಗೆ 66 ಎಸೆತಗಳಲ್ಲಿ 36 ರನ್ ಸೇರಿಸಿತು. ಈ ವೇಳೆ ಕರುಣ್ ನಾಯರ್ (14) ಮತ್ತೊಮ್ಮೆ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಸಫಲರಾದರು. ಬ್ರೈಡನ್ ಕಾರ್ಸೆ ಎಸೆತದಲ್ಲಿ ಔಟ್ ಆದರು.
ಆಸರೆಯಾಗದ ನಾಯಕನ ಆಟ
ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಶುಭಮನ್ ಗಿಲ್ (6) ಸಹ ಜವಾಬ್ದಾರಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದರು. ಗಿಲ್ ಔಟ್ ಆಗ್ತಾ ಇದ್ದಂತೆ ನೈಟ್ ವಾಚ್‌ಮೆನ್ ಆಗಿ ಆಕಾಶ್ ದೀಪ್ ಮೈದಾನಕ್ಕೆ ಇಳಿದರು. ಆದರೆ ಇವರು ತಮ್ಮ ಜವಾಬ್ದಾರಿಯನ್ನು ಅರಿತು ಆಡುವಲ್ಲಿ ವಿಫಲರಾದರು. ಇವರು ಬೆನ್ ಸ್ಟೋಕ್ಸ್ ತೋಡಿದ ಖೆಡ್ಡಾಗೆ ಬಲಿಯಾದರು.

ಸೋಮವಾರ ಕೊನೆಯ ದಿನದಾಟದಲ್ಲಿ ಟೀಮ್ ಇಂಡಿಯಾ ಮೊದಲಾವಧಿಯಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ವಿಕೆಟ್ ಬೀಳದಂತೆ ಕಾಯ್ದುಕೊಳ್ಳುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಟೀಮ್ ಇಂಡಿಯಾ ಗೆಲುವಿನ ಕನಸು ನನಸಾಗುತ್ತದೆ. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ (ಅಜೇಯ 33 ರನ್) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications