Rishabh Pant: 5 ಸಿಕ್ಸರ್ ಬಾರಿಸುತ್ತಲೇ ಇತಿಹಾಸ ನಿರ್ಮಿಸಲಿರುವ ರಿಷಭ್ ಪಂತ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಜುಲೈ 10 (ಗುರುವಾರ) ಲಾರ್ಡ್ಸ್‌ನಲ್ಲಿ ನಡೆಯಲಿದೆ. ಉಭಯ ತಂಡಗಳು ಈಗಾಗಲೇ ತಲಾ ಒಂದೊಂದು ಟೆಸ್ಟ್ ಪಂದ್ಯವನ್ನು ಗೆದ್ದಿದ್ದರಿಂದ, ಮೂರನೇ ಪಂದ್ಯ ರೋಚಕತೆ ಹೆಚ್ಚಿಸಿದೆ. ಹೀಗಾಗಿ ಮೂರನೇ ಟೆಸ್ಟ್ ಪಂದ್ಯ ಗೆಲ್ಲಲು ಎರಡೂ ತಂಡಗಳು ರಣತಂತ್ರವನ್ನು ಹೆಣೆದುಕೊಂಡಿವೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಮೇಲೆ ನೆಟ್ಟಿರಲಿದೆ. ಟೀಮ್ ಇಂಡಿಯಾದ ಬಲಿಷ್ಠ ಬ್ಯಾಟಿಂಗ್ ಪ್ರಸಕ್ತ ಸರಣಿಯಲ್ಲಿ ಅನಾವರಣವಾಗಿದೆ. ಅಲ್ಲದೆ ಭರವಸೆಯ ಆಟಗಾರರು ಆರ್ಭಟಿಸಿದ್ದಾರೆ.
ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಎಡ್ಜ್‌ಬಸ್ಟನ್‌ನಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಗಿಲ್ ಭರ್ಜರಿ ಪ್ರದರ್ಶನ ನೀಡಿದ್ದು ಐಸಿಸಿ ಶ್ರೇಯಾಂಕದಲ್ಲಿ 15 ಸ್ಥಾನ ಬಡ್ತಿ ಪಡೆದಿದ್ದಾರೆ. ಅಲ್ಲದೆ ಸದ್ಯ 6ನೇ ಸ್ಥಾನದಲ್ಲಿದ್ದಾರೆ. ಇನ್ನು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಸಹ ಈ ಸರಣಿಯಲ್ಲಿ ಕ್ಲಾಸಿಕ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಈ ಭರವಸೆಯ ಆಟಗಾರನ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಇವರು ಲಾರ್ಡ್ಸ್ ಪಂದ್ಯದಲ್ಲಿ ತಮ್ಮ ನೈಜ್ಯ ಆಟವನ್ನು ಮುಂದುವರೆಸಿದರೆ ದೊಡ್ಡ ದಾಖಲೆಯನ್ನು ಬರೆಯಬಹುದಾಗಿದೆ.

ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ರಿಷಭ್ ಪಂತ್ ಲೀಡ್ಸ್‌ನಲ್ಲಿ ನಡೆದ ಮೊದಲ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ವಿದೇಶಿ ನೆಲದಲ್ಲಿ ಈ ಸಾಧನೆ ಮಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಇವರು ಆಡಿರುವ 2 ಪಂದ್ಯಗಳ 4 ಇನಿಂಗ್ಸ್‌ನಲ್ಲಿ 85ರ ಸರಾಸರಿಯಲ್ಲಿ 342 ರನ್ ಸಿಡಿಸಿದ್ದಾರೆ. ಇದರಲ್ಲಿ 36 ಬೌಂಡರಿ, 13 ಸಿಕ್ಸರ್‌ಗಳು ಸೇರಿವೆ. ಈಗ ರಿಷಭ್ ಪಂತ್ ಮತ್ತೊಂದು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ದಾಖಲೆಯ ಸನಿಹದಲ್ಲಿ ರಿಷಭ್
ಲಾರ್ಡ್ಸ್ ಮೈದಾನದಲ್ಲಿ ರಿಷಭ್ ಪಂತ್ 5 ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಸಫಲರಾದಲ್ಲಿ ದೊಡ್ಡ ದಾಖಲೆ ಬರೆಯಲಿದ್ದಾರೆ. ಒಂದು ವೇಳೆ ಮೂರನೇ ಟೆಸ್ಟ್‌ನಲ್ಲಿ ರಿಷಭ್ ಪಂತ್ ಈ ಸಾಧನೆ ಮಾಡಿದಲ್ಲಿ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಹೆಗ್ಗಳಿಕೆಗೆ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರದ್ದಾಗಿದೆ. ಇವರು ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 90 ಸಿಕ್ಸರ್ ಸಿಡಿಸಿದ್ದಾರೆ.

ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಎರಡನೇ ಬ್ಯಾಟರ್ ಎಂಬ ಹಿರಿಮೆ ರೋಹಿತ್ ಶರ್ಮಾ ಅವರದ್ದಾಗಿದೆ. ರೋಹಿತ್ ಟೆಸ್ಟ್ ಕ್ರಿಕೆಟ್‌ನಲ್ಲಿ 88 ಸಿಕ್ಸರ್ ಬಾರಿಸಿದ್ದಾರೆ. ನಂತರದ ಸ್ಥಾನದಲ್ಲಿ ರಿಷಭ್ ಇದ್ದು, ಒಂದೇ ಟೆಸ್ಟ್‌ನಲ್ಲಿ ದಿಗ್ಗಜ ಆಟಗಾರರನ್ನು ಹಿಂದಿಕ್ಕುವ ಅವಕಾಶ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications