India vs England, 3rd Test:: 3ನೇ ಟೆಸ್ಟ್ ಪಂದ್ಯದ ಹವಾಮಾನ ವರದಿ, ಪಂದ್ಯದ ಆರಂಭ, ನೇರಪ್ರಸಾರ ಮಾಹಿತಿ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಬುಧವಾರ ಆರಂಭವಾಗಲಿದೆ. ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಹಾಗೂ ಭಾರತ ಎರಡು ತಂಡಗಳು ಕೂಡ ತಲಾ ಒಂದೊಂದು ಗೆಲುವು ಸಾಧಿಸಿದೆ. ಈ ಮೂಲಕ ಸರಣಿ 1-1 ಅಂತರದಿಮದ ಸಮಬಲಗೊಂಡಿದೆ. ಉಳಿದ ಎರಡು ಪಮದ್ಯಗಳು ಈಗ ಸಾಕಷ್ಟು ಕುತೂಹಲ ಮೂಡಿಸಿದೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಳ್ಳಲು ವೇಗಿ ಉಮೇಶ್ ಯಾದವ್ ಅರ್ಹರಾಗಿದ್ದಾರೆ ಎಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ. ಕೆಎಲ್ ರಾಹುಲ್ ಕಊಡ ಸಂಪೂರ್ಣ ಫಿಟ್ ಆಗಿದ್ದಾರೆ. ಶಾರ್ದೂಲ್ ಠಾಕೂರ್ ಟೆಸ್ಟ್ ತಂಡದಿಂದ ಹೊರಗುಳಿದಿದ್ದಾರೆ
ಮತ್ತೊಂದೆಡೆ ಇಂಗ್ಲೆಂಡ್ ತಂಡ ಕೂಡ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದ್ದು ರೊಟೇಶನ್ ಪದ್ದತಿಯಂತೆ ಕೀಪ್ ಬೈರ್‌ಸ್ಟೋವ್ ಹಾಗೂ ಮಾರ್ಕ್‌ವುಡ್ ಆಡುವ ಬಳಗದಲ್ಲಿ ಅವಕಾಶ ಪಡೆಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

ಪಂದ್ಯದ ಮಾಹಿತಿ
ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಡೇ-ನೈಟ್ ಪಂದ್ಯವಾಗಿದೆ. ಫೆಬ್ರವರಿ 24(ಬುಧವಾರ)ದಿಂದ 28(ಭಾನುವಾರ)ವರೆಗೆ ಪಂದ್ಯ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಅಹ್ಮದಾಬಾದ್‌ನನ ಮೊಟೇರಾ ಸ್ಟೇಡಿಯಮ್‌ನಲ್ಲಿ ಈ ಪಂದ್ಯ ನಡೆಯಲಿದೆ

ಹವಾಮಾನ ವರದಿ
ಅಹ್ಮದಾಬಾದ್‌ನಲ್ಲಿ ಮುಂದಿನ ಐದು ದಿನಗಳ ಕಾಲವೂ ಬಿಸಿಲಿನ ವಾತಾವರಣ ಇರಲಿದೆ. ಪಂದ್ಯ ನಡೆಯುವ ಐದು ದಿನಗಳ ಕಾಲವೂ ಮಳೆಯಾಗುವ ಸಂಭವ ಇಲ್ಲ. ಸರಾಸರಿ 36 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರಲಿದೆ. ಹೀಗಾಗಿ ಆಟಗಾರರಿಗೆ ನಿಜಕ್ಕೂ ಇದು ಸವಾಲಾಗಲಿದೆ.

ಪಿಚ್ ರಿಪೋರ್ಟ್
ಮೊಟೇರಾ ಸ್ಟೇಡಿಯಂನ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ. ಅದರಲ್ಲೂ ಭಾರತೀಯ ಸ್ಪಿನ್ನರ್‌ಗಳಿಗೆ ಹೆಚ್ಚು ಅನುಕೂಲವಾಗಿರಲಿದೆ. ಆರಂಭದಲ್ಲಿ ಪಿಂಕ್ ಬಾಲ್ ಸಾಕಷ್ಟು ತಿರುವು ಪಡೆಯುವ ನಿರೀಕ್ಷೆಯಿದೆ. ಈ ಅವಧಿಯಲ್ಲಿ ಎರಡು ಕಡೆಯ ಸ್ಪಿನ್ನರ್‌ಗಳು ಹೆಚ್ಚಿನ ಲಾಭ ಪಡೆಯುವ ಸಾಧ್ಯತೆಯಿದೆ.

ಸಂಭಾವ್ಯ ತಂಡ ಟೀಮ್ ಇಂಡಿಯಾ
ಶುಬ್ಮನ್ ಗಿಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಕುಲ್‌ದೀಪ್ ಯಾದವ್/ ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಮತ್ತು ಇಶಾಂತ್ ಶರ್ಮಾ.

ಸಂಭಾವ್ಯ ತಂಡ ಇಂಗ್ಲೆಂಡ್
ಡೊಮಿನಿಕ್ ಸಿಬ್ಲಿ, ರೋರಿ ಬರ್ನ್ಸ್ / ಝಾಕ್ ಕ್ರಾಲೆ, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಜಾನಿ ಬೈರ್‌ಸ್ಟೋವ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಆಲ್ಲಿ ಪೋಪ್, ಡೊಮ್ ಬೆಸ್, ಜ್ಯಾಕ್ ಲೀಚ್, ಜೋಫ್ರಾ ಆರ್ಚರ್ ಮತ್ತು ಜೇಮ್ಸ್ ಆಂಡರ್ಸನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications