For Quick Alerts
ALLOW NOTIFICATIONS  
For Daily Alerts
 

IND vs ENG T20: ಮಹತ್ವದ ಪಂದ್ಯದ ಮೇಲೆ ಟೀಮ್ ಇಂಡಿಯಾ ಕಣ್ಣು: ಹೇಗಿರಲಿದೆ ಪುಣೆ ಪಿಚ್‌?

ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟಿ20 ಕ್ರಿಕೆಟ್‌ ಪಂದ್ಯ ಪುಣೆಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಟೀಮ್ ಇಂಡಿಯಾ ಪ್ಲ್ಯಾನ್ ಮಾಡಿಕೊಂಡಿದೆ. ಮೂರನೇ ಟಿ20 ಪಂದ್ಯವನ್ನು ಗೆದ್ದಿರುವ ವಿಶ್ವಾಸದಲ್ಲಿರುವ ಇಂಗ್ಲೆಂಡ್ ಮತ್ತೊಂದು ಗೆಲುವಿನ ಲೆಕ್ಕಾಚಾರವನ್ನು ಹಾಕಿಕೊಂಡಿದೆ. ಈ ಮೂಲಕ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ಇರಾದೆಯನ್ನು ಪ್ರವಾಸಿ ತಂಡ ಮಾಡಿದೆ. ಪುಣೆಯ ಪಿಚ್‌ ಹೇಗಿರಲಿದೆ?, ಈ ಮೈದಾನದಲ್ಲಿ ಟಾಸ್‌ ಗೆದ್ದವರು ಏನು ಮಾಡಬೇಕು ಎಂಬ ಬಗ್ಗೆ ವರದಿ ಇಲ್ಲಿದೆ.

ರಾಜ್‌ಕೋಟ್‌ನಲ್ಲಿ ರಾಜನಂತೆ ಮೆರೆದ ಇಂಗ್ಲೆಂಡ್, ಆತಿಥೇಯ ತಂಡಕ್ಕೆ ಶಾಕ್ ನೀಡಿದೆ. ಸುಲಭವಾಗಿ ಪಂದ್ಯವನ್ನು ಗೆದ್ದು ಬಿಡುತ್ತೇವೆ ಎಂಬ ನಂಬಿಕೆಯಲ್ಲಿದ್ದ ಸೂರ್ಯಕುಮಾರ್ ಯಾದವ್ ಪಡೆಗೆ ಪ್ರವಾಸಿ ತಂಡ ಬರೆ ಹಾಕಿದೆ. ಸ್ಪರ್ಧಾತ್ಮಕ ಮೊತ್ತವನ್ನು ಡಿಫೆಂಡ್‌ ಮಾಡಿಕೊಳ್ಳುವ ಕಲೆ ತಮ್ಮಲ್ಲಿ ಇರುವುದಾಗಿ ಈಗಾಗಲೇ ಇಂಗ್ಲೆಂಡ್ ಬೌಲರ್‌ಗಳು ತೋರಿಸಿದ್ದಾರೆ. ಈಗ ನಾಲ್ಕನೇ ಪಂದ್ಯ ಕುತೂಹಲ ಹೆಚ್ಚಿಸಿದೆ.

India vs England 4th T20 in Pune Pitch Report Toss Strategy amp amp Spin Factor

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಸ್ಪಿನ್ ಮಂತ್ರವನ್ನು ಪಠಿಸಲಿದೆ. ಈ ಪಿಚ್‌ ಬಗ್ಗೆ ವಾಷಿಂಗ್ಟನ್‌ ಸುಂದರ್ ಹಾಗೂ ಅಕ್ಷರ್ ಪಟೇಲ್‌ ಅವರಿಗೆ ಚೆನ್ನಾಗಿ ಅರಿವು ಇರುವುದರಿಂದ ಇವರ ಮೇಲೆ ಹೆಚ್ಚಿನ ನಿರೀಕ್ಷೆಗಳು ಹುಟ್ಟಿವೆ.

ಪಿಚ್ ಹೇಗಿರಲಿದೆ?

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್‌ ಕ್ರಿಕೆಟ್ ಮೈದಾನ ಸಾಮಾನ್ಯವಾಗಿ ಸ್ಪಿನ್ ಬೌಲರ್‌ಗಳಿಗೆ ನೆರವು ನೀಡುತ್ತದೆ. ಹೀಗಾಗಿ ಈ ಪಂದ್ಯದಲ್ಲೂ ಸ್ಪಿನ್‌ ಫ್ರೆಂಡ್ಲಿ ಪಿಚ್‌ ನೀಡುವ ಸಾಧ್ಯತೆಗಳು ಇವೆ. ಈ ಪಿಚ್‌ನಲ್ಲಿ ಸುಮಾರು ಒಂದುವರೆ ವರ್ಷದ ಬಳಿಕ ಅಂತಾರಾಷ್ಟ್ರೀಯ ಟಿ20 ಪಂದ್ಯ ನಡೆಯಲಿದೆ. ಕಳೆದ ಬಾರಿ ಟೀಮ್ ಇಂಡಿಯಾ ಈ ಅಂಗದಳದಲ್ಲಿ ಆಡಿದ್ದಾಗ ಶ್ರೀಲಂಕಾ ವಿರುದ್ಧ 16 ರನ್‌ಗಳಿಂದ ಸೋಲು ಕಂಡಿತ್ತು. ಈ ಹಿಂದೆ ನಡೆದ ಪಂದ್ಯದಲ್ಲಿ ಅಕ್ಷರ್ ಪಟೇಲ್‌ ಅಮೋಘ ಆಲ್‌ರೌಂಡರ್‌ ಪ್ರದರ್ಶನ ನೀಡಿದ್ದರು. ಅಲ್ಲದೆ ಈಗಿನ ನಾಯಕ ಸೂರ್ಯಕುಮಾರ್ ಸಹ ಅರ್ಧಶತಕ ಬಾರಿಸಿದ್ದರು. ಈ ಮೈದಾನದಲ್ಲಿ ಈಗಾಗಲೇ 4 ಟಿ20 ಪಂದ್ಯಗಳು ನಡೆದಿದ್ದು, ಭಾರತ 2 ರಲ್ಲಿ ಗೆಲುವು, 2 ಸೋಲು ಕಂಡಿದೆ.

India vs England 4th T20 in Pune Pitch Report Toss Strategy amp amp Spin Factor

ಸೋಲಿನ ನೆನಪು

ಕಳೆದ ಎರಡು ತಿಂಗಳುಗಳ ಹಿಂದೆ ಭಾರತ ಇದೇ ಅಂಗಳದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್‌ ಪಂದ್ಯವನ್ನು ಆಡಿತ್ತು. ಆಗ ಗೆದ್ದೇ ಬಿಡುತ್ತೇವೆ ಎಂಬ ಭರವಸೆಯಲ್ಲಿದ್ದ ಆಟಗಾರರಿಗೆ ಪ್ರವಾಸಿ ತಂಡ ಸೋಲಿನ ಶಾಕ್ ನೀಡಿತ್ತು. ಈಗ ಮತ್ತೊಂದು ಪಂದ್ಯಕ್ಕೆ ಟೀಮ್ ಇಂಡಿಯಾ ಸಿದ್ಧವಾಗಿದೆ. ಆದರೆ ಈ ತಂಡದಲ್ಲಿ ಆ ಟೆಸ್ಟ್‌ ಪಂದ್ಯವನ್ನು ಆಡಿರುವ ವಾಷಿಂಗ್ಟನ್‌ ಸುಂದರ್ ಬಿಟ್ಟರೇ ಬೇರ್ಯಾರೂ ಇಲ್ಲ. ನ್ಯೂಜಿಲೆಂಡ್‌ ವಿರುದ್ಧ ಆ ಟೆಸ್ಟ್‌ ಪಂದ್ಯದಲ್ಲಿ ವಾಷಿಂಗ್ಟನ್ ಅಮೋಘ ದಾಳಿ ಸಂಘಟಿಸಿ 2 ಇನಿಂಗ್ಸ್ ಸೇರಿ ಒಟ್ಟು 11 ವಿಕೆಟ್‌ ಕಬಳಿಸಿದ್ದರು. ಈಗ ಅವರಿಗೆ ಮತ್ತೊಂದು ಸುವರ್ಣ ಅವಕಾಶ ಒದಗಿದೆ.

ಈ ಪಿಚ್‌ನಲ್ಲಿ ಗರಿಷ್ಠ ಸ್ಕೋರ್: 206/6
ಈ ಪಿಚ್‌ನಲ್ಲಿ ಕನಿಷ್ಠ ಸ್ಕೋರ್: 101/10

Story first published: Thursday, January 30, 2025, 7:01 [IST]
Other articles published on Jan 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+