ಭಾರತ vs ಇಂಗ್ಲೆಂಡ್: ನಿರ್ಣಾಯಕ 4ನೇ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ ಹೀಗಿದೆ

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ 3 ಪಂದ್ಯಗಳು ಅಂತ್ಯವಾಗಿದ್ದು ಇಂಗ್ಲೆಂಡ್ 2-1 ಅಂತರದ ಮುನ್ನಡೆಯನ್ನು ಪಡೆದುಕೊಂಡಿದೆ. ಹೀಗಾಗಿ ಸರಣಿಯನ್ನು ವಶಪಡಿಕೊಳ್ಳಲು ಮುಂದಿನ ಎರಡು ಪಂದ್ಯಗಳು ಕೂಡ ಬಹಳ ನಿರ್ಣಾಯಕವಾಗಿದೆ. ಗುರುವಾರ ಸರಣಿಯ ನಾಲ್ಕನೇ ಪಂದ್ಯ ನಡೆಯಲಿದ್ದು ಭಾರತ ಈ ಸರಣಿಯಲ್ಲಿ ಜೀವಂತವಾಗಿರಲು ಬಹಳ ಮಹತ್ವದ್ದಾಗಿದೆ.
ಈ ನಿರ್ಣಾಯಕ ಪಂದ್ಯದಲ್ಲಿ ಭಾರತ ಗೆಲುವನ್ನು ಸಾಧಿಸಬೇಕುಇದ್ದರೆ ತಂಡದ ಆಡುವ ಬಳಗ ಸಾಕಷ್ಟು ಬಲಿಷ್ಠವಾಗಿರಬೇಕಿದೆ. ಈ ಬಗ್ಗೆ ತಂಡದ ಮ್ಯಾನೇಜ್‌ಮೆಂಟ್ ಈಗ ತಲೆಕೆಡಿಸಿಕೊಂಡಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲವಾಗಿರುವುದು ಚಿಂತೆಗೀಡು ಮಾಡಿದೆ. ಹೀಗಾಗಿ ಮುಂದಿನ ಪಂದ್ಯದಲ್ಲಿ ಭಾರತದ ಆಡುವ ಬಳಗ ಹೇಗಿರಲಿದೆ ಎಂಬ ಕುತೂಗಲ ಸಹಜವಾಗಿದೆ. ಆಟಗಾರರ ಪ್ರದರ್ಶನ ಹಾಗೂ ನಾಯಕನ ಹೇಳಿಕೆಯ ಆಧಾರದಲ್ಲಿ ಭಾರತೀಯ ತಂಡದ ಸಂಭಾವ್ಯ ಆಡುವ ಬಳಗ ಇಲ್ಲಿದೆ ನೋಡಿ:

ರೋಹಿತ್ ಶರ್ಮಾ- ಕೆಎಲ್ ರಾಹುಲ್
ಸತತ ಮೂರನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಆರಂಭಿಕ ಆಟಗಾರ ಕೆಎಲ್ ರಾಹುಲ್ ವಿಫಲರಾದರು. ಆದರೆ ಪಂದ್ಯದ ಅಂತ್ಯದ ಬಳಿಕ ನಾಯಕ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ತಂಡದ ಪ್ರಮುಖ ಆಟಗಾರ. ಅವರೇ ತಂಡದ ಆರಂಭಿಕನಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದ್ದಾರೆ. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.

ಇಶಾನ್-ಕೊಹ್ಲಿ-ರಿಷಭ್
ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅವರನ್ನು ಮೂರನೇ ಪಂದ್ಯದಲ್ಲೂ ಮುಂದುವರಿಸುವ ಸಾಧ್ಯತೆಯಿದೆ. ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ರಿಷಭ್ ಪಂತ್ ಮುಂದಿನ ಪಂದ್ಯದಲ್ಲೂ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುವ ಸಾಧ್ಯತೆಯಿದೆ.

ಸೂರ್ಯಕುಮಾರ್-ಹಾರ್ದಿಕ್- ಸುಂದರ್
ಇನ್ನು ಟಿ20 ಸರಣಿಯ ದ್ವಿತೀಯ ಪಂದ್ಯದಲ್ಲಿ ಆಡುವ ಬಳಗದಲ್ಲಿದ್ದರೂ ಬ್ಯಾಟಿಂಗ್ ನಡೆಸುವ ಅವಕಾಶ ಪಡೆಯದಿದ್ದ ಸೂರ್ಯಕುಮಾರ್ ನಾಲ್ಕನೇ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಇವರಿಗಾಗಿ ಶ್ರೇಯಸ್ ಐಯ್ಯರ್ ಸ್ಥಾನ ಬಿಟ್ಟುಕೊಡಬಹುದು. ವಾಶಿಂಗ್ಟನ್ ಸುಂದರ್ ಆಲ್‌ರೌಂಡರ್ ಆಗಿ ಕಣಕ್ಕಿಳಿಯಲಿದ್ದಾರೆ.

ನವ್‌ದೀಪ್/ಶಾರ್ದೂಲ್-ಭುವನೇಶ್ವರ್- ಚಾಹಲ್
ಇನ್ನು ವೇಗಿಗಳ ಪೈಕಿ ಈ ಸರಣಿಯಲ್ಲಿ ಅವಕಾಶ ಪಡೆಯದಿರುವ ನವ್‌ದೀಪ್ ಸೈನಿ ನಿರ್ಣಾಯಕ ಪಂದ್ಯದಲ್ಲಿ ಸ್ಥಾನ ಪಡೆದುಕೊಂಡರೆ ಅಚ್ಚರಿಯಿಲ್ಲ. ಅವರಿಗಾಗಿ ಶಾರ್ದೂಲ್ ಠಾಕೂರ್ ಸ್ಥಾನ ಬಿಟ್ಟುಕೊಡಬೇಕಾಗಬಹುದು. ಭುವನೇಶ್ವರ್ ಕುಮಾರ್ ಅತ್ಯುತ್ತಮ ಪ್ರದರ್ಶನ ನಿಡುತ್ತಿದ್ದರೆ ಚಾಹಲ್ ಮುಖ್ಯ ಸ್ಪಿನ್ನರ್ ಆಗಿ ತಂಡದಲ್ಲಿರುವ ಸಾಧ್ಯತೆ ಹೆಚ್ಚಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications