
ಸೌಥಾಂಪ್ಟನ್, ಆಗಸ್ಟ್ 31: ಇಂಗ್ಲೆಂಡ್ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 246 ರನ್‌ಗಳಿಗೆ ನಿಯಂತ್ರಿಸಿರುವ ಭಾರತ, ಎರಡನೆಯ ದಿನದ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡಿತ್ತು. ಆರಂಭಿಕರಾದ ಕೆ.ಎಲ್. ರಾಹುಲ್, 19 ರನ್ ಗಳಿಸಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆದರು. ಆಮೇಲೆ ಸಾಲಾಗಿ ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಹಿನ್ನಡೆಯ ಬೀತಿಯಲ್ಲಿದ್ದ ಭಾರತಕ್ಕೆ ಚೇತೇಶ್ವರ ಪೂಜಾರ ಆಸರೆಯಾಗಿ ನಿಂತರು.
ವಿಕೆಟ್ ಕಾವಲು ನಿಂತ ಪೂಜಾರ ಭರ್ಜರಿ 132 ರನ್ ಪೇರಿಸಿ ತಂಡಕ್ಕೆ ಬಲ ತುಂಬಿದರು. ಪೂಜಾರ ಬಿಟ್ಟರೆ ಭಾರತಕ್ಕೆ ವಿರಾಟ್ ಕೊಹ್ಲಿ 46 ರನ್ ಸೇರಿಸಿದ್ದರು. ಭಾರತ ಎರಡನೇ ದಿನದಾಂತ್ಯಕ್ಕೆ 84.5 ಓವರ್ ಗೆ 273 ರನ್ ಪೇರಿಸಿತು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿದೆ.
ಪಂದ್ಯದ ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ
ಚಹಾ ವಿರಾಮದ ವೇಳೆ ಭಾರತ 3 ವಿಕೆಟ್ ಕಳೆದು 156 ರನ್ ಪೇರಿಸಿತ್ತು. ಶಿಖರ್ ಧವನ್ 23, ನಾಯಕ ಕೊಹ್ಲಿ 46 ನಿರ್ಗಮಿಸಿದ್ದರು. ಅನಂತರ ಅಜಿಂಕ್ಯ ರಹಾನೆ (11) ಕೂಡ ಔಟಾದರು. ಚೇತೇಶ್ವರ ಪೂಜಾರ (55) ಮತ್ತು ರಿಶಬ್ ಪಂತ್ ಕ್ರೀಸ್ ನಲ್ಲಿ ಇದ್ದರು.
ಹೊಸ ಚೆಂಡು ವಿಪರೀತ ಸ್ವಿಂಗ್ ಆಗುವ ಗುಣವನ್ನು ಪಿಚ್ ಹೊಂದಿರುವುದರಿಂದ ಆರಂಭದ ಕೆಲವು ಓವರ್‌ಗಳಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ.
ಹೀಗಾಗಿ ಆರಂಭಿಕರಿಬ್ಬರೂ ಎಚ್ಚರಿಕೆಯ ಆಟದ ಮೊರೆ ಹೋಗಬೇಕಿದೆ. ಇಂಗ್ಲೆಂಡ್ ತಂಡದ ವೇಗಿಗಳು ಮೊದಲ ದಿನದ ಅಂತ್ಯದಲ್ಲಿ ಮಾಡಿದ ನಾಲ್ಕು ಓವರ್‌ಗಳಲ್ಲಿ ಲಯ ಕಂಡುಕೊಂಡಿರಲಿಲ್ಲ. ಆದರೆ, ಈಗ ಪಿಚ್‌ನ ಗುಣಕ್ಕೆ ಅನುಗುಣವಾಗಿ ಅವರು ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿದರೆ ಭಾರತಕ್ಕೆ ದೊಡ್ಡ ಸವಾಲು ಎದುರಾಗಲಿದೆ.
ರನ್ ಗತಿ ಹೆಚ್ಚಿಸುವ ಆತುರಕ್ಕಿಂತಲೂ ತಾಳ್ಮೆಯಿಂದ ಆಡಿದರೆ ಚೆಂಡು ಹಳತಾದ ಬಳಿಕ ಸರಾಗವಾಗಿ ಎನ್ ಬರಲು ಸಾಧ್ಯ. ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಚೆಂಡು ಹಳತಾದ ಬಳಿಕ ಅಷ್ಟಾಗಿ ಸ್ವಿಂಗ್ ಆಗುತ್ತಿರಲಿಲ್ಲ. ಇದರ ಲಾಭ ಪಡೆದಿದ್ದ ಸ್ಯಾಮ್ ಕರ್ರನ್ ಮತ್ತು ಮೋಯಿನ್ ಆಲಿ ಕೊನೆಯಲ್ಲಿ ಭಾರತದ ಬೌಲರ್‌ಗಳನ್ನು ಕಾಡಿದ್ದರು.
ಆದರೆ, ಇಂಗ್ಲೆಂಡ್‌ನ ಬಲಿಷ್ಠ ವೇಗಿಗಳನ್ನು ಎದುರಿಸುವುದು ಸುಲಭವಲ್ಲ. ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಬೆನ್ ಸ್ಟೋಕ್ಸ್ ಮತ್ತು ಸ್ಯಾಮ್ ಕರ್ರನ್ ಭಾರತಕ್ಕೆ ಸವಾಲಾಗಲಿದ್ದಾರೆ. ಜತೆಗೆ ಸ್ಪಿನ್ನರ್‌ಗಳಾದ ಮೋಯಿನ್ ಆಲಿ ಹಾಗೂ ಆದಿಲ್ ರಶೀದ್ ಕೂಡ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಬಲ್ಲರು.