ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ, ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಮತ್ತು ಕೊನೇಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ಇನ್ನಿಂಗ್ಸ್ ಸಹಿತ 25 ರನ್ ಜಯ ಗಳಿಸಿದೆ. ರೋಹಿತ್ ಶರ್ಮಾ, ರಿಷಭ್ ಪಂತ್, ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಮತ್ತು ಅಕ್ಷರ್ ಪಟೇಲ್, ಆರ್ ಅಶ್ವಿನ್ ಬೌಲಿಂಗ್ ನೆರವಿನಿಂದ ಭಾರತ ಸರಣಿ ಗೆದ್ದು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ ಜಾನಿ ಬೇರ್ಸ್ಟೋವ್ 28, ಬೆನ್ ಸ್ಟೋಕ್ಸ್ 55, ಆಲಿ ಪೋಪ್ 29, ಡೇನಿಯಲ್ ಲಾರೆನ್ಸ್ 46 ರನ್ ಬಾರಿಸಿದ್ದರು. ಇಂಗ್ಲೆಂಡ್ 75.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 205 ರನ್ ಬಾರಿಸಿತ್ತು. ಭಾರತ ಪರ ಮೊಹಮ್ಮದ್ ಸಿರಾಜ್ 2, ಅಕ್ಷರ್ ಪಟೇಲ್ 4, ಆರ್ ಅಶ್ವಿನ್ 3, ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದಿದ್ದರು.
ಭಾರತ vs ಇಂಗ್ಲೆಂಡ್, 4ನೇ ಟೆಸ್ಟ್ ಪಂದ್ಯ, ಸ್ಕೋರ್‌ಕಾರ್ಡ್

ಭಾರತ ಭರ್ಜರಿ ಮುನ್ನಡೆ
ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 49, ಅಜಿಂಕ್ಯ ರಹಾನೆ 27, ರಿಷಭ್ ಪಂತ್ 101, ಚೇತೇಶ್ವರ ಪೂಜಾರ 17, ವಾಷಿಂಗ್ಟನ್ ಸುಂದರ್ 96, ಅಕ್ಷರ್ ಪಟೇಲ್ 43, ಆರ್ ಅಶ್ವಿನ್ 13 ರನ್ ಕೊಡುಗೆಯಿತ್ತರು. ಭಾರತ 114.4 ಓವರ್‌ಗೆ 10 ವಿಕೆಟ್ ಕಳೆದು 365 ರನ್ ಬಾರಿಸಿ 160 ರನ್ ಮುನ್ನಡೆ ಗಳಿಸಿತ್ತು.

ಅಕ್ಷರ್, ಅಶ್ವಿನ್ ಮಾರಕ ಬೌಲಿಂಗ್
ಆಂಗ್ಲರನ್ನು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಸಂಪೂರ್ಣವಾಗಿ ಕಾಡಿದ್ದು ಭಾರತ ಅಕ್ಷರ್ ಪಟೇಲ್ ಮತ್ತು ಆರ್ ಅಶ್ವಿನ್. ಇಬ್ಬರೂ ತಲಾ 5 ವಿಕೆಟ್ ಪಡೆದು ಮಿಂಚಿದರು. ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರನ್ ಕೊಡುಗೆ ನೀಡಿದ್ದೆಂದರೆ ಜೋ ರೂಟ್ 30, ಡೇನಿಯಲ್ ಲಾರೆನ್ಸ್ 50, ಆಲಿ ಪೋಪ್ 15 ಮತ್ತು ಬೆನ್ ಫೋಕ್ಸ್ 13 ಮಾತ್ರ. ಉಳಿದೆಲ್ಲರೂ ಒಂದಂಕಿ ರನ್‌ಗೆ ವಿಕೆಟ್ ನೀಡಿದ್ದು ಕಂಡುಬಂತು.

ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಭಾರತ
ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 54.5 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 135 ರನ್ ಬಾರಿಸಿತು. ಹೀಗಾಗಿ ಭಾರತ ದ್ವಿತೀಯ ಇನ್ನಿಂಗ್ಸ್ ಆಡದೆಯೇ 25 ರನ್‌ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 3-1ರಿಂದ ಗೆದ್ದಿರುವ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಫೈನಲ್ ನಲ್ಲಿ ಭಾರತ-ನ್ಯೂಜಿಲೆಂಡ್ ಸ್ಪರ್ಧಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications