ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್‌ನ ರೋಚಕತೆ ಹೆಚ್ಚಿಸಿದೆ. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಹಾಗೂ ಮಧ್ಯಮ ಕ್ರಮಾಂಕದ ಶುಭಮನ್ ಗಿಲ್ ಅವರ ಕೆಚ್ಚೆದೆಯ ಆಟದ ಬಲದಿಂದ ಭಾರತ ಡ್ರಾ ಕಣಸು ಕಾಣುತ್ತಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲಿದೆ. ಈ ವೇಳೆ ನಾಯಕ ಗಿಲ್ ಅರ್ಧಶತಕ ಬಾರಿಸಿ ಅಜೇಯರಾಗಿದ್ದು ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಪ್ರಸಕ್ತ ಸರಣಿಯಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್ ಗಿಲ್ ಸೊಗಸಾದ ಬ್ಯಾಟಿಂಗ್ ನಡೆಸಿದ್ದಾರೆ. ಇವರು ಈಗಾಗಲೇ ಹಲವು ದಾಖಲೆಗಳನ್ನು ಬರೆದಿದ್ದು, ಇನ್ನು ಹಲವು ದಾಖಲೆಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಶುಭಮನ್ ಗಿಲ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದ್ದಾರೆ. ಇವರು ಆಡಿರುವ ನಾಲ್ಕು ಟೆಸ್ಟ್ ಪಂದ್ಯಗಳ 8 ಇನಿಂಗ್ಸ್‌ಗಳಲ್ಲಿ 99.57ರ ಸರಾಸರಿಯಲ್ಲಿ 697 ರನ್ ಕಲೆ ಹಾಕಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ ಶುಭಮನ್ ಗಿಲ್ ಇನ್ನು ಮೂರು ರನ್ ಬಾರಿಸಿದರೆ 700 ರನ್ ಗಡಿ ದಾಟಬಹುದು.

ಶುಭಮನ್ ಗಿಲ್ 78 ರನ್‌ಗಳನ್ನು ತಮ್ಮ ಖಾತೆಗೆ ಸೇರಿಸಿದರೆ, ದೊಡ್ಡ ದಾಖಲೆ ಬರೆಯಲಿದ್ದಾರೆ. ವಿದೇಶಿ ನೆಲದಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಲಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಟೀಮ್ ಇಂಡಿಯಾದ ದಿಗ್ಗಜ ಬ್ಯಾಟಾರ್ ಸುನಿಲ್ ಗವಾಸ್ಕರ್ ಹೆಸರನಿಲ್ಲಿತ್ತು. ಇವರು 1971 ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅವರು 774 ರನ್ ಸಿಡಿಸಿದ್ದಾರೆ.
774, ಸುನಿಲ್ ಗವಾಸ್ಕರ್, ವೆಸ್ಟ್ ಇಂಡೀಸ್ ಪ್ರವಾಸ
697*, ಶುಭಮನ್ ಗಿಲ್, ಇಂಗ್ಲೆಂಡ್ ಪ್ರವಾಸ
692, ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ಪ್ರವಾಸ
642, ದಿಲೀಪ್ ಸರ್ದೇಸಾಯಿ, ವೆಸ್ಟ್ ಇಂಡೀಸ್ ಪ್ರವಾಸ

ಈ ಟೆಸ್ಟ್ ಪಂದ್ಯದಲ್ಲಿ ಶುಭಮನ್ ಗಿಲ್ ಇನ್ನು 114 ರನ್ ಬಾರಿಸುದಂತೆ ಮತ್ತೊಂದು ದಾಖಲೆ ನಿರ್ಮಿಸಲಿದ್ದಾರೆ. ಈ ಮೂಲಕ ಇವರು ಆಸ್ಟ್ರೇಲಿಯಾದ ದಿಗ್ಗಜದ ಬ್ಯಾಟರ್ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಅಳಿಸಬಹುದು. ನಾಯಕರಾಗಿ ಡಾನ್ ಬ್ರಾಡ್ಮನ್ 810 ರನ್ ಸಿಡಿಸಿದ್ದಾರೆ.
ಡಾನ್ ಬ್ರಾಡ್ಮನ್, 810 ರನ್
ಗ್ರಹಾಂ ಗೂಚ್, 752 ರನ್
ಸುನಿಲ್ ಗವಾಸ್ಕರ್, 732 ರನ್
ಡೇವಿಡ್ ಗೋವರ್, 732 ರನ್
ಗ್ಯಾರಿ ಸೋಬರ್ಸ್, 722 ರನ್