ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಬುಧವಾರದಿಂದ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದ ಒತ್ತಡದಲ್ಲಿ ಸಿಲುಕಿದೆ. ಈ ಸರಣಿ ಸಮಬಲ ಸಾಧಿಸಲು ಟೀಮ್ ಇಂಡಿಯಾಗೆ ಇದು ಒಳ್ಳೆಯ ಅವಕಾಶ. ಹೀಗಾಗಿ ಟೀಮ್ ಇಂಡಿಯಾ ಅಳೆದು ತೂಗಿ ಆಟಗಾರರನ್ನು ಕಣಕ್ಕೆ ಇಳಿಸಲಿದೆ. ಹಿಂದಿನ ಮೂರು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಪಡೆದು ವಿಶೇಷ ಸಾಧನೆಯನ್ನು ಏನು ಮಾಡದ ಕನ್ನಡಿಗ ಕರುಣ್ ನಾಯರ್ ಅವರಿಗೆ ಗೇಟ್ ಪಾಸ್ ನೀಡುವ ಸಾಧ್ಯತೆ ಇದೆ.
ಇಂಗ್ಲೆಂಡ್ ನೆಲದಲ್ಲಿ ಕರ್ನಾಟಕದ ಕರುಣ್ ನಾಯರ್‌ಗೆ ಮೂರು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ನೀಡಲಾಯಿತು. ಆದರೆ ಅವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಇವರು ನೆಲಕಚ್ಚಿ ಬ್ಯಾಟ್ ಮಾಡಿದರೂ ಸಹ ಯಾವ ಇನಿಂಗ್ಸ್‌ನಲ್ಲೂ ದೊಡ್ಡ ಸ್ಕೋರ್ ಮಾಡಲಿಲ್ಲ. ಹೀಗಾಗಿ ಟೀಮ್ ಮ್ಯಾನೇಜ್ಮೆಂಟ್ ಫಾರ್ಮ್‌ನಲ್ಲಿರುವ ಆಟಗಾರರನನ್ನು ಹುಡುಕುತ್ತಿದೆ. ಒಂದು ವೇಳೆ ಕರುಣ್ ನಾಯರ್‌ಗೆ ಅವರು ಬೆಂಚ್ ಕಾಯ್ದಲ್ಲಿ ಯಾವೆಲ್ಲಾ ಆಟಗಾರರಿಗೆ ಅವಕಾಶ ಸಿಬಹುದು ಎಂಬ ಪ್ರಶ್ನೆಗಳು ಎದ್ದಿವೆ.

ಕರುಣ್ ನಾಯರ್ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಬಲದಿಂದ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸುವ ಅವಕಾಶವನ್ನು ಪಡೆದುಕೊಂಡರು. ಆದರೆ ಇಂಗ್ಲೆಂಡ್ ನೆಲದಲ್ಲಿ ಇವರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಸತತ್ರಾಂಶ ಎರಡು ಟೆಸ್ಟ್ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೂ ಸಹ ಕರುಣ್ ರನ್ ಗುಡ್ಡೆ ಹಾಕಲಿಲ್ಲ. ಹೀಗಾಗಿ ಇವರ ಸ್ಥಾನದ ಮೇಲೆ ಅಪಾಯದ ತುಗುಗತ್ತಿ ನೇತಾಡುತ್ತಿದೆ. ಇನ್ನು ಹಿರಿ ಆಟಗಾರರು ಇವರಿಗೆ ಈ ಸರಣಿಯಲ್ಲಿ ಇನ್ನೊಂದು ಚಾನ್ಸ್ ನಿಡಬೇಕು ಎಂದು ಹೇಳುತ್ತಿದ್ದಾರೆ.
ಕರುಣ್ ನಾಯರ್ ನಿಜಕ್ಕೂ ಪ್ರತಿಭಾವಂತ ಆಟಗಾರ. ಇವರು ದೇಶೀಯ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ವಿದರ್ಭ ಪರ ಕಳೆದ ದೇಶೀಯ ಆವೃತ್ತಿಯಲ್ಲಿ ಕರುಣ್ ರನ್ ಗುಡ್ಡೆ ಹಾಕಿದ್ದು ಅಲ್ಲದೆ ಎಲ್ಲರ ಚಿತ್ತವನ್ನು ಸಹ ಕದ್ದಿದ್ದರು. ಇವರ ಕ್ಲಾಸಿಕ್ ಆಟದ ಪರಿಣಾಮವೇ ವಿದರ್ಭ ರಣಜಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.

ಒಂದು ವೇಳೆ ಕರುಣ್ ನಾಯರ್‌ಗೆ ಚಾನ್ಸ್ ಸಿಗದೇ ಇದ್ದಲ್ಲಿ ಯಾರು ಮೂರನೇ ಕ್ರಮಾಂಕದಲ್ಲಿ ಆಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಅಂದಹಾಗೆ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಸಾಯಿ ಸುದರ್ಶನ್ ಹಾಗೂ ದೇಶಿಯ ಟೂರ್ನಿಯಲ್ಲಿ ಅಬ್ಬರಿಸಿರುವ ಅವರದ್ದೇ ರಾಜ್ಯದ ಅಭಿಮನ್ಯು ಈಶ್ವರನ್ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು. ಈಗಾಗಲೇ ಸಾಯಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹೀಗಾಗಿ ಅಭಿಮನ್ಯೂ ಈಶ್ವರನ್ ಅವರಿಗೆ ಅವಕಾಶ ಸಿಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಈಗಾಗಲೇ ಇಂಗ್ಲೆಂಡ್ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದರಿಂದ ಈ ಪಂದ್ಯ ಕುತೂಹಲ ಹೆಚ್ಚಿಸಿದೆ.