10731 ರನ್, 371 ವಿಕೆಟ್ ಪಡೆದ ಪ್ಲೇಯರ್ ಇಂಗ್ಲೆಂಡ್ ತಂಡಕ್ಕೆ ಎಂಟ್ರಿ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯ ಮುಗಿದಿದೆ. ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯವನ್ನು 22 ರನ್‌ಗಳಿಂದ ಗೆದ್ದ, 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿದೆ. ಈಗ ನಾಲ್ಕನೇ ಟೆಸ್ಟ್‌ನತ್ತ ಎಲ್ಲರ ಗಮನ ನೆಟ್ಟಿದೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಇಂಗ್ಲೆಂಡ್ ತನ್ನ ತಂಡವನ್ನು ಪ್ರಕಟಿಸಿದೆ.
ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಗಾಯಕ್ಕೆ ತುತ್ತಾಗಿದ್ದ ಇಂಗ್ಲೆಂಡ್ ಸ್ಪಿನ್ ಬೌಲರ್ ಶೋಯೆಬ್ ಬಶೀರ್ ಅವರನ್ನು ಮುಂದಿನ ಟೆಸ್ಟ್ ಪಂದ್ಯದಿಂದ ಕೈ ಬಿಡಲಾಗಿದೆ. ಇವರ ಬದಲಿಗೆ ಲಿಯಾಮ್ ಡಾಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಲಿಯಾಮ್ ಡಾಸನ್ 8 ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಇವರ ಹೆಸರು ತಂಡದಲ್ಲಿ ಸೇರಿಕೊಳ್ಳುತ್ತಿದ್ದಂತೆ ಇವರ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಇಂಗ್ಲೆಂಡ್ ತಂಡ ಯುವ ಸ್ಪಿನ್ ಬೌಲರ್ ಬದಲಿಗೆ 35 ವರ್ಷದ ಲಿಯಾಮ್ ಡಾಸನ್ ಸ್ಥಾನ ಪಡೆದಿದ್ದಾರೆ. ಇವರು ಈಗಾಗಲೇ ಒಟ್ಟು 3 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರು 2017ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡದ ಆಡಿದ್ದಾರೆ. ಅದಿನಿಂದ ಅವರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ಹೆಣಗಾಟ ನಡೆಸಿದ್ದರು. ಇವರು ಇಲ್ಲಿಯವರೆಗೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಒಟ್ಟು 212 ಪಂದ್ಯಗಳನ್ನು ಪಡೆದಿದ್ದಾರೆ. ಇವರು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲೂ ಕಾಣಿಕೆ ನೀಡಬಲ್ಲ ಪ್ಲೇಯರ್. ಹೀಗಾಗಿ ಇವರ ಮೇಲೆ ತಂಡ ಭರವಸೆ ಹೆಚ್ಚಿದೆ.
ಲಿಯಾಮ್ ಡಾಸನ್ ಸಾಧನೆ
ಸ್ಪಿನ್ ಬೌಲರ್ ಬಶೀರ್ ಅವರ ಬದಲಿಗೆ ಸ್ಥಾನ ಪಡೆದ ಲಿಯಾಮ್ ಡಾಸನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರುನ 341 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದು 10731 ರನ್ ಕಲೆ ಹಾಕಿದ್ದಾರೆ. ಈ ವೇಳೆ 18 ಶತಕ, 56 ಅರ್ಧಶತಕ ಸಿಡಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲೂ ಇವರು ಸ್ಥಿರ ಪ್ರದರ್ಶನ ನೀಡಿದ್ದು, 371 ವಿಕೆಟ್ ಪಡೆದಿದ್ದಾರೆ. ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಲಿಯಾಮ್ ಡಾಸನ್ 51 ರನ್‌ಗೆ 7 ವಿಕೆಟ್ ಪಡೆದಿದ್ದು ಶ್ರೇಷ್ಠ ಪ್ರದರ್ಶನ. ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ಇವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗುತ್ತದಾ ಎಂಬುದನ್ನು ಕಾದು ನೋಡಬೇಕಿದೆ.
ಭಾರತದ ವಿರುದ್ಧದ ತವರಿನಲ್ಲಿ ನಡೆಯುತ್ತಿರುವ ಸರಣಿಗೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಿತು. ಈ ವೇಳೆ ಚುಟುಕು ಫಾರ್ಮೆಟ್‌ನಲ್ಲಿ ಲಿಯಾಮ್ ಡಾಸನ್ ಅವರಿಗೆ ಆಡುವ ಅವಕಾಶವನ್ನು ಪಡೆದಿದ್ದರು. ಈ ವೇಳೆ ಇವರು ಆಡಿದ 3 ಪಂದ್ಯಗಳಲ್ಲಿ 5 ವಿಕೆಟ್ ಕಬಳಿಸಿ ಭರವಸೆ ಮೂಡಿಸಿದ್ದರು. ಹೀಗಾಗಿ ಇವರ ಮೇಲೆ ಇಂಗ್ಲೆಂಡ್ ಆಯ್ಕೆ ಸಮಿತಿ ವಿಶ್ವಾಸ ಇಟ್ಟುಕೊಂಡಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಚಾನ್ಸ್ ಸಿಗುತ್ತಾ ಕಾದು ನೋಡಬೇಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications