Rishabh Pant: 3 ಸಿಕ್ಸರ್ ಬಾರಿಸುತ್ತಿದಂತೆ ಇತಿಹಾಸ ಬರೆಯಲಿರುವ ರಿಷಭ್ ಪಂತ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್ ಪಂದ್ಯ ಜುಲೈ 23 ರಂದು ನಡೆಯಲಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಟಗಾರರು ಹಲವು ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಇನ್ನು ಟೀಮ್ ಇಂಡಿಯಾದ ಆಟಗಾರರು ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಶುಭಮನ್ ಗಿಲ್ ಸರಣಿಯಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರೆ, ರಿಷಭ್ ಪಂತ್ ಹೆಡಿಂಗ್ಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದ್ದರು.
ರಿಷಭ್ ಪಂತ್ ಪ್ರಸಕ್ತ ಸರಣಿಯಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆದರೆ ಲಾರ್ಡ್ಸ್ ಟೆಸ್ಟ್ ವೇಳೆ ರಿಷಭ್ ಪಂತ್‌ಗೆ ಗಾಯವಾಗಿದ್ದರಿಂದ ಇವರು ಮೊದಲ ಇನಿಂಗ್ಸ್ ಅರ್ಧದಲ್ಲಿ ಹಾಗೂ ಎರಡನೇ ಇನಿಂಗ್ಸ್ ಪೂರ್ಣ ವೇಳೆ ಮೈದಾನದಿಂದ ದೂರ ಉಳಿದಿದ್ದರು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟ್ ಮಾಡುವ ವೇಳೆ ರಿಷಭ್ ಪಂತ್ ಗಾಯ ಮಾಸದ ರೀತಿ ಕಂಡು ಬಂದಿತು. ಆದರೆ ಇವರು ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರಾ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಎದ್ದಿವೆ.

3 ಸಿಕ್ಸರ್ ಅವಶ್ಯಕ
ಮ್ಯಾಂಚೆಸ್ಟರ್ ಟೆಸ್ಟ್‌ನಲ್ಲಿ ರಿಷಭ್ ಪಂತ್ ಆಡುವುದು ಖಚಿತ ಎಂದು ವಿಡಿಯೋ ಒಂದು ಹೇಳುತ್ತಿದೆ. ರಿಷಭ್ ಪಂತ್ ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವಲ್ಲಿ ಸಫಲರಾಗಿ ಮೂರು ಸಿಕ್ಸರ್‌ಗಳನ್ನು ಭಾರಿಸುವಲ್ಲಿ ಯಶಸ್ವಿಯಾದಲ್ಲಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ಇತಿಹಾಸವನ್ನು ಬರೆಯಬಹುದಾಗಿದೆ. ರಿಷಭ್ ಪಂತ್ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿರುವ 3 ಪಂದ್ಯಗಳ 6 ಇನಿಂಗ್ಸ್‌ಗಳಲ್ಲಿ 425 ರನ್ ಸಿಡಿಸಿದ್ದಾರೆ. ಈ ವೇಳೆ 46 ಬೌಂಡರಿ ಹಾಗೂ 15 ಸಿಕ್ಸರ್ ಸಿಡಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಎರಡನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ.
ರಿಷಭ್ ಪಂತ್ ಒಟ್ಟಾರೆ 46 ಟೆಸ್ಟ್ ಪಂದ್ಯಗಳಲ್ಲಿ 88 ಸಿಕ್ಸರ್ ಸಿಡಿಸಿದ್ದಾರೆ. ಇವರಿಗಿಂತ ಮುಂಚೂಣಿಯಲ್ಲಿ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರಿಗೆ ಸಲ್ಲುತ್ತದೆ. ಇವರು 103 ಟೆಸ್ಟ್ ಪಂದ್ಯಗಳಲ್ಲಿ 90 ಸಿಕ್ಸರ್ ಸಿಡಿಸಿದ್ದಾರೆ. ಈ ದಾಲೆಯನ್ನು ಅಳಿಸಲು ರಿಷಭ್ ಪಂತ್ ಅವರಿಗೆ ಇನ್ನು ಮೂರು ಸಿಕ್ಸರ್ ಅವಶ್ಯಕತೆ ಇದೆ.

ಟೀಮ್ ಇಂಡಿಯಾ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರು
ವೀರೇಂದ್ರ ಸೆಹ್ವಾಗ್, 103 ಪಂದ್ಯ, 90 ಸಿಕ್ಸರ್
ರಿಷಭ್ ಪಂತ್, 46 ಪಂದ್ಯ, 88 ಸಿಕ್ಸರ್
ರೋಹಿತ್ ಶರ್ಮಾ, 67 ಪಂದ್ಯ, 88 ಸಿಕ್ಸರ್
ಮಹೇಂದ್ರ ಸಿಂಗ್ ಧೋನಿ, 90 ಪಂದ್ಯ, 78 ಸಿಕ್ಸರ್
ರವೀಂದ್ರ ಜಡೇಜಾ, 83 ಪಂದ್ಯ, 74 ಸಿಕ್ಸರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications