ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಹಲವು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದಿದೆ. ಟಾಸ್ ಸೋತರೂ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡಿದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಬೌಲರ್‌ಗಳಿಗೆ ಸಹಾಯವಾಗಬಹುದು ಎಂದು ಅಂದಾಜಿಸಿದ್ದ ಇಂಗ್ಲೆಂಡ್ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ ಇಂಗ್ಲೆಂಡ್ ಬೌಲರ್‌ಗಳು ಬಿಗುವಿನ ದಾಳಿ ನಡೆಸಿದ್ದಾರೆ. ಆದರೆ ರನ್‌ಗಳನ್ನು ಸುಲಭವಾಗಿ ನೀಡದೆ ಕಾಡಿದರು. ಟೀಮ್ ಇಂಡಿಯಾ ಬ್ಯಾಟರ್‌ಗಳು ಸಹ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದರು.
ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಮೂರು ಟೆಸ್ಟ್‌ಗಳಲ್ಲಿ ಬ್ಯಾಟ್ ಮಾಡುವ ಅವಕಾಶವನ್ನು ಪಡೆದ ಕರುಣ್ ನಾಯರ್, ಇಂಗ್ಲೆಂಡ್ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರ ಸ್ಥಾನದಲ್ಲಿ ಸಾಯಿ ಸುದರ್ಶನ್ ಅವರಿಗೆ ಅವಕಾಶ ನೀಡಲಾಯಿತು. ಈ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಸಾಯಿ ಸುದರ್ಶನ್ ತಮ್ಮ ಮೇಲೆ ಮ್ಯಾನೇಜ್ಮೆಂಟ್ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಿದರು.

ಸಾಯಿ ಸುದರ್ಶನ್ ಅವರಿಗೆ ಮೊದಲ ಟೆಸ್ಟ್‌ನಲ್ಲೂ ಆಡುವ ಅವಕಾಶ ಲಭಿಸಿತ್ತು. ಆದರೆ ಈ ವೇಳೆ ಇವರು ರನ್ ಕಲೆ ಹಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರನ್ನು ಮುಂದಿನ ಎರಡು ಟೆಸ್ಟ್ ಪಂದ್ಯಗಳಿಂದ ಕೈ ಬಿಡಲಾಗಿತ್ತು. ಆದರೆ ನಾಲ್ಕನೇ ಟೆಸ್ಟ್‌ನಲ್ಲಿ ಸಾಯಿ ಸುದರ್ಶನ್ ಅವರಿಗೆ ಆಡುವ ಅವಕಾಶ ಸಿಕ್ಕಿತು. ಇವರು ಈ ಅವಕಾಶವನ್ನು ಬಳಸಿಕೊಂಡು ರನ್ ಬಾರಿಸಿದರು. ಇವರು 151 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 61 ರನ್ ಬಾರಿಸಿದರು. ಈ ಮೂಲಕ ಮೂರನೇ ಕ್ರಮಾಂಕಕ್ಕೆ ನಾನು ಸೂಟ್ ಆಗಬಲ್ಲೇ ಎಂಬುದನ್ನು ಸಾರಿ ಹೇಳಿದ್ದಾರೆ.
ಟೀಮ್ ಇಂಡಿಯಾ ಪರ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಕನ್ನಡಿಗ ಕರುಣ್ ನಾಯರ್, ನಾಲ್ಕು ಇನಿಂಗ್ಸ್‌ನಲ್ಲಿ ಒಂದೇ ಒಂದು ಅರ್ಧಶತಕ ಬಾರಿಸಿರಲಿಲ್ಲ. ಆದರೆ ಸಾಯಿ ಸುದರ್ಶನ್ ಮ್ಯಾಂಚೆಸ್ಟರ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಈ ಮೂಲಕ ತಮ್ಮ ಮೇಲೆ ಮ್ಯಾನೇಜ್ಮೆಂಟ್ ಚಿತ್ತ ಕದಿದ್ದಾರೆ. ಇವರು ಐಪಿಎಲ್‌ನಲ್ಲಿ ಮಾಡಿದ ರೀತಿ ಬ್ಯಾಟ್ ಮಾಡಿ ಚಿತ್ತ ಕದ್ದಿದ್ದಾರೆ. ಪಕ್ಕಾ ಟೆಸ್ಟ್ ಬ್ಯಾಟರ್ ರೀತಿ ಬ್ಯಾಟ್ ಮಾಡಿರುವ ಸಾಯಿ ಸುದರ್ಶನ್ ಅಬ್ಬರಿಸಿದರು.

ಕರುಣ್ ನಾಯರ್ ಕಳೆದ ಎರಡು ಟೆಸ್ಟ್ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಇವರಿಗೂ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಒಳ್ಳೆಯ ಆರಂಭ ಸಿಕ್ಕಿತು. ಆದರೆ ಸಿಕ್ಕ ಆರಂಭವನ್ನು ಬಿಗ್ ಸ್ಕೋರ್ ಆಗಿ ಪರಿವರ್ತಿಸುವಲ್ಲಿ ಕರುಣ್ ನಾಯರ್ ವಿಫಲರಾಗಿದ್ದಾರೆ. ಹೀಗಾಗಿ ಕರುಣ್ ನಾಯರ್ ಕೈ ಬಿಡಲಾಯಿತು. ಸಾಯಿ ಸುದರ್ಶನ್ ನಾಲ್ಕನೆ ಟೆಸ್ಟ್ ಪಂದ್ಯದಲ್ಲಿ ಜೊತೆಯಾಟಗಳನ್ನು ನೀಡಿ ತಂಡಕ್ಕೆ ಅಧಾರವಾದರು. ಈ ಮೂಲಕ ತಮಗೆ ಸ್ಥಾನ ನೀಡಿದ ನಾಯಕನ ವಿಶ್ವಾಸ ಉಳಿಸಿಕೊಂಡಿದ್ದಾರೆ.