4th Test: ಮಹತ್ವದ ಟೆಸ್ಟ್‌ಗೆ ಮ್ಯಾಂಚೆಸ್ಟರ್ ತಲುಪಿದ ಭಾರತ, ಭರದ ಅಭ್ಯಾಸ
ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಬುಧವಾರ (ಜುಲೈ 23) ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾಗವಹಿಸಲು ಟೀಮ್ ಇಂಡಿಯಾ ರೈಲಿನಲ್ಲಿ ಪ್ರಯಾಣ ಬೆಳಿಸಿ ಮ್ಯಾಂಚೆಸ್ಟರ್ ತಲುಪಿತು. ಈ ವೇಳೆ ಕೊಂಚ ಮಳೆ ಸಹ ಇದ್ದು, ಆಟಗಾರರನ್ನು ಮಳೆ ಸ್ವಾಗತಿಸಿದೆ. ಬಿಸಿಸಿಐ ಟೀಮ್ ಇಂಡಿಯಾ ಮ್ಯಾಂಚೇಸ್ಟರ್ ತಲುಪಿರುವ ಚಿತ್ರಗಳನ್ನು ಸಾಮಾಜಿಕ ತಾಣದಲ್ಲಿ ಕಾಣಿಸಿಕೊಂಡಿವೆ.
ಬಿಸಿಸಿಐ ಹಂಚಿಕೊಂಡಿರುವ ಚಿತ್ರದಲ್ಲಿ ನಾಯಕ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಕಾಣಿಸಿಕೊಂಡಿದ್ದಾರೆ. ಈ ದೃಶ್ಯದಲ್ಲಿ ಟೀಮ್ ಇಂಡಿಯಾ ಆಟಗಾರರು ರೈಲು ಇಳಿದು, ಬಸ್ ಪ್ರಯಾಣ ಬೆಳೆಸುತ್ತಿರುವುದನ್ನು ಕಾಣಬಹುದಾಗಿದೆ. ಇದೇ ವೇಳೆ ಟೀಮ್ ಇಂಡಿಯಾ ಬೆಕೆನ್‌ಹ್ಯಾಮ್‌ನಲ್ಲಿ ತರಬೇತಿ ಶಿಬಿರವನ್ನು ಸಹ ಮಾಡಿತು. ಈ ವೇಳೆ ಟೀಮ ಇಂಡಿಯಾದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರನ್ನು ಹೊರತು ಪಡಿಸಿ ಉಳಿದ ಆಟಗಾರರು ಎಲ್ಲ ಹಾಜರಿದ್ದರು.

ಲಾರ್ಡ್ಸ್‌ನಲ್ಲಿ ಟೀಮ್ ಇಂಡಿಯಾ ಸೋಲಿನ ಬಳಿಕ, ತಂಡ ಗೆಲುವಿನ ಟ್ರ್ಯಾಕ್‌ಗೆ ಮರಳಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ಮೈದಾನದಲ್ಲಿ ಬೆವರು ಹರಿಸಿತು. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯಕ್ಕೂ ಮುನ್ನ ಗಿಲ್ ಪಡೆ, ಮೂರು ದಿನ ಅಭ್ಯಾಸ ನಡೆಸಲಿದೆ. ಮೊದಲ ದಿನ ಅಭ್ಯಾಸ ಪಂದ್ಯ ಇನ್‌ಡೋರ್ ಪ್ರ್ಯಾಕ್ಟಿಸ್ ನಡೆಸಲಿದೆ. ಉಳಿದ ಎರಡು ದಿನಗಳ ಅಭ್ಯಾಸದ ಪಂದ್ಯ ವರದಿಯನ್ನು ಮಾಡಲು ಮಾಧ್ಯಮಕ್ಕೆ ಅವಕಾಶ ನೀಡಲಾಗಿದೆ.
ಅರ್ಷದೀಪ್‌ಗೆ ಗಾಯ
ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ತಂಡವನ್ನು ಸೇರಿಕೊಳ್ಳುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿವೆ. ಟೀಮ್ ಇಂಡಿಯಾದ ಭರವಸೆಯ ಆಟಗಾರ ಅರ್ಷ್‌ದೀಪ್ ಸಿಂಗ್ ಅಭ್ಯಾಸದ ವೇಳೆ ಗಾಯಕ್ಕೆ ತುತ್ತಾಗಿದ್ದಾರೆ. ಇವರು ಅಭ್ಯಾಸದ ವೇಳೆ ಚೆಂಡನ್ನು ತಡೆಯಲು ಹೋಗಿದ್ದರಿಂದ, ಇವರ ಎಡಗೈಗೆ ಗಾಯವಾಗಿತ್ತು. ಹೀಗಾಗಿ ಇವರು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವ ಆಸೆ ಕೊಂಚ ದೂರ ಸರಿದಂತೆ ಕಾಣುತ್ತಿದೆ. ಇವರು ನಾಲ್ಕನೇ ಟೆಸ್ಟ್‌ಗೂ ಮುನ್ನ ಗಾಯದಿಂದ ಚೇತರಿಸಿಕೊಳ್ಳುತ್ತಾರಾ ಎಂಬ ಪ್ರಶ್ನೆಗಳು ಉದ್ಭವಿಸಿವೆ.
ತಂಡದ ಸಂಯೋಜನೆ ದೊಡ್ಡ ಚಿಂತೆ
ಟೀಮ್ ಇಂಡಿಯಾ ಈ ಟೆಸ್ಟ್‌ನಲ್ಲಿ ಯಾವ ಕಾಂಬಿನೇಷನ್ ಜೊತೆ ಕಣಕ್ಕೆ ಇಳಿಯುತ್ತದೆ ಎಂಬ ಪ್ರಶ್ನೆಗಳು ಎದ್ದಿವೆ. ಟೀಮ್ ಇಂಡಿಯಾ ಈ ಟೆಸ್ಟ್ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಟೀಮ ಇಂಡಿಯಾ ಮ್ಯಾಂಚೆಸ್ಟರ್‌ನಲ್ಲಿ ಭರ್ಜರಿ ಪ್ರದರ್ಶನ ನೀಡುವ ಇರಾದೆಯನ್ನು ಹಾಕಿಕೊಂಡಿದೆ. ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ 22 ರನ್ ಸೋಲು ಕಂಡಿದ್ದರಿಂದ ಸರಣಿಯಲ್ಲಿ ಹಿನ್ನಡೆ ಅನುಭವಿಸಿತ್ತು. ನಾಲ್ಕನೇ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-2ರ ಸಮಬಲ ಸಾಧಿಸುವ ಇರಾದೆಯನ್ನು ಟೀಮ್ ಇಂಡಿಯಾ ಹೊಂದಿದೆ.

ಭಾರತ ಈ ಟೆಸ್ಟ್ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸಿದೆ. ಈ ಪಂದ್ಯದಲ್ಲಿ ಶುಭಮನ್ ಗಿಲ್ ದಾಖಲೆ ಬರೆಯುತ್ತಾರಾ ಎಂಬುದರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications