ಭಾರತ vs ಇಂಗ್ಲೆಂಡ್: 5 ವಿಕೆಟ್ ಗೊಂಚಲು ಪಡೆದು ಕೆಳ ಕ್ರಮಾಂಕಕ್ಕೆ ಕಂಟಕವಾದ ಜೋ ರೂಟ್

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧಧ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಬೌಲಿಂಗ್ ಪಡೆ ಕೂಡ ಯಶಸ್ಸು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಭಾರತ ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟಿಂಗ್ ಪಡೆಯನ್ನು ಶೀಘ್ರವಾಗಿ ಪಡೆಯುವಲ್ಲಿ ಇಂಗ್ಲೆಂಡ್ ಪಡೆ ಯಶಸ್ವಿಯಾಗಿದೆ.
ಎರಡನೇ ದಿನದಾಟದ ಬೌಲಿಂಗ್‌ನಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಅದ್ಭುತ ಯಶಸ್ಸನ್ನು ಪಡೆದರು. ಭಾರತದ ಐದು ವಿಕೆಟ್ ಪಡೆಯುವಲ್ಲಿ ಇಂಗ್ಲೆಂಡ್ ನಾಯಕ ಯಶಸ್ವಿಯಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಶೀಘ್ರ ಕುಸಿತಕ್ಕೆ ಜೋ ರೂಟ್ ಕಾರಣರಾದರು. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜೋ ರೂಟ್ ಅವರ ಮೊದಲ ಐದು ವಿಕೆಟ್ ಗೊಂಚಲು ಆಗಿದೆ.
ಭಾರತದ ಮೊದಲ ವಿಕೆಟ್ ವೇಗಿ ಜೋಫ್ರಾ ಆರ್ಚರ್ ಪಾಲಾದರೆ ಬಳಿಕ ಜಾಕ್ ಲೀಚ್ ಸ್ಪಿನ್ ಮೋಡಿ ಮಾಡಿ ಭಾರತಕ್ಕೆ ಆಘಾತ ನೀಡಿದರು. ಆದರೆ ಬಳಿಕ ಜೋ ರೂಟ್ ಟೀಮ್ ಇಂಡಿಯಾದ ಕೆಳ ಕ್ರಮಾಂಕವನ್ನು ಅಗ್ಗಕ್ಕೆ ಉರುಳುವಂತೆ ಮಾಡಿದರು.
ಮೊದಲಿಗೆ ರಿಷಬ್ ಪಂತ್ ವಿಕೆಟ್ ಪಡೆದ ಜೋ ರೂಟ್, ನಂತರ ವಾಶಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡುವಲ್ಲಿ ಯಶಸ್ವಿಯಾದರು. ನಂತರ ರವಿಚಂದ್ರನ್ ಅಶ್ವಿನ್ ಕೂಡ ಇಂಗ್ಲೆಂಡ್ ನಾಯಕನಿಗೆ ಬಲಿಯಾದರು. ಅದಾದ ಬಳಿಕ ಜಸ್ಪ್ರಿತ್ ಬೂಮ್ರಾ ಕೂಡ ಜೋ ರೂಟ್‌ಗೆ ವಿಕೆಟ್ ಒಪ್ಪಿಸಿದರು.
ಈ ಮೂಲಕ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಐದು ವಿಕೆಟ್‌ಗಳು ಜೋ ರೂಟ್ ಪಾಲಾಗಿದೆ. 6.2 ಓವರ್‌ಗಳನ್ನು ಎಸೆತ ಜೋ ರೂಟ್ 8 ರನ್ ನೀಡಿ 5 ವಿಕೆಟ್ ಪಡೆದುಕೊಂಡರು. 1982ರ ನಂತರ ಇಂಗ್ಲೆಂಡ್ ತಂಡದ ನಾಯಕನೋರ್ವನ ಅತ್ಯುತ್ತಮ ಬೌಲಿಂಗ್ ಅಂಕಿಅಂಶ ಇದಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications