ಭಾರತ vs ಇಂಗ್ಲೆಂಡ್: ಟಿ20ಐ ಸರಣಿಗೆ 50 ಶೇ. ಪ್ರೇಕ್ಷಕರಿಗೆ ಅನುಮತಿ

ಅಹ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20ಐ ಸರಣಿಗೆ ಅಹ್ಮದಾಬಾದ್ ಸ್ಟೇಡಿಯಂಗೆ ಶೇ. 50ರಷ್ಟು ವೀಕ್ಷಕರಿಗೆ ಅನುಮತಿ ನೀಡಲಾಗಿದೆ. ಐದು ಪಂದ್ಯಗಳ ಟಿ20ಐ ಸರಣಿ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.
ಭಾರತ vs ಇಂಗ್ಲೆಂಡ್ ಆರಂಭಿಕ ಟಿ20ಐ ಪಂದ್ಯ ಮೊಟೆರಾ (ಈಗಿನ ಮೋದಿ) ಸ್ಟೇಡಿಯಂನಲ್ಲಿ ಮಾರ್ಚ್ 12ರಂದು 7 pmಗೆ ಆರಂಭಗೊಳ್ಳಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಭಾರತ 3-1ರಿಂದ ಗೆದ್ದು ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
'ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸರಣಿಯ ಎಲ್ಲಾ ಟಿ20 ಪಂದ್ಯಗಳಿಗೂ ನಾವು ಶೇ.50ರಷ್ಟು ಆಸನವನ್ನು ಮಾತ್ರ ಬಳಸಿಕೊಳ್ಳಲಿದ್ದೇವೆ. ಕೋವಿಡ್-19 ಕಾರಣ ಈ ನಿರ್ಧಾರ ತಾಳಿದ್ದೇವೆ. ಶೇ. 50ರಷ್ಟು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ವಿತರಿಸಲಿದ್ದೇವೆ,' ಎಂದು ಬಿಸಿಸಿಐ ಮೂಲ ತಿಳಿಸಿದೆ.
ವಿಶ್ವದ ಅತೀ ದೊಡ್ಡ ಸ್ಟೇಡಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನರೇಂದ್ರ ಮೋದಿ ಸ್ಟೇಡಿಯಂನ ಒಟ್ಟು ಸಾಮರ್ಥ್ಯ 132,000. ಇದರಲ್ಲಿ ಶೇ. 50ರಷ್ಟು ಮಂದಿಗೆ ಪಂದ್ಯ ವೀಕ್ಷಿಸಲು ಅನುಮತಿ ನೀಡಲಾಗುತ್ತದೆ. ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ಒಂದು ವೇಳೆ 4-1ರಿಂದ ಗೆದ್ದರೆ ರ್‍ಯಾಂಕಿಂಗ್‌ನಲ್ಲಿ ನಂ.1 ಸ್ಥಾನಕ್ಕೇರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications