Chris Woakes: ಇಂಗ್ಲೆಂಡ್ ಚಿಂತೆ ಹೆಚ್ಚಿಸಿದ ವೋಕ್ಸ್ ಗಾಯ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ಓವಲ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿ ದಿನದಾಟದಂತ್ಯಕ್ಕೆ 6 ವಿಕೆಟ್‌ಗೆ 204 ರನ್ ಕಲೆ ಹಾಕಿದೆ. ಕೊನೆಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅಲಭ್ಯರಾಗಿದ್ದಾರೆ. ಅವರು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, ವಿಶ್ರಾಂತಿ ಪಡೆದಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ಓಲಿ ಪೋಪ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ದಿನ ಇಂಗ್ಲೆಂಡ್ ತಂಡದ ಸ್ಟಾರ್ ಆಟಗಾರ ಗಾಯಕ್ಕೆ ತುತ್ತಾಗಿದ್ದಾರೆ.
ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ಕ್ರಿಸ್ ವೋಕ್ಸ್ ಸೊಗಸಾದ ದಾಳಿ ಸಂಘಟಿಸಿ, ಟೀಮ್ ಇಂಡಿಯಾದ ಭರವಸೆಯ ಆಟಗಾರ ಕೆಎಲ್ ರಾಹುಲ್ ಅವರನ್ನು ಬೋಲ್ಡ್ ಮಾಡಿದರು. ಆದರೆ ಇವರು ಕರುಣ್ ನಾಯರ್ ಬಾರಿಸಿದ ಚೆಂಡನ್ನು ತಡೆಯಲು ಹೋಗಿ ಗಾಯಕ್ಕೆ ತುತ್ತಾಗಿದ್ದಾರೆ. ಈ ಗಾಯ ಇಂಗ್ಲೆಂಡ್ ತಂಡಕ್ಕೆ ಬಹುವಾಗಿ ಕಾಡಬಹುದು ಎಂಬ ಸಂಶಯ ಶುರುವಾಗಿದೆ.

ಗುರುವಾರ ಮಿಡ್ ಆಫ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕ್ರಿಸ್ ವೋಕ್ಸ್ ಚೆಂಡನ್ನು ನಿಲ್ಲಿಸಲು ಓಡಿದರು. ಚೆಂಡನ್ನು ತಡೆಯಲು ವೋಕ್ಸ್ ಸಫಲರಾದರು. ಆದರೆ ಇವರು ಬಿಳುವಾಗ ಕೈಗೆ ಗಾಯ ಮಾಡಿಕೊಂಡರು. ಚೆಂಡನ್ನು ತಡೆದು ಬೌಂಡರಿ ಗೆರೆ ದಾಟಿ ಬಿದ್ದಾಗ ಇವರು ದೇಹದ ಪೂರ್ತಿ ಭಾರ ಇವರ ಎಡಗೈ ಮೇಲೆ ಬಿದ್ದಿತು. ಹೀಗಾಗಿ ಇವರು ಬೌಂಡರಿ ಲೈನ್ ಆಚೆಗೆ ಭುಜ ಹಿಡಿದು ನರಳಾಟ ನಡೆಸಿದರು.
ಇಂಗ್ಲೆಂಡ್ ಹೆಚ್ಚಿಸಿದ ಚಿಂತೆ
ಇಂಗ್ಲೆಂಡ್ ತಂಡದ ಫಿಸಿಯೋ ಸ್ಥಳಕ್ಕೆ ದೌಡಾಯಿಸಿ ವೋಕ್ಸ್ ಪರಿಸ್ಥಿತಿ ಪರಿಶೀಲಿಸಿದರು. ಬಳಿಕ ಅವರು ಹಾಕಿಕೊಂಡಿದ್ದ ಸ್ವೇಟರ್ ಬಳಸಿಕೊಂಡು ಮೈದಾನದಿಂದ ಹೊರ ನಡೆದರು. ಈ ಗಾಯದ ಬಗ್ಗೆ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ. ಭುಜದ ಮೂಳೆ ಸ್ಥಳಾಂತರಗೊಂಡಿದೆ. ಹೀಗಾಗಿ ಇವರು ಬೌಲಿಂಗ್ ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಪಂದ್ಯದ ಬಳಿಕ ಗಸ್ ಅಟ್ಕಿನ್ಸನ್ ಮಾತನಾಡಿದ್ದಾರೆ. ಅವರ ಗಾಯದ ಬಗ್ಗೆ ನನಗೆ ಹೆಚ್ಚಿನದ್ದು ತಿಳಿದಿಲ್ಲ. ಅವರು ಮೈದಾನದಿಂದ ಹೊರ ನಡೆದಿದ್ದು ನೋಡಿದರೆ ಬೇಸರವಾಗುತ್ತದೆ ಎಂದು ತಿಳಿಸಿದ್ದಾರೆ.
ಆಂಡರ್ಸನ್, ತೆಂಡುಲ್ಕರ್ ಸರಣಿಯಲ್ಲಿ ಕ್ರಿಸ್ ವೋಕ್ಸ್ ಅಮೋಘವಾಗಿ ಬೌಲಿಂಗ್ ನಡೆಸಿದ್ದಾರೆ. ಇವರು ಆಡಿದ 5 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ಅಬ್ಬರಿಸಿದ್ದಾರೆ. ಈ ಸರಣಿಯಲ್ಲಿ ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದ ಮೂರನೇ ಬೌಲರ್ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದರು.
ಪಂದ್ಯದ ಚಿತ್ರಣ
ಗುರುವಾರ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಕೆಎಲ್ ರಾಹುಲ್ (14), ಯಶಸ್ವಿ ಜೈಸ್ವಾಲ್ (2), ಸಾಯಿ ಸುದರ್ಶನ್ (38), ಶುಭಮನ್ ಗಿಲ್ (21), ರವೀಂದ್ರ ಜಡೇಜಾ (9), ಧ್ರುವ್ ಜುರೇಲ್ (19) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. 7ನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿರುವ ಕರುಣ್ ನಾಯರ್ (ಅಜೇಯ 52) ಹಾಗೂ ವಾಷಿಂಗ್ಟನ್ ಸುಂದರ್ (ಅಜೇಯ 19) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications