For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್, 5ನೇ ಟೆಸ್ಟ್: ಭಾರತ 6 ವಿಕೆಟ್ ನಷ್ಟಕ್ಕೆ 174 ರನ್

India vs England 5th Test Day 2 Live Cricket Score

ಲಂಡನ್, ಸೆಪ್ಟೆಂಬರ್ 8: ಲಂಡನ್ ನ ಕೆನ್ನಿಂಗ್ಟನ್ ನಲ್ಲಿರುವ ಓವಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ 122 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 332 ಬೃಹತ್ ರನ್ ಕಲೆ ಹಾಕಿದೆ. ಇನ್ನಿಂಗ್ಸ್ ಗೆ ಇಳಿದಿರುವ ಭಾರತ 6 ವಿಕೆಟ್ ಕಳೆದು 174 ರನ್ ಪೇರಿಸಿದೆ. ಜೇಮ್ಸ್ ಆ್ಯಂಡರ್ಸನ್ ಮತ್ತು ಬೆನ್ ಸ್ಟೋಕ್ಸ್ ತಲಾ ಎರಡು ವಿಕೆಟ್ ಕಳೆದು ಭಾರತವನ್ನ ಕಾಡಿದರು.

ಸ್ಕೋರ್ ಕಾರ್ಡ್ ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
42378

ಶನಿವಾರ (ಸೆ.8) ಮೊದಲ ಇನ್ನಿಂಗ್ಸ್ ಇಂಗ್ಲೆಂಡ್ ಗೆ ಅಲಾಸ್ಟೇರ್ ಕುಕ್, ಬರ್ತ್ ಡೇ ಬಾಯ್ ಜೋಸ್ ಬಟ್ಲರ್ (ಸೆ.8 ಹುಟ್ಟುಹಬ್ಬ) ಮತ್ತು ಮೋಯೀನ್ ಆಲಿ ರನ್ ಬೆಂಬಲ ದೊರೆಯಿತು. ಕುಕ್ 71, ಆಲಿ 50, ಬಟ್ಲರ್ 89 ರನ್ ಕೊಡುಗೆ ನೀಡಿದರು.

ನಾಯಕ ಜೋ ರೂಟ್, ಸ್ಯಾಮ್ ಕರನ್ ಮತ್ತು ಜಾನಿ ಬೇರ್ಸ್ಟೋವ್ 0ಗೆ ಔಟಾದಾಗ ಇಂಗ್ಲೆಂಡ್ ಕೊಂಚ ಭೀತಿಗೆ ಒಳಗಾಯಿತಾದರೂ ಅಂತಿಮವಾಗಿ ಉತ್ತಮ ಮೊತ್ತವನ್ನೇ ಸೇರಿಸಿತು.

ಇನ್ನಿಂಗ್ಸ್ ಗೆ ಇಳಿದಿರುವ ಭಾರತ ಕೆಎಲ್ ರಾಹುಲ್ 37, ಚೇತೇಶ್ವರ್ ಪೂಜಾರ 37, ನಾಯಕ ವಿರಾಟ್ ಕೊಹ್ಲಿ 49, ಹನುಮ ವಿಹಾರಿ ಅಜೇಯ 25 ರನ್ ನೆರವಿನೊಂದಿಗೆ 51 ಓವರ್ ಮುಕ್ತಾಯಕ್ಕೆ 174 ರನ್ ಪೇರಿಸಿತ್ತು. ಕ್ರೀಸ್ ನಲ್ಲಿ ವಿಹಾರಿ ಮತ್ತು ರವೀಂದ್ರ ಜಡೇಜಾ ಇದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ಬೆಂಬಲಕ್ಕೆ ಅಲಾಸ್ಟೇರ್ ಕುಕ್ ನಿಂತರು. 71 ರನ್ ಪೇರಿಸಿದ ಕುಕ್ ಬುಮ್ರಾ ಓವರ್ ನಲ್ಲಿ ವಿಕೆಟ್ ಒಪ್ಪಿಸಿದರು. ಮೋಯೀನ್ ಆಲಿ ಅವರಿಂದ ಇಂಗ್ಲೆಂಡ್ ತಂಡಕ್ಕೆ ಅರ್ಧ ಶತಕ ರನ್ ಕೊಡುಗೆ ಲಭಿಸಿದ್ದು ಮೊತ್ತ ಹೆಚ್ಚಳಕ್ಕೆ ಕಾರಣವಾಯ್ತು. ಆಲಿ ಅವರು ಭರ್ತಿ ಅರ್ಧ ಶತಕ ಬಾರಿಸಿದ್ದರು.

ಕೆ ಜೆನ್ನಿಂಗ್ಸ್ 23 ರನ್ ಸೇರಿಸಿದ್ದು ಬಿಟ್ಟರೆ ಉಳಿದ ಎಲ್ಲಾ ಬ್ಯಾಟ್ಸ್ಮನ್ ಗಳು 11ರೊಳಗೆ ಔಟಾದರು. ಅದರಲ್ಲೂ ನಾಯಕ ಜೋ ರೂಟ್ ಮತ್ತು ಜಾನಿ ಬೇರ್ಸ್ಟೋವ್ 0ಗೆ ಔಟಾಗಿದ್ದು ಇಂಗ್ಲೆಂಡ್ ರನ್ ಕಲೆ ಹಾಕುವಿಕೆಗೆ ಹಿನ್ನಡೆಯಾಯಿತು. ಇಶಾಂತ್ ಶರ್ಮಾ 3, ಜಸ್ ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾಗೆ ತಲಾ ಎರಡು ವಿಕೆಟ್ ಕಬಳಿಸಿದರು.

ಇಂಗ್ಲೆಂಡ್ ಆಟಗಾರ ಅಲಾಸ್ಟೇರ್ ಕುಕ್ ಅವರು ಈ ಟೆಸ್ಟ್ ಪಂದ್ಯದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಲಿದ್ದಾರೆ. ಇಂಗ್ಲೆಂಡ್ ಪರ ಕುಕ್ ಕೊನೆಯ ಇನ್ನಿಂಗ್ಸ್ ಆಡಿ ಆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಕುಕ್ ವಿದಾಯ ಹೇಳಲಿದ್ದಾರೆ.

Story first published: Saturday, September 8, 2018, 23:41 [IST]
Other articles published on Sep 8, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+