For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್: ಪಂದ್ಯ ಸೋಲುವ ಭೀತಿಯಲ್ಲಿ ಭಾರತ

India vs England, 5th Test, Day 4, Live Score

ಲಂಡನ್, ಸೆಪ್ಟೆಂಬರ್ 10: ಲಂಡನ್ ನ ಕೆನ್ನಿಂಗ್ಟನ್ ಓವಲ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್-ಭಾರತ ಟೆಸ್ಟ್ ಸರಣಿಯ ಕೊನೆಯ ಪಂದ್ಯ ನಡೆಯುತ್ತಿದ್ದು, ಕೊನೆಯ ಟೆಸ್ಟ್ ನಲ್ಲೂ ಭಾರತ ಸೋಲುವ ಭೀತಿಯಲ್ಲಿದೆ. ದ್ವಿತೀಯ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಅಲಾಸ್ಟೇರ್ ಕುಕ್, ಜೋ ರೂಟ್ ಶತಕದ ನೆರವಿನೊಂದಿಗೆ 112.3 ಓವರ್ ನಲ್ಲಿ 8 ವಿಕೆಟ್ ಕಳೆದು 423 ರನ್ ಪೇರಿಸಿ ಡಿಕ್ಲೇರ್ ಘೋಷಿಸಿದೆ.

ದ್ವಿತೀಯ ಇನ್ನಿಂಗ್ಸ್ ಗೆ ಇಳಿದಿರುವ ಭಾರತ 3 ವಿಕೆಟ್ ಕಳೆದು 58 ರನ್ ಪೇರಿಸಿದೆ. ಶಿಖರ್ ಧವನ್ 1, ಚೇತೇಶ್ವರ್ ಪೂಜಾರ ಮತ್ತು ಕೊಹ್ಲಿ ಸೊನ್ನೆ ಸುತ್ತಿ ನಿರ್ಗಮಿಸಿದ್ದಾರೆ. ಕೆಎಲ್ ರಾಹುಲ್ (46) ಮತ್ತು ಅಜಿಂಕ್ಯ ರಹಾನೆ (10) ಕ್ರೀಸ್ ನಲ್ಲಿದ್ದಾರೆ.

ಸ್ಕೋರ್ ಕಾರ್ಡ್ ಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
42378

ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯವಾಡುತ್ತಿರುವ ಕುಕ್ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್ ನಲ್ಲಿ ಶತಕ (147) ಬಾರಿಸಿದ್ದಾರೆ. 105 ಓವರ್ ಮುಕ್ತಾಯಕ್ಕೆ ಇಂಗ್ಲೆಂಡ್ 6 ವಿಕೆಟ್ ಕಳೆದು 364 ರನ್ ಪೇರಿಸಿತ್ತು. ಅಲಾಸ್ಟೇರ್ ಕುಕ್ (147) ನಾಯಕ ಜೋ ರೂಟ್ (125), ಜಾನಿ ಬೇರ್ಸ್ಟೋವ್ (18) ನಿರ್ಗಮಿಸಿದ್ದಾರೆ. ಬೆನ್ ಸ್ಟೋಕ್ಸ್, ಸ್ಯಾಮ್ ಕರನ್ ಕ್ರೀಸ್ ನಲ್ಲಿದ್ದರು.

ಅಲಾಸ್ಟೇರ್ ಕುಕ್ ಅವರ ಕೊನೆಯ ಅಂತಾರಾಷ್ಟ್ರೀಯ ಇನ್ನಿಂಗ್ಸ್ ಇದು. ಭಾರತ vs ಇಂಗ್ಲೆಂಡ್ ಈ ಟೆಸ್ಟ್ ಸರಣಿಯ ಕೊನೆಯ ಪಂದ್ಯ ಮಕ್ತಾಯದ ಬಳಿಕ ಕುಕ್ ಅಂತಾರಾಷ್ರೀಯ ಕ್ರಿಕೆಟ್ ಗೆ ವಿದಾಯ ಹೇಳಲಿದ್ದಾರೆ. ಇದೇ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕುಕ್ 71 ರನ್ ಪೇರಿಸಿದ್ದರು.

ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದಿದ್ದ ಇಂಗ್ಲೆಂಡ್ ಕುಕ್, ಮೋಯೀನ್ ಆಲಿ 50, ಜೋಸ್ ಬಟ್ಲರ್ 89 ರನ್ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ 332 ರನ್ ಗಳಿಸಿತ್ತು. ಭಾರತ ತಂಡ ರವೀಂದ್ರ ಜಡೇಜಾ 86, ಹನುಮ ವಿಹಾರಿ 56, ನಾಯಕ ವಿರಾಟ್ ಕೊಹ್ಲಿ 49 ರನ್ ಬಲದೊಂದಿಗೆ 292 ರನ್ ಕಲೆ ಹಾಕಿತ್ತು.

ಮೊದಲ ಇನ್ನಿಂಗ್ಸ್ ನಲ್ಲಿ 40 ರನ್ ಹಿನ್ನಡೆ ಅನುಭವಿಸಿದ್ದ ಭಾರತ ದ್ವಿತೀಯ ಇನ್ನಿಂಗ್ಸ್ ನಲ್ಲೂ ದಿಟ್ಟ ಆಟ ಪ್ರದರ್ಶಿಸದಿದ್ದರೆ ಕೊನೆಯ ಪಂದ್ಯವೂ ಆಂಗ್ಲರ ವಶವಾಗಲಿದೆ. ಸರಣಿ ಈಗಾಗಲೆ 3-1ರಿಂದ ಇಂಗ್ಲೆಂಡ್ ವಶವಾಗಿದ್ದು ಪ್ರತಿಷ್ಠೆಗಾಗಿ, ಔಪಚಾರಿಕವಾಗಿ ಆಡುತ್ತಿರುವ ಈ ಪಂದ್ಯವೂ ಇಂಗ್ಲೆಂಡ್ ವಶವಾಗಲು ಭಾರತ ಬಿಟ್ಟುಕೊಡಬಾರದು.

Story first published: Tuesday, September 11, 2018, 0:41 [IST]
Other articles published on Sep 11, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+