For Quick Alerts
ALLOW NOTIFICATIONS  
For Daily Alerts
 

ಬೆನ್ ಸ್ಟೋಕ್ಸ್ ಇಲ್ಲದೆ ಭಾರತ ವಿರುದ್ಧ ಇಂಗ್ಲೆಂಡ್ ಸೋಲಲಿದೆ: ಇಂಗ್ಲೆಂಡ್ ಮಾಜಿ ಆಟಗಾರ

India vs England: Absence of Ben Stokes will hurt England-Graeme Swann
ಬೆನ್ ಸ್ಟ್ರೋಕ್ ಇಲ್ಲದೆ ಅನಾಥವಾದ ಇಂಗ್ಲೆಂಡ್ ತಂಡ!! | Oneindia Kannada

ಲಂಡನ್: ಆಗಸ್ಟ್ 4ರಿಂದ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭಗೊಳ್ಳಲಿದೆ. ಸೆಪ್ಟೆಂಬರ್‌ 14ರ ವರೆಗೆ ಈ ಸರಣಿ ನಡೆಯಲಿದೆ. ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದ ವಿರಾಟ್ ಕೊಹ್ಲಿ ಪಡೆ WTC ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಆ ಬಳಿಕ ಅಲ್ಲೇ ಉಳಿದಿದ್ದ ಭಾರತೀಯ ತಂಡ ಆತಿಥೇಯ ಆಂಗ್ಲರೆದುರಿನ ಟೆಸ್ಟ್‌ ಸರಣಿಗೆ ಸಜ್ಜಾಗಿದೆ. ಆದರೆ ಇಂಗ್ಲೆಂಡ್‌ ತಂಡದಲ್ಲಿ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಆಡುತ್ತಿಲ್ಲ. ಇದು ಆತಿಥೇಯ ತಂಡಕ್ಕೆ ತಲೆಬಿಸಿ ತಂದಿದೆ.

ಭಾರತ ಮತ್ತು ಇಂಗ್ಲೆಂಡ್ ಮೊದಲ ಟೆಸ್ಟ್‌ ಪಂದ್ಯ ನ್ಯಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ. ಭಾರತೀಯ ಕಾಲಮಾನ 3.30 PMಗೆ ಪಂದ್ಯ ಶುರುವಾಗಲಿದೆ. ದ್ವಿತೀಯ ಪಂದ್ಯ ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ, ತೃತೀಯ ಪಂದ್ಯ ಹೆಡ್ಡಿಂಗ್ಲಿಯ ಲೀಡ್ಸ್‌ನಲ್ಲಿ, ನಾಲ್ಕನೇ ಪಂದ್ಯ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಮತ್ತು ಕೊನೇ ಪಂದ್ಯ ಮ್ಯಾನ್ಚೆಸ್ಟರ್‌ನ ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಪ್ರಮುಖ ಟೆಸ್ಟ್‌ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಆಡುತ್ತಿಲ್ಲ

ಪ್ರಮುಖ ಟೆಸ್ಟ್‌ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಆಡುತ್ತಿಲ್ಲ

ಪ್ರವಾಸಿ ಭಾರತದ ವಿರುದ್ಧ ಪ್ರಮುಖ ಟೆಸ್ಟ್‌ ಸರಣಿ ಎದುರಿರುವಾಗಲೇ ಆಂಗ್ಲ ಪ್ರಮುಖ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡಕ್ಕೆ ಶಾಕ್ ನೀಡಿದ್ದರು. ಈ ಬಗ್ಗೆ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಪ್ರಕಟಣೆ ನೀಡಿತ್ತು. "ಮುಂದಿನ ವಾರದಿಂದ ಆರಂಭವಾಗಲಿರುವ ಭಾರತ ವಿರುದ್ಧದ ಎಲ್‌ವಿ ಇನ್ಶೂರೆನ್ಸ್ ಟೆಸ್ಟ್ ಸರಣಿಗೆ ಮುನ್ನ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಟೆಸ್ಟ್ ತಂಡದಿಂದ ಹಿಂದಕ್ಕೆ ಸರಿದಿದ್ದಾರೆ. ಅವರ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲು ಹಾಗೂ ಗಾಯದಿಂದಾಗಿ ಇನ್ನೂ ಸಂಪೂರ್ಣವಾಗಿ ಚೇತರಿಕೆ ಕಾಣದ ಎಡಗೈ ತೋರುಬೆರಳಿಗೆ ವಿಶ್ರಾಂತಿಯನ್ನು ನೀಡುವ ದೃಷ್ಟಿಯಿಂದ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ" ಎಂದು ಇಸಿಬಿ ಹೇಳಿತ್ತು. ಹೀಗಾಗಿ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಭಾರತ ಗೆಲ್ಲದೆ 15 ವರ್ಷಗಳ ಕಳೆದಿವೆ

ಭಾರತ ಗೆಲ್ಲದೆ 15 ವರ್ಷಗಳ ಕಳೆದಿವೆ

ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯೊಂದನ್ನು ಗೆಲ್ಲದೆ ಭಾರತ ತಂಡ ಬರೋಬ್ಬರಿ 14 ವರ್ಷಗಳನ್ನು ಕಳೆದಿದೆ. ಕಳೆದ ಬಾರಿ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೆಂದರೆ 2007ರಲ್ಲಿ. 2007ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಗೆದ್ದಿತ್ತು. ಈ ವೇಳೆ ಎರಡು ಪಂದ್ಯಗಳು ಡ್ರಾ ಅನ್ನಿಸಿದ್ದವು. ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್ ಜಯ ಗಳಿಸಿತ್ತು. ಅದಾದ ಬಳಿಕ 2011, 2014 ಮತ್ತು 2018ರಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಿತ್ತು. ಇದರಲ್ಲಿ ಯಾವುದರಲ್ಲೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆಲ್ಲಲು ತಂಡಕ್ಕೆ ಅವಕಾಶವಿದೆ. ಮುಂಬರಲಿರುವ ಟೆಸ್ಟ್‌ ಸರಣಿಯಲ್ಲಾದರೂ ವಿರಾಟ್ ಕೊಹ್ಲಿ ಪಡೆ ಗೆಲ್ಲುತ್ತಾ ಕಾದು ನೋಡಬೇಕಿದೆ.

ಬೆನ್ ಸ್ಟೋಕ್ಸ್‌ ಇಲ್ಲದಿದ್ದರೆ ಇಂಗ್ಲೆಂಡ್ ತಂಡ ದುರ್ಬಲ

ಬೆನ್ ಸ್ಟೋಕ್ಸ್‌ ಇಲ್ಲದಿದ್ದರೆ ಇಂಗ್ಲೆಂಡ್ ತಂಡ ದುರ್ಬಲ

ಆಲ್ ರೌಂಡರ್ ಬೆನ್ ಸ್ಟೋಕ್ಸ್ ಇಲ್ಲದ ಇಂಗ್ಲೆಂಡ್ ತಂಡವನ್ನು ನೀವು ಹೇಗೆ ಮೌಲ್ಯಮಾಪನ ಮಾಡುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಇಂಗ್ಲೆಂಡ್ ಮಾಜಿ ಸ್ಪಿನ್ನರ್ ಗ್ರೇಮ್ ಸ್ವ್ಯಾನ್ ಉತ್ತರಿಸಿದ್ದಾರೆ. "ಬೆನ್ ಸ್ಟೋಕ್ಸ್ ಇಲ್ಲದ ಇಂಗ್ಲೆಂಡ್ ತಂಡ ಅನುಮಾನವಿಲ್ಲದೆ ದುರ್ಬಲವಾಗಲಿದೆ. ಹಾಗಂತ ಇದನ್ನು ನಾನು ಬ್ಯಾಟಿಂಗ್‌ ದೃಷ್ಟಿಕೋನದಿಂದ ಹೇಳುತ್ತಿದ್ದೇನೆ. ನಾನು ಇಂಗ್ಲೆಂಡ್ ಟಾಪ್ ಬ್ಯಾಟಿಂಗ್ ಆರ್ಡರ್‌ನಿಂದ ಬಂದರೆ ನನಗಿಲ್ಲಿ ಯಾವುದೇ ಆತ್ಮವಿಶ್ವಾಸಿ ಬ್ಯಾಟ್ಸ್‌ಮನ್‌ ಕಾಣುತ್ತಿಲ್ಲ. ಜೋ ರೂಟ್ ಒಬ್ಬರು ರನ್ ತೆಗೆಯಬಲ್ಲ ಆಟಗಾರ. ಇನ್ನುಳಿದಂತೆ ಇಬ್ಬರು ಅಥವಾ ಇಬ್ಬರು ಮಾತ್ರ ಟಾಪ್ ಆರ್ಡರ್‌ನಲ್ಲಿ ಕಾಣಿಸುತ್ತಾರೆ. ಆದರೆ ಅವರ್ಯಾರೂ ಸುಸ್ಥಿರ ಫಾರ್ಮ್‌ನಿಂದ ಆತ್ಮವಿಶ್ವಾಸ ಹೊಂದಿದ ಆಟಗಾರರಲ್ಲ. ಸ್ಟೋಕ್ಸ್ ಈ ಟೆಸ್ಟ್‌ ಸರಣಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ," ಎಂದು ಸ್ವ್ಯಾನ್ ಹೇಳಿದ್ದಾರೆ.

ಭಾರತ-ಇಂಗ್ಲೆಂಡ್ ತಂಡಗಳು

ಭಾರತ-ಇಂಗ್ಲೆಂಡ್ ತಂಡಗಳು

ಭಾರತ ತಂಡ: ವಿರಾಟ್ ಕೊಹ್ಲಿ (ಸಿ), ರೋಹಿತ್ ಶರ್ಮಾ, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ಹನುಮ ವಿಹಾರಿ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ರಿಷಭ್ ಪಂತ್, ವೃದ್ಧಿಮಾನ್ ಸಹಾ, ಜಸ್ಪ್ರೀತ್ ಬನ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್.
ಇಂಗ್ಲೆಂಡ್ ತಂಡ: ಜೋ ರೂಟ್ (ಸಿ), ರೋರಿ ಬರ್ನ್ಸ್, ಡೊಮಿನಿಕ್ ಸಿಬ್ಲಿ, ಜೋಸ್ ಬಟ್ಲರ್, ಮಾರ್ಕ್ ವುಡ್, ಸ್ಯಾಮ್ ಕರನ್, ಜೇಮ್ಸ್ ಆಂಡರ್ಸನ್, ಜಾನಿ ಬೈರ್‌ಸ್ಟೊ, ಡೊಮಿನಿಕ್ ಬೆಸ್, ಸ್ಟುವರ್ಟ್ ಬ್ರಾಡ್, ಝ್ಯಾಕ್ ಕ್ರಾಲೆ, ಹಸೀಬ್ ಹಮೀದ್, ಡಾನ್ ಲಾರೆನ್ಸ್, ಜ್ಯಾಕ್ ಲೀಚ್, ಓಲಿ ಪೋಪ್, ಒಲ್ಲಿ ರಾಬಿನ್ಸನ್, ಕ್ರೇಗ್ ಓವರ್ಟನ್.

Story first published: Thursday, August 5, 2021, 15:06 [IST]
Other articles published on Aug 5, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+