Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

5 ಟೆಸ್ಟ್‌,5 ದಿನ: ಕೊನೆಯ ಬಾರಿಗೆ ಹೀಗೆ ಆಗಿದ್ದು ಯಾವಾಗ?

ಟೀಮ್ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್‌ ಓವಲ್‌ನಲ್ಲಿ ನಡೆಯುತ್ತಿದೆ. ಈ ಟೆಸ್ಟ್‌ ನಾಲ್ಕೇ ದಿನದಲ್ಲಿ ಮುಗಿಯಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಮಳೆ ಕಾಟ ನೀಡಿದ್ದರಿಂದ ನಾಲ್ಕನೇ ದಿನದಾಟವನ್ನು ನಿಲ್ಲಿಸಲಾಯಿತು. ಹೀಗಾಗಿ ಐದನೇ ಟೆಸ್ಟ್ ಪಂದ್ಯ ಐದನೇ ದಿನಕ್ಕೆ ಮುಖ ಮಾಡಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಆಡಿದ ಐದೂ ಟೆಸ್ಟ್‌ ಪಂದ್ಯಗಳು ಸಹ ಕೊನೆಯ ದಿನದವರೆಗೆ ನಡೆದಿದೆ.

ಭಾರತ ಹಾಗೂ ಇಂಗ್ಲೆಂಡ್ ನಡುವಣ ಟೆಸ್ಟ್‌ ಸರಣಿಯಲ್ಲಿ ಉಭಯ ತಂಡಗಳು ಸ್ಥಿರ ಪ್ರದರ್ಶನ ನೀಡಿವೆ. ಈ ಟೆಸ್ಟ್ ಸರಣಿಯ ಯಾರ ವಶವಾಗುತ್ತದೆ ಎಂಬುದನ್ನು ಕೊನೆಯ ದಿನದಾಟದ ನಿರ್ಧರಿಸಲಿದೆ. ಹೀಗಾಗಿ ಎಲ್ಲರ ಚಿತ್ತ ಸೋಮವಾರದ ಮೊದಲಾವಧಿಯ ಮೇಲೆ ನೆಟ್ಟಿದೆ. ಟೀಮ್ ಇಂಡಿಯಾ ಈ ಪಂದ್ಯ ಗೆದ್ದ ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯನ್ನು ಹೊಂದಿದೆ. ಯುವ ಭಾರತ ತಂಡ ಪ್ರವಾಸದಲ್ಲಿ ನೀಡಿದ ಪ್ರದರ್ಶನ ಎಲ್ಲರ ಗಮನ ಸೆಳೆದಿದೆ.

India vs England All Five Tests Go the Distance Like 2017-18 Ashes

ಆಂಡರ್ಸನ್‌, ತೆಂಡುಲ್ಕರ್‌ ಟೆಸ್ಟ್‌ ಸರಣಿಯಲ್ಲಿ ಈ ಮೊದಲು ಆಡಲಾಗಿದ್ದ ನಾಲ್ಕು ಪಂದ್ಯಗಳು ಕೊನೆಯ ದಿನದವರೆಗೂ ನಡೆದಿತ್ತು. ಇದರಲ್ಲಿ ಟೀಮ್ ಇಂಡಿಯಾ ಒಂದು ಹಾಗೂ ಇಂಗ್ಲೆಂಡ್‌ 2 ಪಂದ್ಯಗಳನ್ನು ಗೆದ್ದಿದೆ. ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಹೀಗಾಗಿ ಈ ಟೆಸ್ಟ್‌ ಸರಣಿ ಯಾರತ್ತ ವಾಲಲಿದೆ ಎಂಬುದನ್ನು ತಿಳಿಯಲು ಐದನೇ ಟೆಸ್ಟ್‌ ಪಂದ್ಯದ ಐದನೇ ದಿನದಾಟದ ಮುಖ್ಯವಾಗಿದೆ. ಆದರೆ ಐದನೇ ದಿನದಾಟದಲ್ಲಿ ಎಷ್ಟು ಸೆಷನ್ ಆಡಲಾಗುತ್ತದೆ ಎಂಬ ಬಗ್ಗೆ ನಿಶ್ಚಿತವಾಗಿ ಪ್ರಶ್ನೆಗಳಿವೆ.

ಏಳು ವರ್ಷಗಳ ಹಿಂದೆ...

ಇದಕ್ಕೂ ಮೊದಲು 2017-18ರಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಣ ಆಷಸ್ ಟೆಸ್ಟ್‌ ಸರಣಿ ನಡೆದಿತ್ತು. ಈ ಸರಣಿಯಲ್ಲೂ ಐದು ಪಂದ್ಯಗಳನ್ನು ಆಡಲಾಗಿತ್ತು. ಈ ಸರಣಿಯ ಐದೂ ಪಂದ್ಯವೂ ಐದು ದಿನವನ್ನು ಕಂಡಿದ್ದವು. ವಿಶ್ವದಲ್ಲಿ ಈ ಏಳು ವರ್ಷಗಳಲ್ಲಿ ಅದೆಷ್ಟೋ ತಂಡಗಳು ಟೆಸ್ಟ್‌ ಪಂದ್ಯಗಳನ್ನು ಆಡಿವೆ. ಎಷ್ಟೋ ಸರಣಿಗಳು ನಡೆದಿವೆ. ಆದರೆ ಯಾವ ಸರಣಿಯ ಎಲ್ಲ ಪಂದ್ಯಗಳೂ ಸಹ ಕೊನೆಯ ದಿನದವರೆಗೂ ನಡೆದಿರಲಿಲ್ಲ.

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಎಲ್ಲ ಪಂದ್ಯಗಳೂ ಕೊನೆಯ ದಿನದ ವರೆಗೆ ನಡೆದಿದ್ದರಿಂದ ಸರಣಿ ಎಷ್ಟು ರೋಚಕವಾಗಿದೆ ಎಂದು ತಿಳಿಯುತ್ತದೆ. ಐದನೇ ಟೆಸ್ಟ್‌ ಪಂದ್ಯ ಐದನೇ ದಿನಕ್ಕೆ ಕಾಲಿಟ್ಟಿದೆ ಆದರೆ ಯಾರು ಸರಣಿಯನ್ನು ಗೆಲ್ಲುತ್ತದೆ ಎಂಬುದನ್ನು ಹೇಳುವುದು ಕಷ್ಟ.

Story first published: Monday, August 4, 2025, 14:55 [IST]
Other articles published on Aug 4, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+