Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಇಂಗ್ಲೆಂಡ್: ಅಂಪೈರ್‌ಗೆ ದೂರಿತ್ತ ವಿರಾಟ್ ಕೊಹ್ಲಿ-ವಿಡಿಯೋ

India vs England: Annoyed Virat Kohli Complains to Umpire Nitin Menon

ಚೆನ್ನೈ: ಭಾರತ-ಇಂಗ್ಲೆಂಡ್ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಪ್ರವಾಸಿ ಆಂಗ್ಲರು ಮೇಲುಗೈ ಸಾಧಿಸುವುದರಲ್ಲಿದ್ದಾರೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ಉತ್ತಮ ಪ್ರದರ್ಶನ ನೀಡುವ ಮೂಲಕ ಫಲಿತಾಂಶವನ್ನು ತನ್ನಡೆಗೆ ಹತ್ತಿರವಾಗಿಸಿಕೊಂಡಿದೆ.

ಮೊದಲನೇ ಟೆಸ್ಟ್‌ ಪಂದ್ಯದ 4ನೇ ದಿನದಾಟದ ವೇಳೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಬ್ಯಾಟ್ಸ್‌ಮನ್‌ ವಿರುದ್ಧ ಅಂಪೈರ್‌ಗೆ ದೂರಿತ್ತಿದ್ದಾರೆ. ಕೊಹ್ಲಿ ಅಂಪೈರ್ ಅವರಲ್ಲಿ ದೂರು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತ vs ಇಂಗ್ಲೆಂಡ್, 1ನೇ ಟೆಸ್ಟ್‌ ಪಂದ್ಯ, Live ಸ್ಕೋರ್‌ಕಾರ್ಡ್

1
49838

ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನ ಕೊನೇ ಕ್ಷಣದಲ್ಲಿ ಈ ಸಂಗತಿ ನಡೆದಿದ್ದ ಅನ್ನಿಸುತ್ತೆ. ಆಟದ ಮಧ್ಯೆ ಕೊಹ್ಲಿ ಅಂಪೈರ್ ಅವರನ್ನುದ್ದೇಶಿಸಿ, 'ಓಯ್ ಮೆನನ್, ಸೀದೆ ರನ್ ಭೀ ಬೀಚ್‌ಗೆ ಭಾಗ್‌ ರಹಾ ಹೈ ಯಾರ್ (ಸುಲಭ್ ರನ್ ಕೂಡ ಪಿಚ್ ಮಧ್ಯೆಯಿಂದ ಓಡ್ತಿದ್ದಾನೆ,' ಎಂದಿದ್ದಾರೆ. ಕೊಹ್ಲಿ ಧ್ವನಿ ಸ್ಟಂಪ್ ಮೈಕ್‌ನಲ್ಲಿ ದಾಖಲಾಗಿದೆ.

ಇಂಗ್ಲೆಂಡ್ ಅಂತಿಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಜೋಫ್ರಾ ಆರ್ಚರ್ ಮತ್ತು ಜ್ಯಾಕ್ ಲೀಚ್ ಆಡುತ್ತಿದ್ದಾಗ ಈ ಘಟನೆ ನಡೆದಿದೆ ಅನ್ನಿಸುತ್ತೆ. ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ 578, ದ್ವಿತೀಯ ಇನ್ನಿಂಗ್ಸ್‌ನಲ್ಲಿ 178 ರನ್ ಗಳಿಸಿದ್ದರೆ, ಭಾರತ ಆರಂಭಿಕ ಇನ್ನಿಂಗ್ಸ್‌ನಲ್ಲಿ 337 ರನ್ ಗಳಿಸಿ ಹಿನ್ನಡೆ ಅನುಭವಿಸಿತ್ತು.

Story first published: Tuesday, February 9, 2021, 12:33 [IST]
Other articles published on Feb 9, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+