Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಕಪ್ 2021ರಲ್ಲಿ ಭಾರತಕ್ಕೆ ಭಾಗವಹಿಸಲು ಅವಕಾಶವಿಲ್ಲ?!

India vs England: Asia Cup 2021 will go ahead without India participation

ನವದೆಹಲಿ: 2021ರ ಏಷ್ಯಕಪ್ ‌ನಲ್ಲಿ ಟೀಮ್ ಇಂಡಿಯಾ ಭಾಗವಹಿಸುವ ಸಾಧ್ಯತೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾಗವಹಿಸುವುದರಿಂದ ಏಷ್ಯಕಪ್ ‌ನಲ್ಲಿ ಭಾರತ ಪಾಲ್ಗೊಳ್ಳುವ ಅವಕಾಶ ಕಡಿಮೆಯಿದೆ ಎನ್ನಲಾಗುತ್ತಿದೆ.

ಸದ್ಯ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಟೆಸ್ಟ್‌ ಸರಣಿ ನಡೆಯುತ್ತಿದೆ. ಈಗಾಗಲೇ ಇಂಗ್ಲೆಂಡ್ ತಂಡ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ ನ ಫೈನಲ್‌ ಸ್ಪರ್ಧೆಯಿಂದ ಹೊರಬಿದ್ದಿದೆ. ಇನ್ನು ಅವಕಾಶ ಆಸ್ಟ್ರೇಲಿಯಾಕ್ಕೆ ಮಾತ್ರ. ಅದೂ ಕೂಡ ಅಂತಿಮ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ ಗೆದ್ದರೆ ಮಾತ್ರ ಆಸ್ಟ್ರೇಲಿಯಾಕ್ಕೆ ಫೈನಲ್‌ಗೇರುವ ಸಾಧ್ಯತೆ.

ಹೀಗಾಗಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಫೈನಲ್‌ನಲ್ಲಿ ಸ್ಪರ್ಧಿಸುವ ಅವಕಾಶ ಭಾರತಕ್ಕೆ ಹೆಚ್ಚು. ಆದರೆ ಒಂದು ವೇಳೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಆಡುವುದಾದರೆ ಭಾರತ ಏಷ್ಯಕಪ್ ನಲ್ಲಿ ಆಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಜೂನ್ 18-22ರ ವರೆಗೆ ಲಂಡನ್‌ನ ಲಾರ್ಡ್ಸ್‌ ಸ್ಟೇಡಿಯಂನಲ್ಲಿ ನಡೆಯಲಿದ್ದರೆ, ಏಷ್ಯಕಪ್ ಆಗಸ್ಟ್‌ 16ರಿಂದ ಆಗಸ್ಟ್ 28ರ ವರೆಗೆ ನಡೆಯಲಿದೆ. ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾರತ ಪಾಲ್ಗೊಳ್ಳಲಿರುವುದಿಂದ ಏಷ್ಯಕಪ್‌ ಅವಕಾಶ ಕಡಿಮೆ ಎನ್ನಲಾಗುತ್ತಿದೆಯಾದರೂ ಎರಡೂ ಪಂದ್ಯಗಳ ದಿನಾಂಕ ಬೇರೆ ಬೇರೆಯಾಗಿರುವುದರಿಂದ ಎರಡೂ ಪಂದ್ಯದಲ್ಲೂ ಭಾರತ ಪಾಲ್ಗೊಳ್ಳುವ ನಿರೀಕ್ಷೆಯಿದೆ.

Story first published: Friday, February 26, 2021, 14:25 [IST]
Other articles published on Feb 26, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+