Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2ನೇ ಪಂದ್ಯದಲ್ಲಿ 2ನೇ ಐದು ವಿಕೆಟ್‌ಗಳ ಗೊಂಚಲು ಪಡೆದ ಅಕ್ಷರ್ ಪಟೇಲ್

India vs England: Axar Patel gets his 2nd five fors in 2nd test

ಟೀಮ್ ಇಂಡಿಯಾದ ಆಲ್‌ರೌಂಡರ್ ಅಕ್ಷರ್ ಪಟೇಲ್ ಮೂರನೇ ಟೆಸ್ಟ್ ಪಂದ್ಯದಲ್ಲೂ ಬೌಲಿಂಗ್‌ನಲ್ಲಿ ಮಿಂಚಿದ್ದಾರೆ. ಮೊಟೇರಾ ಸ್ಟೇಡಿಯಮ್‌ನಲ್ಲಿ ಅಹರ್ನಿಶಿಯಾಗಿ ನಡೆಯುತ್ತಿರುವ ಈ ಪಂದ್ಯದಲ್ಲಿ ಅಕ್ಷರ್ ಪಟೇಲ್ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಒಟ್ಟು ಆರು ವಿಕೆಟ್ ಪಡೆದ ಅಕ್ಷರ್ ಪಟೇಲ್ ಅದ್ಭುತ ಯಶಸ್ಸು ಸಾಧಿಸಿದ್ದಾರೆ.

ಅಕ್ಷರ್ ಪಟೇಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಪದಾರ್ಪಣೆಯನ್ನು ಮಾಡಿದ್ದರು. ಚೆನ್ನೈನಲ್ಲಿ ನಡೆದ ಆ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಪಡೆದು ಮಿಂಚಿದ್ದರು. ಈ ಮೂಲಕ ತಮ್ಮ ಸಾಮರ್ಥ್ಯವನ್ನು ಆರಂಭದ ಪಂದ್ಯದಲ್ಲೇ ಸಾಬೀತುಪಡಿಸಿದ್ದರು. ಈಗ ಎರಡನೇ ಪಂದ್ಯದಲ್ಲೂ ಈ ಸಾಧನೆಯನ್ನು ಪುನರಾವರ್ತಿಸಿದ್ದಾರೆ.

ಮೂರನೇ ಟೆಸ್ಟ್‌ನಲ್ಲಿ ಅಕ್ಷರ್ ಪಟೇಲ್ ತಾನೆಸೆತ ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ವಿಕೆಟ್ ಕಬಳಿಸಲು ಯಶಸ್ವಿಯಾದರು. ಜಾನಿ ಬೈರ್‌ಸ್ಟೋವ್ ಅಕ್ಷರ್ ಪಟೇಲ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದು ವಿಕೆಟ್ ಕಳೆದುಕೊಂಡರು. ಬಳಿಕ ಅರ್ಧಶತಕವನ್ನು ಬಾರಿಸಿ ಮುನ್ನುಗ್ಗುತ್ತಿದ್ದ ಝಾಕ್ ಕ್ರಾವ್ಲೆ ಕೂಡ ಅಕ್ಷರ್ ಪಟೇಲ್ ಬಲೆಗೆ ಬಿದ್ದರು.

ಬಳಿಕ ಅಕ್ಷರ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಕೂಡ ಎಲ್‌ಬಿ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾದರೆ ಜೋಫ್ರಾ ಆರ್ಚರ್ ಬೌಲ್ಡ್ ಆಗಿ ಫೆವಿಲಿಯನ್ ಸೇರಿದರು. ಬಳಿಕ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್ ಬೂಮ್ರಾಗೆ ಕ್ಯಾಚ್ ನೀಡಿ ಅಕ್ಷರ್ ಪಟೇಲ್‌ಗೆ ಐದನೇ ಬಲಿಯಾದರು. ಅಂತಿಮವಾಗಿ ಫೋಕ್ಸ್‌ ಕೂಡ ಅಕ್ಷರ್ ಪಟೇಲ್‌ಗೆ ಬೌಲ್ಡ್ ಆಗುವ ಮೂಲಕ ಆರನೇ ಬಲಿಯಾದರು.

ಇಂಗ್ಲೆಂಡ್ ಭಾರತದ ಸ್ಪಿನ್ ದಾಳಿಗೆ ಸಂಪೂರ್ಣವಾಗಿ ವಿಫಲವಾಗಿದೆ. ಟಾಸ್ ಗೆದ್ದರೂ ಅದರ ಲಾಭವನ್ನು ಪಡೆಯುವಲ್ಲಿ ಇಂಗ್ಲೆಂಡ್ ವಿಫಲವಾಗಿದ್ದು ಯಾವ ಹಂತದಲ್ಲೂ ತಿರುಗೇಟು ನೀಡುವ ಲಕ್ಷಣವನ್ನು ತೋರಿಸಲೇ ಇಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 112 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿದೆ.

Story first published: Thursday, February 25, 2021, 8:57 [IST]
Other articles published on Feb 25, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+