ಪಂತ್ ತನ್ನನ್ನು ವಾಸಿಂ ಭಾಯ್ ಎನ್ನುವುದರ ಗುಟ್ಟು ಬಿಚ್ಚಿಟ್ಟ ಅಕ್ಸರ್ ಪಟೇಲ್

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತದ ಬೌಲಿಂಗ್ ಆಲ್ ರೌಂಡರ್ ಅಕ್ಸರ್ ಪಟೇಲ್ ಅದ್ಭುತ ಪ್ರದರ್ಶನ ನೀಡಿದ್ದರು. ಆರಂಭಿಕ ಎರಡು ಟೆಸ್ಟ್‌ನಲ್ಲೇ ಪಟೇಲ್ 18 ವಿಕೆಟ್ ಉರುಳಿಸಿದ್ದರು. ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಅಕ್ಸರ್ ಮಾರಕ ಬೌಲಿಂಗ್ ಇನ್ನೂ ಮುಂದುವರೆದಿತ್ತು.
ಮೂರನೇ ಟೆಸ್ಟ್ ಆಗಿ ನಡೆದಿದ್ದ ಪಿಂಕ್‌ಬಾಲ್ ಟೆಸ್ಟ್‌ನಲ್ಲಿ ಒಟ್ಟು 10+ ವಿಕೆಟ್ ಪಡೆದಿದ್ದ ಅಕ್ಸರ್ ಪಟೇಲ್ ವಿಶೇಷ ದಾಖಲೆ ನಿರ್ಮಿಸಿದ್ದರು. ಆ ಪಂದ್ಯದಲ್ಲಿ ಅಕ್ಸರ್ 11 ವಿಕೆಟ್ ಪಡೆದಿದ್ದರು. ಆವತ್ತು ಬರೀ ಎಲ್‌ಬಿಡಬ್ಲ್ಯೂನಲ್ಲೇ ಅಕ್ಸರ್‌ಗೆ 9 ವಿಕೆಟ್‌ಗಳು ಲಭಿಸಿತ್ತು.
ಪಂದ್ಯದ ವೇಳೆ ಟೀಮ್ ಇಂಡಿಯಾದ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ರಿಷಭ್ ಪಂತ್, ಅಕ್ಸರ್ ಅವರನ್ನು ಆಗಾಗ 'ವಾಸಿಂ ಭಾಯ್' ಎನ್ನುತ್ತಿರುತ್ತಾರೆ. ಇದಕ್ಕೆ ಕಾರಣವೇನೆಂದು ಅಕ್ಸರ್ ಹೇಳಿಕೊಂಡಿದ್ದಾರೆ. ಎತ್ತರದ ಎಡಗೈ ಬೌಲರ್ ಅಕ್ಸರ್ ಅವರ ಬೌಲಿಂಗ್, ಸ್ವಿಂಗ್ ವಿಚಾರದಲ್ಲಿ ಪಾಕ್ ದಂತಕತೆ ವಾಸಿಂ ಅಕ್ರಮ್ ಅವರಂತಿದೆ. ಹೀಗಾಗಿಯೇ ಪಂತ್ ತನ್ನನ್ನು ವಾಸಿಂ ಭಾಯ್ ಎನ್ನುತ್ತಿರಬಹುದು ಎಂದು ಅಕ್ಸರ್ ಹೇಳಿದ್ದಾರೆ.
'ನನ್ನ ಬೌಲಿಂಗ್ ಬಲಗೈ ಬೌಲರ್ ವಾಸಿಂ ಭಾಯ್ (ವಾಸಿಂ ಅಕ್ರಮ್) ಅವರಂತಿದೆ, ಅದಕ್ಕಾಗೇ ಪಂತ್ ನನ್ನನ್ನು ವಾಸಿಂ ಭಾಯ್ ಎಂದು ಕರೆಯುತ್ತಿರುತ್ತಾರೆ. ಈ ಹೆಸರನ್ನು ನನಗೆ ಇಟ್ಟಿದ್ದು ಅಜ್ಜು ಭಾಯ್ (ಅಜಿಂಕ್ಯ ರಹಾನೆ). ಪಂತ್ ಈ ಹೆಸರನ್ನೇ ಆರಿಸಿ ಕರೆಯುತ್ತಿರುತ್ತಾರೆ,' ಎಂದು ಅಕ್ಸರ್ ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications