'ಬೆನ್' ಬಿಡದ ಅಶ್ವಿನ್: 10ನೇ ಬಾರಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ ಸ್ಟೋಕ್ಸ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಬೆನ್ ಸ್ಟೋಕ್ಸ್ ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಟೆಸ್ಟ್ ಪಂದ್ಯಗಳಲ್ಲಿ ಸ್ಟೋಕ್ಸ್ 10ನೇ ಬಾರಿಗೆ ಆರ್ ಅಶ್ವಿನ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಈವರೆಗೆ ಈ ಇಬ್ಬರು ಆಟಗಾರರು 10 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದಾರೆ.
ಈ ಮೂಲಕ ಆರ್ ಅಶ್ವಿನ್‌ಗೆ 10 ಬಾರಿ ವಿಕೆಟ್ ಒಪ್ಪಿಸಿದ ಎರಡನೇ ಆಟಗಾರನಾಗಿದ್ದಾರೆ ಬೆನ್ ಸ್ಟೋಕ್ಸ್. ಡೇವಿಡ್ ವಾರ್ನರ್ ಆರ್ ಅಶ್ವಿನ್‌ಗೆ 10 ಬಾರಿ ಔಟಾದ ಮೊದಲ ಆಟಗಾರನಾಗಿದ್ದಾರೆ. ಕಳೆದ ಮೂರು ಇನ್ನಿಂಗ್ಸ್‌ಗಲ್ಲಿ ಬೆನ್ ಸ್ಟೋಕ್ಸ್ ಸತತವಾಗಿ ಆರ್ ಅಶ್ವಿನ್‌ಗೆ ಬಲಿಯಾಗಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನ ಶ್ರೇಷ್ಠ ಆಲ್‌ರೌಂಡರ್‌ಗೆ ಆರ್ ಅಶ್ವಿನ್ ದುಸ್ವಪ್ನದಂತೆ ಕಾಡುತ್ತಿದ್ದಾರೆ.
ಆರ್ ಅಶ್ವಿನ್ ಎಸೆದ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಮುಂದಾದರು ಬೆನ್ ಸ್ಟೋಕ್ಸ್. ಆದರೆ ಚೆಂಡು ಬೆನ್ ಸ್ಟೋಕ್ಸ್ ಅವರನ್ನು ವಂಚಿಸಿ ಬ್ಯಾಟ್‌ನ ಮಧ್ಯಕ್ಕೆ ತಾಗದೆ ಎಡ್ಜ್ ಆಯಿತು. ಇದು ನೆರವಾಗಿ ಮೊದಲ ಸ್ಲಿಪ್‌ನತ್ತ ಹಾರಿತ್ತು. ಈ ವೇಳೆ ಸ್ಲಿಪ್‌ನಲ್ಲಿದ್ದ ವಿರಾಟ್ ಕೊಹ್ಲಿ ಸುಲಭವಾಗಿ ಚೆಂಡನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಇದಕ್ಕೂ ಮುನ್ನ ನಾಲ್ಕನೇ ದಿನದಾಟದಲ್ಲಿ ಮೊದಲಿಗೆ ಆರ್ ಅಶ್ವಿನ್ ಡೇನ್ ಲಾರೆನ್ಸ್‌ಗೆ ಫೆವಿಲಿಯನ್ ಹಾದಿ ತೋರಿಸಿದ್ದರು.
ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸೋಲಿನ ಸುಳಿಗೆ ಸಿಲುಕಿದೆ. ನಾಲ್ಕನೇ ದಿನದ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ ತನ್ನ 7 ವಿಕೆಟ್‌ಗಳನ್ನು ಕಳೆದುಕೊಂಡು 116 ರನ್‌ಗಳಿಸಿ ಸಂಕಷ್ಟದಲ್ಲಿದೆ. ಇಂಗ್ಲೆಂಡ್ ಗೆಲುವಿಗೆ ಇನ್ನೂ 366 ರನ್‌ಗಳಿಸುವ ಅಸಾಧ್ಯ ಗುರಿಯನ್ನು ಮುಂದಿಟ್ಟುಕೊಂಡಿದೆ.
ಟೀಮ್ ಇಂಡಿಯಾ ಪರವಾಗಿ ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಹಾಗೂ ಆರ್ ಅಶ್ವಿನ್ ಅದ್ಭುತ ದಾಳಿಯನ್ನು ಸಂಘಟಿಸಿದ್ದು ಇಂಗ್ಲೆಂಡ್‌ಗೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications