Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅತೀ ಸುಲಭದ ಕ್ಯಾಚ್ ಕೈಚೆಲ್ಲಿದ ರೋಹಿತ್ ಶರ್ಮಾ: ವಿಡಿಯೋ

India vs England: Ben Stokes Reacts To Rohit Sharma Catch Drop

ಚೆನ್ನೈ: ರೋಹಿತ್ ಶರ್ಮಾ ಅದ್ಭುತ ಫೀಲ್ಡಿಂಗ್‌ಗಾಗಿ ಗಮನ ಸೆಳೆದಿದ್ದಿದೆ. ಕಷ್ಟಕರವಾದ ಕ್ಯಾಚ್‌ಗಳನ್ನು ಪಡೆದಿದ್ದಿದೆ. ಆದರೆ ಕೆಲವೊಮ್ಮೆ ರೋಹಿತ್ ಸುಲಭದ ಕ್ಯಾಚ್ ಕೂಡ ಬಿಟ್ಟಿದ್ದಾರೆ. ಭಾರತ-ಇಂಗ್ಲೆಂಡ್‌ ನಡುವಿನ ಮೊದಲನೇ ಟೆಸ್ಟ್‌ನಲ್ಲಿ ಅತೀ ಸುಲಭದ ಕ್ಯಾಚ್ ಕೈ ಚೆಲ್ಲಿ ರೋಹಿತ್ ಪೇಚಿಗೆ ಸಿಲುಕಿದ್ದಾರೆ.

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ ಆಡುತ್ತಿದೆ. ಶನಿವಾರ ಪಂದ್ಯದ ಎರಡನೇ ದಿನದಾಟದ ವೇಳೆ ರೋಹಿತ್ ಕ್ಯಾಚ್ ಕೈ ಚೆಲ್ಲಿ ಆಟಗಾರರ ಬೇಸರಕ್ಕೆ ಕಾರಣರಾಗಿದ್ದರು.

175ನೇ ಓವರ್‌ ವೇಳೆ ಡಾಮ್ ಬೆಸ್ ಸ್ಟ್ರೈಕ್‌ನಲ್ಲಿದ್ದರು. ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಬೌಲಿಂಗ್‌ಗೆ ಬಂದಿದ್ದರು. ಸುಂದರ್ ಎಸೆತಕ್ಕೆ ಮುಂದೆ ಬಂದು ಬೆಸ್ ಬ್ಯಾಟ್ ಬೀಸಿದಾಗ ಮೇಲೆ ಚಿಮ್ಮಿದ ಚೆಂಡು ರೋಹಿತ್ ಎದೆಯ ಸಮೀಪಕ್ಕೆ ಬಂತು. ರೋಹಿತ್ ಕ್ಯಾಚ್ ಮಾಡಬಹುದಾಗ ಅತೀ ಸುಲಭದ ಕ್ಯಾಚ್ ಅದು.

ಶರ್ಮಾ ಕ್ಯಾಚ್ ಮಾಡಲು ಮುಂದಾದರಾದರೂ ಚೆಂಡು ಕೈಯಲ್ಲಿ ನಿಲ್ಲದೆ ನೆಲಕ್ಕುರುಳಿತು. ಶರ್ಮಾ ಪೇಚಾಗಿ ಕುಳಿತುಬಿಟ್ಟರು. ಶರ್ಮಾ ಕ್ಯಾಚ್ ಬಿಟ್ಟಿದ್ದು ನೋಡಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಒಮ್ಮೆ ಬೆರಗಾಗಿ ಪ್ರತಿಕ್ರಿಯಿಸಿದ್ದರೆ, ಭಾರತದ ನಾಯಕ ವಿರಾಟ್ ಕೊಹ್ಲಿ ಅಸಹನೆ ತೋರಿಕೊಂಡಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.

Story first published: Sunday, February 7, 2021, 11:39 [IST]
Other articles published on Feb 7, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+