Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಎಡವಿದ್ದೆಲ್ಲಿ ಎಂದು ವಿವರಿಸಿದ ಇಯಾನ್ ಮಾರ್ಗನ್

India vs England: Couldnt handle slow-paced pitch, says Eoin Morgan

ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಧಿಕಾರಯುತವಾಗಿ ಗೆಲುವು ಸಾಧಿಸಿದ ಇಂಗ್ಲೆಂಡ್ ಎರಡನೇ ಪಂದ್ಯದಲ್ಲಿ ಅಷ್ಟೇ ನೀರಸವಾಗಿ ಸೋಲು ಕಂಡಿದೆ. ಭಾರತದ ಸರ್ವಾಂಗೀಣ ಪ್ರದರ್ಶನಕ್ಕೆ ಇಂಗ್ಲೆಂಡ್ 7 ವಿಕೆಟ್‌ಗಳಿಂದ ಶರಣಾಗಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿ ಈಗ 1-1 ಅಂತರದಿಂದ ಸಮಬಲಗೊಂಡಿದೆ.

ಮೊಟೇರಾ ಸ್ಟೇಡಿಯಂನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳು ಕಡಿಮೆ ವೇಗದ ಎಸೆತಗಳನ್ನು ಎದುರಿಸುವಲ್ಲಿ ಅಸಮರ್ಥರಾದರು ಎಂದು ಹೇಳಿದ್ದಾರೆ. ಇದೇ ಕಾರಣದಿಂದಾಗಿ ಬೃಹತ್ ಮೊತ್ತವನ್ನು ದಾಖಲಿಸಲು ಇಂಗ್ಲೆಂಡ್‌ಗೆ ಅಸಾಧ್ಯವಾಯಿತು ಎಂಬ ಮಾತನ್ನು ಅವರು ಒಪ್ಪಿಕೊಂಡಿದ್ದಾರೆ.

"ನಾವು ಪಂದ್ಯದ ಮೊದಲಾರ್ಧದಲ್ಲಿ ಉತ್ತಮ ಸ್ಥಿತಿಯಲ್ಲಿಯೇ ಇದ್ದೆವು. ಆದರೆ ಇಂಡಿಯಾ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ನಡೆಸಿತು. ಇದು ಮೊದಲ ಪಂದ್ಯಕ್ಕೆ ಹೋಲಿಸಿದರೆ ಭಿನ್ನವಾದ ಪಿಚ್ ಆಗಿತ್ತು. ಇದರಲ್ಲಿ ವೇಗ ಕಡಿಮೆಯಿತ್ತು" ಎಂದು ಹೇಳಿದ್ದಾರೆ.

"ಭಾರತೀಯ ಬೌಲರ್‌ಗಳು ಆರಂಭದಿಂದಲೇ ನಮ್ಮನ್ನು ಹಿಂದಿಳಿಯುವಂತೆ ಮಾಡುವಲ್ಲಿ ಯಶಸ್ವಿಯಾದರು. ಅದಕ್ಕೆ ಪ್ರತ್ಯುತ್ತರವನ್ನು ನೀಡಲು ನಾವು ವಿಫಲರಾದರೆವು. ವೇಗದಲ್ಲಿ ನಿಯಂತ್ರಣ ಮಾಡುವುದು ಬ್ಯಾಟ್ಸ್‌ಮನ್‌ಗಳಿಗೆ ಎದುಸಲು ಸವಾಲಿನದ್ದಾಗಿರುತ್ತದೆ. ನಾವು ಆಡಿದ ರೀತಿಗೆ ನಾನು ಬೇಸರಗೊಂಡಿದ್ದೇನೆ" ಎಂದು ಇಯಾನ್ ಮಾರ್ಗನ್ ಹೇಳಿದ್ದಾರೆ.

ಇಂಗ್ಲೆಂಡ್ ಎರಡನೇ ಪಂದ್ಯದಲ್ಲಿ ಮಾರ್ಕ್‌ವುಡ್ ಸೇವೆಯಿಂದ ವಂಚಿತವಾಗಿತ್ತು. ಮೊದಲ ಪಂದ್ಯದಲ್ಲಿ 20 ರನ್‌ಗಳಿಗೆ 1 ವಿಕೆಟ್ ಪಡೆದಿದ್ದ ಮಾರ್ಕ್‌ವುಡ್ ಗಾಯದ ಕಾರಣದಿಂದಾಗಿ ಎರಡನೇ ಪಂದ್ಯದಿಮದ ಹೊರಗುಳಿದಿದ್ದರು. ಮೂರನೇ ಮೂರನೇ ಪಂದ್ಯದಿಂದಲೂ ಅವರು ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.

Story first published: Monday, March 15, 2021, 18:16 [IST]
Other articles published on Mar 15, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+