ಇಂಗ್ಲೆಂಡ್ ವಿರುದ್ಧ ಮೊಟೆರಾದಲ್ಲಿ ಡೇ-ನೈಟ್ ಟೆಸ್ಟ್: ಬೃಹತ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯವ ಬಗ್ಗೆ ಜಯ್ ಶಾ ಮಾಹಿತಿ

ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಅಂತ್ಯವಾದ ಬಳಿಕ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿ ಆರಂಭವಾಗಲಿದೆ. ಭಾರತದ ಆತಿಥ್ಯದಲ್ಲಿ ನಡೆಯುವ ಈ ಸರಣಿ ಯುಎಇನಲ್ಲಿ ಆಯೋಜನೆಯಾಗುತ್ತದೋ ಅಥವಾ ಭಾರತದಲ್ಲೇ ನಡೆಯಲಿದೆಯಾ ಎಂಬ ಬಗ್ಗೆ ಗೊಂದಲವಿತ್ತು. ಈ ಬಗ್ಗೆ ಬಿಸಿಸಿಐ ಈಗ ಖಚಿತವಾಗಿ ಮಾಹಿತಿಯನ್ನು ನೀಡಿದ್ದು ಭಾರತದಲ್ಲೇ ಈ ಪಂದ್ಯಗಳು ನಡೆಯಲಿದೆ ಎಂದು ತಿಳಿಸಿದೆ.
ಇನ್ನು ಈ ಸರಣಿ ನಡೆಯುವ ಸ್ಥಳಗಳ ಬಗ್ಗೆ ಬಿಸಿಸಿಐ ಮಾಹಿತಿಯನ್ನು ನೀಡಿದೆ. ಇದರಲ್ಲಿ ಒಂದು ಟೆಸ್ಟ್ ಪಂದ್ಯ ಅಹರ್ನಿಶಿಯಾಗಿ ಸಾಗಲಿದೆ ಎಂಬುದನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಹಿತಿಯನ್ನು ನೀಡಿದ್ದು ಈ ಪಂದ್ಯ ಅಹ್ಮದಾಬಾದ್‌ನಲ್ಲಿ ನಡೆಯಲಿದೆ. ವಿಶ್ವದ ಬೃಹತ್ ಕ್ರಿಕೆಟ್ ಸ್ಟೇಡಿಯಮ್ ಎನಿಸಿಕೊಂಡಿರುವ ಅಹ್ಮದಾಬಾದ್‌ನಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟ ಈ ಮೂಲಕ ನಡೆಯಲಿದೆ.

ಇಂಗ್ಲೆಂಡ್ ವಿರುದ್ಧ ಸುದೀರ್ಘ ಸರಣಿ
ಫೆಬ್ರವರಿ ತಿಂಗಳಿನಿಂದ ಇಂಗ್ಲೆಂಡ್ ವಿರುದ್ಧ ಭಾರತ ಸುದೀರ್ಘ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಮೊದಲಿಗೆ ನಡೆಯಲಿದ್ದು ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಮೂಲಕ ಭಾರತದಲ್ಲಿ ಸುದೀರ್ಘ ಒಂದು ವರ್ಷದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಚಾಲನೆ ದೊರೆಯಲಿದೆ.

ಪೆಬ್ರವರಿ 5 ರಿಂದ ಟೆಸ್ಟ್ ಸರಣಿ ಆರಂಭ
ಮೊದಲಿಗೆ ಟೆಸ್ಟ್ ಸರಣಿ ಆರಂಭವಾಗಲಿದ್ದು ಫೆಬ್ರವರಿ 5ನೇ ತಾರೀಕಿನಿಂದ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಅಹ್ಮದಾಬಾದ್‌ನ ಮೊಟೆರಾ ಸ್ಟೇಡಿಯಮ್‌ನಲ್ಲಿ ಫೆಬ್ರವರಿ 24ರಿಂದ ಟೆಸ್ಟ್ ಪಂದ್ಯ ನಡೆಯಲಿದ್ದು ಈ ಪಂದ್ಯ ಅಹರ್ನಿಶಿಯಾಗಿ ನಡೆಯಲಿದೆ. ಗುಜರಾತ್ ಕ್ರಿಕೆಟ್ ಅಸೋಸಿಯೇಶನ್‌ನ ಯುವ ಕ್ರಿಕೆಟಿಗರಿಗೆ ಒಳಾಂಗಣ ಕ್ರೀಡಾಂಗಣವನ್ನು ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಜಯ್ ಶಾ ಈ ವಿಚಾರವನ್ನು ತಿಳಿಸಿದ್ದಾರೆ.

ಐದು ಟಿ20 ಪಂದ್ಯಗಳಿಗೂ ಮೊಟೇರಾ ಆತಿಥ್ಯ
ಇನ್ನು ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಸಂಪೂರ್ಣ ಪಂದ್ಯ ಅಹ್ಮದಾಬಾದ್‌ನಲ್ಲೇ ನಡೆಯಲಿದೆ ಎಂದು ತಿಳಿಸಿದ್ದಾರೆ. "ಐದು ಟಿ20 ಪಂದ್ಯಗಳು ಅಹ್ಮದಾಬಾದ್‌ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆಯಲಿದೆ" ಎಂದು ಜಯ್ ಶಾ ತಿಳಿಸಿದ್ದಾರೆ.

ನಮಸ್ತೇ ಟ್ರಂಪ್‌ಗೆ ಸಾಕ್ಷಿಯಾಗಿದ್ದ ಮೊಟೇರಾ
ಕಳೆದ ವರ್ಷ ಭಾರತಕ್ಕೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮಿಸಿದ್ದ ವೇಳೆ ಇದೇ ಮೊಟೇರಾ ಕ್ರೀಡಾಂಗಣದಲ್ಲಿ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. "ನಮಸ್ತೇ ಟ್ರಂಪ್" ಹೆಸರಿನ ಈ ಕಾರ್ಯಕ್ರಮ ಮೊಟೆರಾ ಕ್ರೀಡಾಂಗಣದಲ್ಲಿ ನಡೆದ ಪ್ರಥಮ ಕಾರ್ಯಕ್ರಮವಾಗಿದೆ. ಅದಾಗಿ ವರ್ಷಗಳ ಬಳಿಕ ಇದೀಗ ಮೊಟೇರಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆತಿಥ್ಯ ವಹಿಸಿಕೊಳ್ಳುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications