Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Manchester Test: ಯಶಸ್ವಿ ಜೈಸ್ವಾಲ್‌, ಸಾಯಿ ಸುದರ್ಶನ್‌ ಅರ್ಧಶತಕದ ಬಲ: ಸುಸ್ಥಿತಿಯಲ್ಲಿ ಭಾರತ

ಮ್ಯಾಂಚೆಸ್ಟರ್‌: ಭರವಸೆಯ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌ (58) ಹಾಗೂ ಸಾಯಿ ಸುದರ್ಶನ್‌ (61) ಇವರ ಭರ್ಜರಿ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 264 ರನ್‌ ಸೇರಿಸಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟಾಸ್‌ ಆತಿಥೇಯ ತಂಡದ ಪಾಲಾಗಿದೆ. ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಸೊಗಸಾದ ಆಟವನ್ನು ಆಡಿತು. ಟೀಮ್ ಇಂಡಿಯಾದ ಆರಂಭಿಕ ಆಟಗಾರರು ಕೆಚ್ಚೆದೆಯ ಆಟವನ್ನು ಆಡಿ ಮೊದಲಾವಧಿಯಲ್ಲಿ ವಿಕೆಟ್‌ ಬೀಳದಂತೆ ನೋಡಿಕೊಳ್ಳುವಲ್ಲಿ ಸಫಲರಾದರು. ಟೀಮ್ ಇಂಡಿಯಾದ ಆರಂಭಿಕರಾದ ಕೆಎಲ್ ರಾಹುಲ್‌ ಹಾಗೂ ಯಶಸ್ವಿ ಜೈಸ್ವಾಲ್‌ ಈ ಹಿಂದಿನ ಟೆಸ್ಟ್‌ ಪಂದ್ಯಗಳಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತು ಬ್ಯಾಟ್ ಮಾಡಿದರು. ಪರಿಣಾಮ ನೆಲಕಚ್ಚಿ ನಿಂತು ರನ್‌ ಕಲೆ ಹಾಕುವತ್ತ ಚಿತ್ತ ನೆಟ್ಟಿತು.

India vs England Day 1 Report of the Fourth Test

ಟೀಮ್ ಇಂಡಿಯಾದ ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ ಜೋಡಿ ಮೊದಲ ವಿಕೆಟ್‌ಗೆ ಸೊಗಸಾದ ಬ್ಯಾಟಿಂಗ್ ನಡೆಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ವಾತಾವರಣದ ಲಾಭ ಪಡೆದು ಭಾರತದ ಬ್ಯಾಟರ್‌ಗಳನ್ನು ಕಾಡಬೇಕು ಎಂಬ ಯೋಚನೆ ಆತಿಥೇಯ ತಂಡದ್ದಾಗಿತ್ತು. ಆದರೆ ಇವರ ಯೋಜನೆಯನ್ನು ಬುಡಮೇಲು ಮಾಡಿದ ಭಾರತದ ಆರಂಭಿಕ ಜೋಡಿ ಮೊದಲಾವಧಿಯಲ್ಲಿ ವಿಕೆಟ್‌ ಬೀಳದಂತೆ ನೋಡಿ ಕೊಳ್ಳುವಲ್ಲಿ ಯಶಸ್ವಿಯಾದರು. ಭೋಜನ ವಿರಾಮದ ವೇಳೆಗೆ ಟೀಮ್ ಇಂಡಿಯಾ ವಿಕೆಟ್‌ ನಷ್ಟವಿಲ್ಲದೆ 78 ರನ್‌ ಸಿಡಿಸಿ ಸುಸ್ಥಿತಿಯಲ್ಲಿತ್ತು.

ಭೋಜನ ವಿರಾಮದ ಬಳಿಕ ಕೆಎಲ್ ರಾಹುಲ್ ಸ್ಥಿರ ಬ್ಯಾಟಿಂಗ್ ಮಾಡುವ ಸೂಚನೆ ನೀಡಿದರು. ಇವರು 46 ರನ್‌ ಬಾರಿಸಿದ್ದಾಗ ಕ್ರಿಸ್‌ ವೋಕ್ಸ್‌ ತೋಡಿದ ಖೆಡ್ಡಾಗೆ ಬಲಿಯಾದರು. ಮೊದಲ ವಿಕೆಟ್‌ಗೆ ಆರಂಭಿಕರು 94 ರನ್‌ಗಳ ಕಾಣಿಕೆ ನೀಡಿತು. ಆರಂಭಿಕ ಯಶಸ್ವಿ ಜೈಸ್ವಾಲ್‌ ಕ್ಲಾಸಿಕ್ ಬ್ಯಾಟಿಂಗ್ ಮಾಡುತ್ತಿದ್ದರು. ಇವರು 58 ರನ್‌ ಬಾರಿಸಿ ಮುನ್ನುಗುತ್ತಿದ್ದಾಗ ಲಿಯಾಮ್ ಡಾಸನ್ ತೋಡಿದ ಖೆಡ್ಡಾಗೆ ಬಲಿಯಾದರು. ಟೀಮ್ ಇಂಡಿಯಾ ನಾಯಕ ಶುಭಮನ್‌ ಗಿಲ್‌ (12) ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.

India vs England Day 1 Report of the Fourth Test

ರಿಷಭ್‌ ಪಂತ್‌ಗೆ ಗಾಯ

ನಾಲ್ಕನೇ ವಿಕೆಟ್‌ಗೆ ಸಾಯಿ ಸುದರ್ಶನ್ ಹಾಗೂ ಉಪನಾಯಕ ರಿಷಭ್‌ ಪಂತ್ ಜೋಡಿ ಭಾರತ ತಂಡ ಹಾಕಿಕೊಂಡ ಯೋಜನೆಯಂತೆ ಬ್ಯಾಟ್ ಮಾಡಿತು. ಈ ಜೋಡಿಯನ್ನು ಕಟ್ಟಿ ಹಾಕಲು ಇಂಗ್ಲೆಂಡ್ ತಂಡ ಮಾಡಿಕೊಂಡ ಪ್ಲ್ಯಾನ್ ಎಲ್ಲ ಉಲ್ಟಾ ಆಯಿತು. ಈ ಜೋಡಿ 112 ಎಸೆತಗಳಲ್ಲಿ ಅಜೇಯ 72 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ರಿಷಭ್‌ ಪಂತ್ (ಅಜೇಯ 37) ಕ್ರಿಸ್‌ ವೋಕ್ಸ್‌ ಅವರ ಯಾರ್ಕರ್‌ ಲೆಂಥ್‌ ಎಸೆತವನ್ನು ಎದುರಿಸಲು ಹೋಗಿ ಗಾಯಕ್ಕೆ ತುತ್ತಾದರು. ಅಲ್ಲದೆ ರಿಷಭ್ ಪಂತ್‌ ತೀವ್ರ ಗಾಯಕ್ಕೆ ತುತ್ತಾಗಿದ್ದರಿಂದ, ಆಂಬುಲೇನ್ಸ್‌ನಿಂದ ಮೈದಾನದಿಂದ ಹೊರಕ್ಕೆ ಕರೆದುಕೊಂಡು ಹೋದರು.

ಸಾಯಿ ಅರ್ಧಶತಕ

ಟೀಮ್ ಇಂಡಿಯಾ ಪರ ಎರಡನೇ ಟೆಸ್ಟ್‌ ಆಡುತ್ತಿರುವ ಸಾಯಿ ಸುದರ್ಶನ್‌ ಅಮೋಘ ಪ್ರದರ್ಶನ ನೀಡಿದರು. ಇವರು 151 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 61 ರನ್‌ ಸಿಡಿಸಿ ಔಟ್ ಆದರು. ಆಲ್‌ರೌಂಡರ್‌ ರವೀಂದ್ರ ಜಡೇಜಾ (ಅಜೇಯ 19), ಶಾರ್ದೂಲ್‌ ಠಾಕೂರ್ (ಅಜೇಯ 19) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ನಾಯಕ ಬೆನ್‌ ಸ್ಟೋಕ್ಸ್‌ 2, ಲಿಯಾಮ್ ಡಾಸನ್, ಕ್ರಿಸ್‌ ವೋಕ್ಸ್ ತಲಾ ಒಂದು ವಿಕೆಟ್‌ ಪಡೆದರು.

Story first published: Wednesday, July 23, 2025, 23:02 [IST]
Other articles published on Jul 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+