ಭಾರತದ ವಿರುದ್ಧದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡ ಘೋಷಣೆ: ಜೋಫ್ರಾ ಆರ್ಚರ್ ಹೊರಕ್ಕೆ

ಭಾರತದ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಬಳಿಕ ಇದೀಗ ಏಕದಿನ ಸರಣಿಗೆ ಎರಡು ತಂಡಗಳು ಕೂಡ ಸಜ್ಜಾಗಿದೆ. ಪುಣೆಯಲ್ಲಿ ಮಾರ್ಚ್ 23ರಿಂದ ಆರಂಭವಾಗುವ ಈ ಸರಣಿಗೆ ಭಾನುವಾರ ಇಂಗ್ಲೆಂಡ್ ತಂಡದ ಸದಸ್ಯರನ್ನು ಘೋಷಣೆ ಮಾಡಲಾಗಿದೆ. ಈ ಸರಣಿಯಿಂದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಹೊರಗುಳಿದಿದ್ದಾರೆ.
ಜೋಫ್ರಾ ಆರ್ಚರ್ ಹೊರಗುಳಿಯುವ ಬಗ್ಗೆ ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಜೋಫ್ರಾ ಆರ್ಚರ್ ಬಲ ಮೊಣಕೈ ಗಾಯದ ಕಾರಣದಿಂದಾಗಿ ಮುಂದಿನ ಚಿಕಿತ್ಸೆ ಹಾಗೂ ಮೇಲ್ವಿಚಾರಣೆಗಾಗಿ ಇಂಗ್ಲೆಂಡ್‌ಗೆ ಮರಳಲಿದ್ದಾರೆ ಎಂದು ವಿವರಿಸಿದೆ. ಭಾರತದ ವಿರುದ್ಧದ ಟಿ20 ಸರಣಿಯಲ್ಲಿ ಪಾಲ್ಗೊಂಡಿದ್ದ ಆರ್ಚರ್ ಐದು ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದರು.
ಇಂಗ್ಲೆಂಡ್ ಏಕದಿನ ಸ್ಕ್ವಾಡ್ ಹೀಗಿದೆ:
ಇಯಾನ್ ಮಾರ್ಗನ್ (ನಾಯಕ), ಮೊಯೀನ್ ಅಲಿ, ಜೊನಾಥನ್ ಬೈರ್‌ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರ್ರನ್, ಟಾಮ್ ಕುರ್ರನ್, ಲಿಯಾಮ್ ಲಿವಿಂಗ್‌ಸ್ಟೋನ್, ಮ್ಯಾಟ್ ಪಾರ್ಕಿನ್ಸನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟಾಪ್ಲೆ, ಮಾರ್ಕ್ ವುಡ್
ಇಯಾನ್ ಮಾರ್ಗನ್ ನೇತೃತ್ವದ 14 ಆಟಗಾರರ ಜೊತೆಗೆ ಟಿ20 ತಂಡದಲ್ಲಿದ್ದ ಜೇಕ್ ಬಾಲ್, ಕ್ರಿಸ್ ಜೋರ್ಡಾನ್, ಡೇವಿಡ್ ಮಲನ್ ಕೂಡ ತಂಡದ ಜೊತೆಗೆ ಪ್ರಯಾಣವನ್ನು ಬೆಳೆಸಲಿದ್ದು ಮೀಸಲು ಆಟಗಾರರಾಗಿ ಇರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications