
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ 329 ರನ್‌ಗಳನ್ನು ಗಳಿಸಿ ಆಲೌಟ್ ಆಗಿದೆ. ಸ್ಪಿನ್ ಬೌಲಿಂಗ್ ವಿಭಾಗ ಹೆಚ್ಚಿನ ಯಶಸ್ಸನ್ನು ಪಡೆಯುತ್ತಿರುವುದು ಗಮನಾರ್ಹ ಸಂಗತಿಯಾಗಿದೆ. ಈ ಮಧ್ಯೆ ಇಂಗ್ಲೆಂಡ್ ಬೌಲಿಂಗ್ ಪಡೆ ವಿಶೇಷ ದಾಖಲೆಯೊಂದನ್ನು ಬರೆದಿದೆ.
ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಒಂದೇ ಒಂದು ಇತರೆ ರನ್‌ಗಳನ್ನು ನೀಡದೆ ದಾಖಲೆ ಬರೆದಿದೆ. ಎದುರಾಳಿ ಅತಿ ಹೆಚ್ಚು ರನ್‌ಗಳಿಸಿದ ವೇಳೆ ಯಾವುದೇ ಇತರೆ ರನ್ ನೀಡದ ತಂಡ ಎಂಬ ದಾಖಲೆಗೆ ಈ ಮೂಲಕ ಇಂಗ್ಲೆಂಡ್ ಪಾತ್ರವಾಗಿದೆ.
ಭಾರತ 329 ರನ್ ಗಳಿಸಿದ ಸಂದರ್ಭದಲ್ಲಿ ಇಂಗ್ಲಂಡ್ ಯಾವುದೇ ಇತರೆ ರನ್ ನೀಡದೆ ದಾಖಲೆ ಬರೆದಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಎರಡು ತಂಡಗಳು ಸೇರಿ ಒಟ್ಟು 52 ರನ್‌ಗಳನ್ನು ಇತರೆ ರನ್ ರೂಪದಲ್ಲಿ ನೀಡಿದ್ದವು.
ಈ ಮಧ್ಯೆ ಎರಡನೇ ದಿನದಾಟದಲ್ಲಿ ಟೀಮ್ ಇಂಡಿಯಾ ಮೊದಲ ದಿನದಾಟದ ಮೊತ್ತಕ್ಕೆ ಕೇವಲ 29 ರನ್ ಸೇರಿಸಲಷ್ಟೇ ಶಕ್ತವಾಯಿತು. ಈ ಸಂದರ್ಭದಲ್ಲಿ ತನ್ನ ಉಳಿದ ನಾಲ್ಕು ವುಕೆಟ್‌ಗಳನ್ನು ಅದು ಕಳೆದುಕೊಂಡಿದೆ. ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ 161 ರನ್ ಗಳಿಸಿದರೆ, ಅಜಿಂಕ್ಯ ರಹಾನೆ 67 ರನ್ ಗಳಿಸಿದರು. ರಿಷಭ್ ಪಂತ್ 58 ರನ್ ಗಳಿಸಿ ಅಜೇಯವಾಗುಳಿದರು.
ಇನ್ನು ಇಂಗ್ಲೆಂಡ್ ತನ್ನ ಮೊದಲ ದಿನದಾಟವನ್ನು ಆರಂಬಿಸಿದರೆ. ಆರಂಭದಿಂದಲೇ ಆಘಾತವನ್ನು ಅನುಭವಿಸಿದ ಇಂಗ್ಲೆಂಡ್ ಭೋಜನ ವಿರಾಮದ ವೇಳೆಗೆ 4 ವಿಕೆಟ್ ಕಳೆದುಕೊಂಡು 39 ರನ್ ಗಳಿಸಿದೆ. ಈ ಮೂಲಕ ಎರಡನೇ ದಿನದಾಟದಲ್ಲಿ ಸಂಕಷ್ಟವನ್ನು ಎದುರಿಸುತ್ತಿದೆ.