For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಮೊದಲೆರಡು ಟೆಸ್ಟ್‌ ಪಂದ್ಯಗಳಿಗೆ ಇಂಗ್ಲೆಂಡ್ ತಂಡ ಪ್ರಕಟ

India vs England: England name 17-member squad for first two Tests

ಲಂಡನ್: ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಿಗೆ ಇಂಗ್ಲೆಂಡ್‌ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) 17 ಆಟಗಾರರ ತಂಡ ಪ್ರಕಟಿಸಿದೆ. ಇತ್ತಂಡಗಳ ಈ ಟೆಸ್ಟ್‌ ಸರಣಿ ಆಗಸ್ಟ್ 4ರಂದು ಟ್ರೆಂಟ್‌ ಬ್ರಿಡ್ಜ್‌ನಲ್ಲಿನ ಪಂದ್ಯದೊಂದಿಗೆ ಆರಂಭಗೊಳ್ಳಲಿದೆ.

ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜಾನಿ ಬೇರ್ಸ್ಟೋವ್ ಮತ್ತು ಸ್ಯಾಮ್ ಕರನ್ ಮತ್ತೆ ಇಂಗ್ಲೆಂಡ್ ಟೆಸ್ಟ್‌ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಈ ಆಟಗಾರರು ಆಡಿರಲಿಲ್ಲ. ಹಸೀದ್ ಹಮೀದ್ ಮತ್ತು ಆಲಿ ರಾಬಿನ್ಸನ್ ಕೂಡ 17 ಮಂದಿಯ ಇಂಗ್ಲೆಂಡ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.

ಆದರೆ ಇಂಗ್ಲೆಂಡ್ ತಂಡದ ಪ್ರಮುಖ ವೇಗಿ ಜೋಫ್ರಾ ಆರ್ಚರ್ ಮತ್ತು ಆಲ್ ರೌಂಡರ್ ಕ್ರಿಸ್ ವೋಕ್ಸ್ ಇನ್ನೂ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆರ್ಚರ್ ಮೊಣಕೈ ಗಾಯಕ್ಕೀಡಾಗಿದ್ದರೆ ವೋಕ್ಸ್ ಹಿಂಗಾಲಿನ ಗಾಯಕ್ಕೀಡಾಗಿದ್ದರು. ಅವರ ಹೆಸರುಗಳು ಪ್ರಕಟಿತ ತಂಡದಲ್ಲಿಲ್ಲ.

ಆರಂಭಿಕ 2 ಟೆಸ್ಟ್‌ ಪಂದ್ಯಗಳಿಗೆ ಇಂಗ್ಲೆಂಡ್ ತಂಡ
ಜೋ ರೂಟ್ (ಯಾರ್ಕ್‌ಷೈರ್) ಕ್ಯಾಪ್ಟನ್, ಜೇಮ್ಸ್ ಆಂಡರ್ಸನ್ (ಲ್ಯಾನ್ಸೆಷೈರ್), ಜಾನಿ ಬೈರ್‌ಸ್ಟೋವ್ (ಯಾರ್ಕ್‌ಷೈರ್), ಡೊಮ್ ಬೆಸ್ (ಯಾರ್ಕ್‌ಷೈರ್), ಸ್ಟುವರ್ಟ್ ಬ್ರಾಡ್ (ನಾಟಿಂಗ್ಹ್ಯಾಮ್‌ಶೈರ್), ರೋರಿ ಬರ್ನ್ಸ್ (ಸರ್ರೆ), ಜೋಸ್ ಬಟ್ಲರ್ (ಲ್ಯಾನ್ಸೆಷೈರ್), ಝ್ಯಾಕ್ ಕ್ರಾಲೆ (ಕೆಂಟ್), ಸ್ಯಾಮ್ ಕರನ್ (ಸರ್ರೆ), ಹಸೀಬ್ ಹಮೀದ್ (ನಾಟಿಂಗ್ಹ್ಯಾಮ್ಶೈರ್), ಡಾನ್ ಲಾರೆನ್ಸ್ (ಎಸೆಕ್ಸ್), ಜ್ಯಾಕ್ ಲೀಚ್ (ಸಮರ್‌ಸೆಟ್), ಆಲ್ಲಿ ಪೋಪ್ (ಸರ್ರೆ), ಆಲ್ಲಿ ರಾಬಿನ್ಸನ್ (ಸಸೆಕ್ಸ್), ಡೊಮ್ ಸಿಬ್ಲಿ (ವಾರ್ವಿಕ್‌ಶೈರ್), ಬೆನ್ ಸ್ಟೋಕ್ಸ್ (ಡರ್ಹಾಮ್), ಮಾರ್ಕ್ ವುಡ್ (ಡರ್ಹಾಮ್).

Story first published: Thursday, July 22, 2021, 10:44 [IST]
Other articles published on Jul 22, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+