ಟೆಸ್ಟ್ ಸರಣಿ ವೇಳೆ ಹೊಟ್ಟೆ ನೋವಿನಿಂದ ಬಳಲಿದ್ದರಂತೆ ಆಂಗ್ಲರು

ನವದೆಹಲಿ: ಭಾರತ ಪ್ರವಾಸದಲ್ಲಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಆತಿಥೇಯ ಭಾರತದ ವಿರುದ್ಧ ಇತ್ತೀಚೆಗಷ್ಟೇ 4 ಪಂದ್ಯಗಳ ಟೆಸ್ಟ್ ಸರಣಿ ಮುಗಿಸಿತ್ತು. ಈ ಟೆಸ್ಟ್ ಸರಣಿ ವೇಳೆ ಆಂಗ್ಲ ಆಟಗಾರರ ತೂಕದಲ್ಲಿ ಗಣನೀಯ ಇಳಿಕೆಯಾಗಿತ್ತಂತೆ. ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಈ ವಿಚಾರ ಹೇಳಿಕೊಂಡಿದ್ದಾರೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್ ವೇಳೆ ತನ್ನ ತಂಡದ ಸಹ ಆಟಗಾರರು ಏಕಾಏಕಿ ತೂಕ ಇಳಿಕೆ ಸಮಸ್ಯೆ ಎದುರಿಸಿದರು. ಪಂದ್ಯಕ್ಕೂ ಮುನ್ನ ಪ್ರವಾಸಿಗರು ಹೊಟ್ಟೆ ನೋವು ಅನುಭವಿಸಿದ್ದರು. ಹೀಗಾಗಿ ತೂಕದಲ್ಲಿ ಇಳಿಕೆಯಾಗಿತ್ತು ಎಂದು ಸ್ಟೋಕ್ಸ್ ಹೇಳಿದ್ದಾರೆ.
ಡೈಲಿ ಮಿರರ್ ಜೊತೆ ಮಾತನಾಡಿದ ಸ್ಟೋಕ್ಸ್, 'ನಾನು ಕೇವಲ ಒಂದೇ ವಾರದಲ್ಲಿ 5 ಕೆಜಿ ತೂಕ ಕಳೆದುಕೊಂಡಿದ್ದೆ. ಡಾಮ್ ಸಿಬ್ಲಿ 4 ಕೆಜಿ, ಜಿಮ್ಮಿ ಆ್ಯಂಡರ್ಸನ್ 3 ಕೆಜಿ ತೂಕ ಕಳೆದುಕೊಂಡಿದ್ದರು. ಇನ್ನು ಜ್ಯಾಕ್ ಲೀಚ್ ಹೆಚ್ಚಿನ ಸಮಯವನ್ನು ಶೌಚಾಲಯದಲ್ಲಿ ಕಳೆದಿದ್ದರು,' ಎಂದು ಸ್ಟೋಕ್ಸ್ ವಿವರಿಸಿದ್ದಾರೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-1ರ ಜಯ ದಾಖಲಿಸಿತ್ತು. ಈ ಸರಣಿ ಜಯದೊಂದಿಗೆ ಭಾರತ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಮಾರ್ಚ್ 12ರಿಂದ ಇಂಗ್ಲೆಂಡ್-ಭಾರತ ಮಧ್ಯೆ 5 ಪಂದ್ಯಗಳ ಟಿ20ಐ ಸರಣಿ ಆರಂಭಗೊಳ್ಳಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications