ಭಾರತ vs ಇಂಗ್ಲೆಂಡ್ ಎರಡನೇ ಟೆಸ್ಟ್: ತಂಡಕ್ಕೆ ಈ ಬಲಿಷ್ಠ ಆಲ್‌ರೌಂಡರ್ ಸೇರಿಸಿಕೊಳ್ಳಲು ಮುಂದಾದ ಇಂಗ್ಲೆಂಡ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ತಂಡದಲ್ಲಿ ಭಾರೀ ಬದಲಾವಣೆಯನ್ನು ಮಾಡಲು ಮುಂದಾಗಿರುವ ಇಂಗ್ಲೆಂಡ್ ಪ್ರಮುಖ ಆಲ್ ರೌಂಡರ್ ಆಟಗಾರನನ್ನು ತಂಡಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲು ತೀರ್ಮಾನಿಸಿದೆ.
ಹೌದು ಭಾರತದ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್ ತಂಡದ ಪ್ರಮುಖ ಆಲ್ ರೌಂಡರ್ ಮೊಯಿನ್ ಅಲಿಯನ್ನು ಕರೆತರಲು ಇಂಗ್ಲೆಂಡ್ ತಂಡ ತೀರ್ಮಾನಿಸಿದೆ. ಇಂಗ್ಲೆಂಡ್ ತನ್ನ ಕಳೆದ 3 ಟೆಸ್ಟ್ ಪಂದ್ಯಗಳಲ್ಲಿಯೂ ಯಾವುದೇ ಪ್ರಮುಖ ಸ್ಪಿನ್ ಬೌಲರ್‌ನ್ನು ಕಣಕ್ಕಿಳಿಸಿಯೇ ಇಲ್ಲ. ಭಾರತದ ವಿರುದ್ಧ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೂ ಸಹ ಇಂಗ್ಲೆಂಡ್ ತಂಡ ಪ್ರಮುಖ ಸ್ಪಿನ್ ಬೌಲರ್‌ನ್ನು ಆಡುವ ಬಳಗದಲ್ಲಿ ಸೇರಿಸಿಕೊಂಡಿರಲಿಲ್ಲ. ಆದರೆ ಮುಂಬರಲಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸ್ಪಿನ್ ಆಲ್ ರೌಂಡರ್ ಆಟಗಾರನಾದ ಮೊಯಿನ್ ಅಲಿಯನ್ನು ತಂಡಕ್ಕೆ ಸೇರಿಸಿಕೊಳ್ಳುವ ಚಿಂತನೆಯಲ್ಲಿದೆ ಇಂಗ್ಲೆಂಡ್.
ಇನ್ನು ಮೊಯಿನ್ ಅಲಿ ಇಂಗ್ಲೆಂಡ್ ತಂಡದ ಪರ ಕೊನೆಯದಾಗಿ ಕಳೆದ ಫೆಬ್ರವರಿ ತಿಂಗಳಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಪಾಲ್ಗೊಂಡಿದ್ದರು, ಈ ಸರಣಿಯಲ್ಲಿಯೂ ಕೇವಲ ಒಂದೇ ಒಂದು ಪಂದ್ಯದಲ್ಲಿ ಮಾತ್ರ ಆಡುವ ಅವಕಾಶವನ್ನು ಪಡೆದುಕೊಂಡಿದ್ದ ಮೊಯಿನ್ ಅಲಿ ನಂತರ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ನಿಯಮದನುಸಾರ ವಿಶ್ರಾಂತಿ ತೆಗೆದುಕೊಳ್ಳಲು ತಂಡದಿಂದ ಹೊರನಡೆದರು. ಇದೀಗ ಮತ್ತೆ ಮೊಯಿನ್ ಅಲಿಗೆ ತಂಡದಲ್ಲಿ ಅವಕಾಶ ನೀಡಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತೀರ್ಮಾನಿಸಿದ್ದು ಆಗಸ್ಟ್ 12ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊಯಿನ್ ಅಲಿ ಆಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇಂಗ್ಲೆಂಡ್ ತಂಡಕ್ಕಿದೆ ಸ್ಪಿನ್ ಬೌಲರ್ ಅಗತ್ಯತೆ
ಮೊದಲೇ ಹೇಳಿದ ಹಾಗೆ ಇಂಗ್ಲೆಂಡ್ ತಂಡ ತನ್ನ ಕಳೆದ 3 ಟೆಸ್ಟ್ ಪಂದ್ಯಗಳಲ್ಲಿ ಪ್ರಮುಖ ಸ್ಪಿನ್ ಬೌಲರ್‌ನ್ನು ಕಣಕ್ಕಿಳಿಸಿರಲಿಲ್ಲ. ಹೀಗಾಗಿ ಸ್ಪಿನ್ ಬೌಲರ್ ಅಗತ್ಯತೆ ಇಂಗ್ಲೆಂಡ್ ತಂಡಕ್ಕಿದ್ದು ಮೊಯಿನ್ ಅಲಿ ಇಂಗ್ಲೆಂಡ್ ತಂಡವನ್ನು ಸೇರ್ಪಡೆಗೊಳ್ಳುವುದರಿಂದ ಸ್ಪಿನ್ ವಿಭಾಗ ಬಲಿಷ್ಠವಾಗಲಿದೆ. ಇನ್ನು ಭಾರತ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೂ ಸಹ ಸ್ಪಿನ್ ಬೌಲರ್‌ಗಳ ಅಭಾವ ಇಂಗ್ಲೆಂಡ್ ತಂಡದಲ್ಲಿ ಕಾಡಿದ್ದು ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಮೊಯಿನ್ ಅಲಿ ಆಗಮನವಾಗುವುದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಲಿದೆ ಎಂದೇ ಹೇಳಬಹುದಾಗಿದೆ.

ಕೇವಲ ಬೌಲಿಂಗ್ ವಿಭಾಗ ಮಾತ್ರವಲ್ಲ ಬ್ಯಾಟಿಂಗ್ ವಿಭಾಗ ಕೂಡ ಬಲಿಷ್ಠವಾಗುವುದು ಖಚಿತ
ಇನ್ನು ಇಂಗ್ಲೆಂಡ್ ತಂಡಕ್ಕೆ ಮೊಯಿನ್ ಅಲಿಯನ್ನು ಮರು ಸೇರ್ಪಡೆ ಮಾಡಿಕೊಳ್ಳುವುದರಿಂದ ಕೇವಲ ಬೌಲಿಂಗ್ ವಿಭಾಗ ಮಾತ್ರವಲ್ಲದೆ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ವಿಭಾಗ ಕೂಡ ಬಲಿಷ್ಠ ಆಗುವುದು ಖಚಿತ. ಅದರಲ್ಲಿಯೂ ಮೊಯಿನ್ ಅಲಿ ಟೆಸ್ಟ್ ಕ್ರಿಕೆಟ್‍ನಲ್ಲಿ ಜವಾಬ್ದಾರಿಯುತ ಆಟವನ್ನು ಆಡುವಂತಹ ಆಟಗಾರನಾಗಿದ್ದು ಒಟ್ಟಾರೆಯಾಗಿ ಮೊಯಿನ್ ಅಲಿ ಆಗಮನ ಇಂಗ್ಲೆಂಡ್ ತಂಡಕ್ಕೆ ಅಧಿಕ ಬಲ ಸೇರಿದಂತಾಗುತ್ತದೆ.

ಭಾರತ vs ಇಂಗ್ಲೆಂಡ್ ಎರಡನೇ ಟೆಸ್ಟ್ ಯಾವಾಗ?
ಮೊಯಿನ್ ಅಲಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಇದೇ ಆಗಸ್ಟ್ 12 ಗುರುವಾರದಂದು ಆರಂಭವಾಗಲಿದ್ದು ಈ ಪಂದ್ಯ ಕ್ರಿಕೆಟ್ ಕಾಶಿ ಎಂದೇ ಖ್ಯಾತಿಯನ್ನು ಹೊಂದಿರುವ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications