For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಇಂಗ್ಲೆಂಡ್‌ ವೇಗಿ ಮಾರ್ಕ್‌ ವುಡ್ 3ನೇ ಟೆಸ್ಟ್‌ಗೆ ಅಲಭ್ಯ

India vs England: England seamer Mark Wood will miss the third Test

ಲಂಡನ್: ದ್ವಿತೀಯ ಟೆಸ್ಟ್‌ನಲ್ಲಿ ಪ್ರವಾಸಿ ಭಾರತದ ವಿರುದ್ಧ ಸೋತು ಒತ್ತಡದಲ್ಲಿರುವ ಇಂಗ್ಲೆಂಡ್‌ಗೆ ಮತ್ತೊಂದು ಹಿನ್ನಡೆಯ ಸಂಗತಿ ಎದುರಾಗಿದೆ. ಇಂಗ್ಲೆಂಡ್ ವೇಗಿ ಮಾರ್ಕ್‌ ವುಡ್ ಮೂರನೇ ಟೆಸ್ಟ್‌ ಪಂದ್ಯದಿಂದ ಹೊರ ಬಿದ್ದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ ವೇಳೆ ವುಡ್ ಗಾಯಕ್ಕೀಡಾಗಿದ್ದರು. ನಾಲ್ಕನೇ ದಿನದಾಟದ ವೇಳೆ ಗಾಯ ಮಾಡಿಕೊಂಡಿದ್ದ ವುಡ್ ತೃತೀಯ ಪಂದ್ಯದಲ್ಲಿ ಆಡುತ್ತಿಲ್ಲ.

ಲಾರ್ಡ್ಸ್‌ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ನ ನಾಲ್ಕನೇ ದಿನದಾಟದ ವೇಳೆ ಮಾರ್ಕ್‌ ವುಡ್ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಆ ಗಾಯದಿಂದ ವುಡ್ ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ. ಅವರಿನ್ನು ಫಿಟ್ನೆಸ್ ಅಭ್ಯಾಸ ನಡೆಸಬೇಕಿದೆ. ಸಂಪೂರ್ಣ ಚೇತರಿಸಲು ವುಡ್ ಕೊಂಚ ಸಮಯ ತೆಗೆದುಕೊಳ್ಳಲಿದ್ದಾರೆ.

ಮಾರ್ಕ್‌ ವುಡ್‌ಗೆ ಗಾಯ ಆಗಿದ್ದು ಹೇಗೆ?
ಲಾರ್ಡ್ಸ್ ಟೆಸ್ಟ್‌ ವೇಳೆ ಭಾರತದ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಬಾರಿಸಿದ ಚೆಂಡನ್ನು ತಡೆಯಲು ಯತ್ನಿಸುವಾಗ ಡೈವ್ ಹಾರಿದ್ದರಿಂದ ಮಾರ್ಕ್ ವುಡ್‌ ಭುಜಕ್ಕೆ ಗಾಯವಾಗಿತ್ತು. ಹೀಗಾಗಿ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯಲಿರುವ ತೃತೀಯ ಟೆಸ್ಟ್‌ ಪಂದ್ಯದಲ್ಲಿ ವುಡ್ ಆಡುತ್ತಿಲ್ಲ. ಭಾರತದ 74ನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಬ್ಯಾಟಿಂಗ್‌ ವೇಳೆ ರನ್ ಉಳಿಸಲು ಯತ್ನಿಸಿ ವುಡ್ ಗಾಯ ಮಾಡಿಕೊಂಡಿದ್ದರು. ಗಾಯವಾಗಿದ್ದಾಗ ಫಿಸಿಯೋ ಪರಿಶೀಲಿಸಿದ ಬಳಿಕ ವುಡ್ ನಾಲ್ಕನೇ ದಿನದಾಟದ ವೇಳೆ ವುಡ್ ಮೈದಾನದಿಂದ ಹೊರ ನಡೆದಿದ್ದರು. ಆದರೂ ಐದನೇ ದಿನದಾಟದ ವೇಳೆ ವುಡ್ ಬೌಲಿಂಗ್ ಮಾಡಿದ್ದರಾದರೂ ಬರೀ 4 ಓವರ್ ಎಸೆದಿದ್ದರು. ಅದೂ ಕೂಡ ಭಾರತದ ಲೋವರ್‌ ಆರ್ಡರ್‌ಗೆ ಬೌಲಿಂಗ್ ಮಾಡಿದ್ದರಷ್ಟೇ. ಆ ಪಂದ್ಯದಲ್ಲಿ ಭಾರತ 151 ರನ್‌ ಗಳ ಭರ್ಜರಿ ಜಯ ಗಳಿಸಿತ್ತಲ್ಲದೆ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0ಯ ಮುನ್ನಡೆಯೂ ಗಿಟ್ಟಿಸಿಕೊಂಡಿತ್ತು.

ಇಂಗ್ಲೆಂಡ್‌ಗೆ ಗಾಯದ ಮೇಲೆ ಬರೆ ಎಳೆದಂತೆ
ಇಂಗ್ಲೆಂಡ್ ತಂಡದಲ್ಲಿ ಈಗಾಗಲೇ ಪ್ರಮುಖ ಆಟಗಾರರಿಲ್ಲ. ಆಲ್ ರೌಂಡರ್ ಬೆನ್ ಸ್ಟೋಕ್ಸ್, ವೇಗಿ ಸ್ಟುವರ್ಟ್ ಬ್ರಾಡ್, ಜೋಫ್ರಾ ಆರ್ಚರ್ ತಂಡದಿಂದ ಹೊರಗಿದ್ದಾರೆ. ಜೇಮ್ಸ್ ಆ್ಯಂಡರ್ಸನ್ ಕೂಡ ತಂಡದಿಂದ ಹೊರ ಬೀಳುವುದರಲ್ಲಿದ್ದರಾದರೂ ಹಿಂದಿನ ಪಂದ್ಯದಲ್ಲಿ ಆ್ಯಂಡರ್ಸನ್ ಆಡಿದ್ದರು. ಆದರೆ ಈಗ ವುಡ್ ಕೂಡ ತಂಡದಿಂದ ಹೊರ ಬೀಳುತ್ತಿರುವುದು ಇಂಗ್ಲೆಂಡ್‌ಗೆ ಇನ್ನಷ್ಟು ಒತ್ತಡ ನೀಡಿದೆ. ವುಡ್ ಬದಲಿಗೆ ಮೂರನೇ ಟೆಸ್ಟ್‌ ವೇಳೆ ಸಕೀಬ್ ಮಹಮೂದ್ ತಂಡದ ಪರ ಆಡಲಿದ್ದಾರೆ. ಇತ್ತಂಡಗಳ ಮಧ್ಯೆ ನಡೆದಿರುವ ಎರಡು ಟೆಸ್ಟ್‌ ಪಂದ್ಯಗಳಲ್ಲಿ ಆರಂಭಿಕ ಟೆಸ್ಟ್‌ ಡ್ರಾ ಅನ್ನಿಸಿಕೊಂಡಿತ್ತು. ಅದೂ ಕೂಡ ತೀವ್ರ ಮಳೆಯಿಂದಾಗಿ ಆಗಾಗ ಪಂದ್ಯಕ್ಕೆ ಅಡ್ಡಿಯಾಗಿದ್ದರಿಂದ ಅಂತಿಮವಾಗಿ ಫಲಿತಾಂಶ ಡ್ರಾದೊಂದಿಗೆ ಕೊನೆಗೊಂಡಿತ್ತು. ದ್ವಿತೀಯ ಪಂದ್ಯದಲ್ಲಿ ಇಂಗ್ಲೆಂಡ್ ಆರಂಭಿಕ ಇನ್ನಿಂಗ್ಸ್‌ನಲ್ಲಿ 27 ರನ್ ಮುನ್ನಡೆ ಸಾಧಿಸಿತ್ತಾದರೂ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭಾರತ ವಿರೋಚಿತ ಆಟ ನೀಡಿದ್ದರಿಂದ ಸೋತು ಆಘಾತ ಅನುಭವಿಸಿತ್ತು.

ಭಾರತ ಸರಣಿ ಗೆದ್ದರೆ ವಿಶೇಷ ದಾಖಲೆ ನಿರ್ಮಾಣ
ಭಾರತ vs ಇಂಗ್ಲೆಂಡ್ ತೃತೀಯ ಪಂದ್ಯ ಲೀಡ್ಸ್‌ನ ಹೆಡಿಂಗ್ಲಿ ಸ್ಟೇಡಿಯಂನಲ್ಲಿ ಆಗಸ್ಟ್ 25ರಿಂದ ಆಗಸ್ಟ್ 25ರ ವರೆಗೆ ನಡೆಯಲಿದೆ. ಭಾರತೀಯ ಕಾಲಮಾನ 3.30 PMಗೆ ಪಂದ್ಯ ಶುರುವಾಗಲಿದೆ. ತೃತೀಯ ಟೆಸ್ಟ್‌ನಲ್ಲೂ ಭಾರತ ಗೆದ್ದರೆ ಭಾರತದ ಆತ್ಮವಿಶ್ವಾಸ ಇನ್ನೂ ಹೆಚ್ಚಿ ಇಂಗ್ಲೆಂಡ್ ಮತ್ತೆ ಮಾನಸಿಕವಾಗಿ ಕುಸಿಯಲಿದೆ. ಇದು ಭಾರತ ವಿಶೇಷ ದಾಖಲೆ ಬರೆಯಲು ದಾರಿಯೂ ಆಗಬಹುದು. ಯಾಕೆಂದರೆ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿಯೊಂದನ್ನು ಗೆಲ್ಲದೆ ಭಾರತ ತಂಡ ಬರೋಬ್ಬರಿ 14 ವರ್ಷಗಳನ್ನು ಕಳೆದಿದೆ. ಕಳೆದ ಬಾರಿ ಭಾರತೀಯ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಗೆದ್ದಿದ್ದೆಂದರೆ 2007ರಲ್ಲಿ. 2007ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ರಾಹುಲ್ ದ್ರಾವಿಡ್ ನಾಯಕತ್ವದ ತಂಡ ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ಗೆದ್ದಿತ್ತು. ಈ ವೇಳೆ ಎರಡು ಪಂದ್ಯಗಳು ಡ್ರಾ ಅನ್ನಿಸಿದ್ದವು. ದ್ವಿತೀಯ ಟೆಸ್ಟ್‌ನಲ್ಲಿ ಭಾರತ 7 ವಿಕೆಟ್ ಜಯ ಗಳಿಸಿತ್ತು. ಅದಾದ ಬಳಿಕ 2011, 2014 ಮತ್ತು 2018ರಲ್ಲಿ ಭಾರತ ತಂಡ ಇಂಗ್ಲೆಂಡ್‌ನಲ್ಲಿ ಟೆಸ್ಟ್‌ ಸರಣಿ ಆಡಿತ್ತು. ಇದರಲ್ಲಿ ಯಾವುದರಲ್ಲೂ ಗೆದ್ದಿಲ್ಲ. ಹೀಗಾಗಿ ಈ ಬಾರಿ ಗೆಲ್ಲಲು ತಂಡಕ್ಕೆ ಅವಕಾಶವಿದೆ. ವಿರಾಟ್ ಕೊಹ್ಲಿ ಪಡೆ ಗೆಲ್ಲುತ್ತಾ ಕಾದು ನೋಡಬೇಕಿದೆ.

Story first published: Monday, August 23, 2021, 17:43 [IST]
Other articles published on Aug 23, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+