ಭಾರತ vs ಇಂಗ್ಲೆಂಡ್: ಆಂಗ್ಲ ಆಟಗಾರರು ಕೊರೊನಾ ಪರೀಕ್ಷೆಯಲ್ಲಿ ಪಾಸ್

ಚೆನ್ನೈ: ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಫೆಬ್ರವರಿ 5ರಿಂದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಸರಣಿಗೂ ಮುನ್ನ ಇಂಗ್ಲೆಂಡ್ ಇಡೀ ತಂಡಕ್ಕೆ ಕೋವಿಡ್-19 ಪರೀಕ್ಷೆ ಮಾಡಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಎಲ್ಲಾ ಆಟಗಾರರ ಫಲಿತಾಂಶ ನೆಗೆಟಿವ್ ಬಂದಿದೆ.
ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ಮತ್ತು ಭಾರತೀಯ ಆಟಗಾರರು 6 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಿದ್ದಾರೆ. ಈ ಮಧ್ಯೆ ಆಟಗಾರರಿಗೆ ಒಟ್ಟಿಗೆ 3 ಬಾರಿ ಕೊರೊನಾವೈರಸ್ ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ ಮೂರೂ ಪರೀಕ್ಷೆಗಳೂ ನೆಗೆಟಿವ್ ಬಂದಿವೆ.
ಕೊರೊನಾ ಪರೀಕ್ಷೆಯ ಫಲಿತಾಂಶಗಳು ನೆಗೆಟಿವ್ ಬಂದಿರುವುದರಿಂದ ಇಂಗ್ಲೆಂಡ್ ಆಟಗಾರರು ಶುಕ್ರವಾರ (ಫೆಬ್ರವರಿ 1) ಅಭ್ಯಾಸದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಲ್ ರೌಂಡರ್ ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಮತ್ತು ರೋರಿ ಬರ್ನ್ಸ್ ಶ್ರೀಲಂಕಾ ಪ್ರವಾಸದಲ್ಲಿ ಪಾಲ್ಗೊಂಡಿರಲಿಲ್ಲ. ಅವರು ತಂಡದ ಜೊತೆಗೂ ಬಂದಿರಲಿಲ್ಲ. ಮೂವರೂ ಈಗಾಗಲೇ ಅಭ್ಯಾಸ ನಡೆಸುತ್ತಿದ್ದಾರೆ.
'ಇಂಗ್ಲೆಂಡ್‌ನ ಎಲ್ಲಾ ಪಿಸಿಆರ್ ಫರೀಕ್ಷೆಗಳ ಫಲಿತಾಂಶ ನೆಗೆಟಿವ್ ಬಂದಿದೆ. ಇಂಗ್ಲೆಂಡ್ ತಂಡದ ಕ್ವಾರಂಟೈನ್ ಕೂಡ ಮುಗಿದಿದ್ದು ಇಡೀ ತಂಡ ಶುಕ್ರವಾರದಿಂದ ಅಭ್ಯಾಸ ನಡೆಸಲಿದೆ,' ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್‌ನ ವಕ್ತಾರರು ಮಾಹಿತಿ ನೀಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications