ಭಾರತ vs ಇಂಗ್ಲೆಂಡ್: 5 ಪಂದ್ಯಗಳ ಟಿ20ಐ ಸರಣಿಗೆ ಆಂಗ್ಲ ತಂಡ ಪ್ರಕಟ

ಬೆಂಗಳೂರು: ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ಕ್ರಿಕೆಟ್ ತಂಡ ಸದ್ಯ ಆತಿಥೇಯ ಭಾರತದ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಈ ಟೆಸ್ಟ್ ಸರಣಿ ಮುಕ್ತಾಯದ ಬಳಿಕ 5 ಪಂದ್ಯಗಳ ಟಿ20ಐ ಸರಣಿ ಆರಂಭಗೊಳ್ಳಲಿದೆ. ಈ ಸರಣಿ ಮಾರ್ಚ್ 12ರಿಂದ ಆರಂಭಗೊಳ್ಳಲಿದೆ. ಈ ಕುತೂಹಲಕಾರಿ ಟಿ20ಐ ಸರಣಿಗಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, 15 ಜನರ ತಂಡ ಪ್ರಕಟಿಸಿದೆ.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಚೆನ್ನೈನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 227 ರನ್ ಗೆಲುವಿನೊಂದಿಗೆ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. ಈ ಸರಣಿಯ ಫಲಿತಾಂಶ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಸ್ಪರ್ಧಿಯನ್ನು ನಿರ್ಧರಿಸಲಿದೆ.
ಟೆಸ್ಟ್ ಸರಣಿ, ಟಿ20ಐ ಸರಣಿಯ ಬಳಿಕ ಭಾರತ-ಇಂಗ್ಲೆಂಡ್ ಮಧ್ಯೆ ಮೂರು ಪಂದ್ಯಗಳ ಏಕದಿನ ಸರಣಿ ಕೂಡ ನಡೆಯಲಿದೆ.

15 ಜನರ ಟಿ20ಐ ತಂಡ
ಮಾರ್ಚ್ 12ರಿಂದ ಮಾರ್ಚ್ 20ರ ವರೆಗೆ ನಡೆಯಲಿರುವ ಟಿ20ಐ ಸರಣಿಗಾಗಿ ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) 15 ಜನರ ತಂಡ ಪ್ರಕಟಿಸಿದೆ. ಇಯಾನ್ ಮಾರ್ಗನ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಟಿ20ಐ ಎಲ್ಲಾ ಪಂದ್ಯಗಳು ಅಹ್ಮದಾಬಾದ್‌ನ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಬಲಿಷ್ಠ ಇಂಗ್ಲೆಂಡ್ ತಂಡ
ಭಾರತ ವಿರುದ್ಧದ ಟಿ20ಐ ಸರಣಿಗಾಗಿ ಇಂಗ್ಲೆಂಡ್ ಪ್ರಕಟಿಸಿರುವ ತಂಡ ಸಾಕಷ್ಟು ಬಲಿಷ್ಠವಾಗಿದೆ. ಜಾನಿ ಬೇರ್ಸ್ಟೋವ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಜೇಸನ್ ರಾಯ್, ಬೆನ್ ಸ್ಟೋಕ್ಸ್ ಇಂಥ ಆಟಗಾರರು ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಜೇಕ್ ಬಾಲ್, ಮ್ಯಾಟ್ ಪಾರ್ಕಿನ್‌ಸನ್ ಮೀಸಲು ಆಟಗಾರರ ಸಾಲಿನಲ್ಲಿದ್ದಾರೆ.

ಟಿ20ಐಗೆ ಇಂಗ್ಲೆಂಡ್ ತಂಡ
* ಇಯಾನ್ ಮಾರ್ಗನ್ (ಸಿ), ಮೊಯೀನ್ ಅಲಿ, ಜೋಫ್ರಾ ಆರ್ಚರ್, ಜೊನಾಥನ್ ಬೇರ್ಸ್ಟೋವ್, ಸ್ಯಾಮ್ ಬಿಲ್ಲಿಂಗ್ಸ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಟಾಮ್ ಕುರನ್, ಕ್ರಿಸ್ ಜೋರ್ಡಾನ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಲನ್, ಆದಿಲ್ ರಶೀದ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ರೀಸ್ ಟೋಪ್ಲೆ, ಮಾರ್ಕ್ ವುಡ್.
* ಮೀಸಲು: ಜೇಕ್ ಬಾಲ್, ಮ್ಯಾಟ್ ಪಾರ್ಕಿನ್‌ಸನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications