ಪಂದ್ಯದ ಮಧ್ಯೆಯೇ ವಿರಾಟ್ ಕೊಹ್ಲಿ ಬಳಿಗೆ ಬಂದ ಅಭಿಮಾನಿ: ವಿಡಿಯೋ

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಐಯಂನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಮೂರನೇ ಟೆಸ್ಟ್ ಪಂದ್ಯದ ವೇಳೆ ಕ್ರಿಕೆಟ್ ಅಭಿಮಾನಿಯೊಬ್ಬರು ಆಟ ಮಧ್ಯೆಯೇ ಮೈದಾನಕ್ಕೆ ನುಗ್ಗಿ ಬಂದ ಘಟನೆ ನಡೆದಿದೆ. ನಿಯಮ ಮೀರಿ ಮೈದಾನಕ್ಕೆ ನುಗ್ಗಿ ಬಂದ ಅಭಿಮಾನಿ ವಿರಾಟ್ ಕೊಹ್ಲಿ ಬಳಿಗೆ ಬರಲು ಯತ್ನಿಸಿದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
ನಿಯಮ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿ ಬಂದ ಅಭಿಮಾನಿ ವಿರಾಟ್ ಕೊಹ್ಲಿಯ ಹತ್ತಿರಕ್ಕೆ ಬರಲೆತ್ನಿಸಿದ್ದು ಗಮನಿಸಿದ ಕೊಹ್ಲಿ ಕೂಡಲೇ ಎರಡು ಹೆಜ್ಜೆ ಹಿಂದೆ ಸರಿದು, 'ದೂರ ನಿಲ್ಲು, ಇಲ್ಲಿಂದ ಹೊರಟು ಹೋಗು' ಅಂದರು. ಕೊಹ್ಲಿ ನಡೆ ಕಂಡು ಕೊರೊನಾ ಮುನ್ನೆಚ್ಚರಿಕಾ ಕ್ರಮಗಳ ಅರಿವಾದ ಅಭಿಮಾನಿ ಮತ್ತೆ ಅಲ್ಲಿಂದ ವಾಪಸ್ಸಾದರು.
ಕೊಹ್ಲಿಯ ಸಮೀಪಕ್ಕೆ ಬಂದ ಅಭಿಮಾನಿ ಅಲ್ಲಿಂದ ಹೊರಡುವಾಗ ಸ್ಟೇಡಿಯಂ ಒಳಗಿದ್ದ ಪ್ರೇಕ್ಷಕರ ಕಿರುಚಾಟ ಜೋರಾಗಿತ್ತು. ಆದರೆ ಕೊರೊನಾ ಕಾರಣದಿಂದ ಆಟಗಾರರು ಮತ್ತು ಅಂಪೈರ್‌ಗಳು ಹೊರಗಿನ ಯಾರೇ ವ್ಯಕ್ತಿಗಳನ್ನು ಮುಟ್ಟುವಂತಿಲ್ಲ ಎಂದು ಸ್ಪಷ್ಟ ನಿಯಮ ಇರುವುದರಿಂದ ಅಭಿಮಾನಿಗೆ ಕೊಹ್ಲಿಯನ್ನು ಸ್ಪರ್ಷಿಸಲಾಗಲಿಲ್ಲ.
ಬಯೋ ಬಬಲ್ ನಿಯಮ ಮೀರಿ ಸ್ಟೇಡಿಯಂ ಒಳಗೆ ಬಂದ ಅಭಿಮಾನಿಯ ಬಗ್ಗೆ ಮಾಹಿತಿ ಕಲೆಹಾಕಿ ಆತನ ವಿರುದ್ಧ ತಕ್ಕ ಕ್ರಮ ಜರುಗಿಸುವುದಾಗಿ ಗುಜರಾತ್ ಕ್ರಿಕೆಟ್ ಅಸೋಸಿಯೇಶನ್ (ಜಿಸಿಎ) ಹೇಳಿದೆ. ಮೊಟೆರಾದಲ್ಲಿ ಮೂರನೇ ಟೆಸ್ಟ್ ಪಂದ್ಯಗಳಿಗೆ 50 ಶೇ. ಪ್ರೇಕ್ಷಕರಿಗೆ ಅವಕಾಶ ನೀಡಲಾಗಿತ್ತು. ಸ್ಟೇಡಿಯಂನ ಒಟ್ಟು ಸಾಮರ್ಥ್ಯ 110000.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications